Select Your Language

Notifications

webdunia
webdunia
webdunia
webdunia

ಮೋದಿ ಪ್ರಧಾನ ಮಂತ್ರಿ ಆದರೆ ದೇಶದ ಆರ್ಥಿಕ ವ್ಯವಸ್ಥೆ ಸುಧಾರಿಸಲಿದೆಯೆ ?

ಮೋದಿ ಪ್ರಧಾನ ಮಂತ್ರಿ ಆದರೆ ದೇಶದ ಆರ್ಥಿಕ ವ್ಯವಸ್ಥೆ ಸುಧಾರಿಸಲಿದೆಯೆ ?
, ಗುರುವಾರ, 27 ಫೆಬ್ರವರಿ 2014 (14:56 IST)
-ಅರುಣಕುಮಾರ ಧುತ್ತರಗಿ
PR

ಪ್ರಸಕ್ತದಲ್ಲಿ ಭಾರತದ ಆರ್ಥಿಕ ವ್ಯವಸ್ಥೆ ಮಂದಗತಿಯಲ್ಲಿ ಸಾಗುತ್ತಿದೆ . ದೇಶದ ಪ್ರಧಾನ ಮಂತ್ರಿ ಮನಮೋಹನ್‌‌ ಸಿಂಗ್ ಕೂಡ ಅರ್ಥಶಾಸ್ತ್ರಜ್ಞರಾಗಿದ್ದರೂ ಕೂಡ ಆರ್ಥಿಕ ವ್ಯವಸ್ಥೆ ಸುಧಾರಿಸುತ್ತಿಲ್ಲ , ದಿನದಿಂದ ದಿನಕ್ಕೆ ಎಲ್ಲ ವಸ್ತುಗಳ ಬೆಲೆಗಳು ಗಗನಕ್ಕೆರುತ್ತಿವೆ.

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದೆ . ಆದರು ಕೂಡ ಕಾಂಗ್ರೆಸ್‌ ಸರ್ಕಾರಕ್ಕೆ ದೇಶದ ಆರ್ಥಿಕ ವ್ಯವಸ್ಥೆ ಸುಧಾರಿಸುವ ಗೋಜಿಗೆ ಹೋಗುತ್ತಿಲ್ಲ, ವಿಶೇಷ ಏನೆಂದರೆ ಕಾಂಗ್ರೆಸ್‌ ಪಕ್ಷದ ಉಪಾಧ್ಯಕ್ಷ ರಾಹುಲ ಗಾಂಧಿ ಕೂಡ ಅರ್ಥಶಾಸ್ತ್ರ ಪದವೀಧರರು ಆದರು ಕೂಡ ದೇಶದ ಅರ್ಥವ್ಯವಸ್ಥೆ ಸುಧಾರಿಸುತ್ತಿಲ್ಲ.

ಇದೆಲ್ಲದರ ಮದ್ಯೆ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದೆ. ರಾಹುಲ್ ಮತ್ತು ಮೋದಿ ಇಬ್ಬರು ಕೂಡ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ . ಮೋದಿ ಅಲೆಯ ನಡುವೆ ಅವರು ಪ್ರಧಾನ ಮಂತ್ರಿ ಆಗಲಿದ್ದಾರೆ ಎಂದು ಸಮೀಕ್ಷೆಗಳು ತಿಳಿಸುತ್ತಿವೆ. ಆದರೆ ಇವರಿಬ್ಬರಿಂದ ದೇಶದ ಆರ್ಥಿಕ ವ್ಯವಸ್ಥೆ ಸುಧಾರಿಸುತ್ತದೆಯೆ ? ಎಂಬ ಚರ್ಚೆಗಳು ಸಾಕಷ್ಟು ನಡೆಯುತ್ತಿವೆ.

ಅಬ್ಬರದ ಪ್ರಚಾರ ನಡೆಸುತ್ತಿರುವ ಗುಜರಾತಿನ ಮುಖ್ಯ ಮಂತ್ರಿ ಮತ್ತು ಬಿಜೆಪಿಯ ನರೇಂದ್ರ ಮೋದಿ ಒಂದು ವೇಳೆ ಪ್ರಧಾನ ಮಂತ್ರಿ ಆದರೆ , ದೇಶದ ಆರ್ಥಿಕತೆ ತಕ್ಷಣವೇ ಸುಧಾರಿಸುವುದಿಲ್ಲ ಎಂದು ರೆಟಿಜ್ ಮತ್ತು ಸಂಶೋಧನಾ ಎಜನ್ಸಿ ಮೂಡಿಸ್‌ ಕಂಪೆನಿ ತಿಳಿಸಿದೆ. ಎಕೆಂದರೆ ಈ ಮಂದಗತಿ 2015 ರವರೆಗೆ ಇರಲಿದೆ ಎಂದು ಕಂಪೆನಿಯ ಸಮೀಕ್ಷೆ ತಿಳಿಸಿದೆ.
webdunia
PR

' ಇಂಡಿಯಾ ಅಂಡರ್‌‌ಹ್ವೆಲಮ್‌‌' ಶೀರ್ಷಿಕೆಯ ಈ ವರದಿಯಲ್ಲಿ ಮುಂಬರುವ ದಿನಗಳಲ್ಲಿ ಆರ್ಥಿಕ ವ್ಯವಸ್ಥೆಯಲ್ಲಿ ಸುಧಾರಣೆ ಕಾಣುತ್ತದೆ ಮತ್ತು ಉದ್ಯೋಗಾವಕಾಶಗಳು ಕೂಡ ಸಿಗಲಿವೆ ಆದರೆ ಇದೆಲ್ಲ ಅತಿ ಶೀಘ್ರದಲ್ಲಿ ಆಗಲು ಸಾದ್ಯವಿಲ್ಲ, ಸುಧಾರಿಸಲು ಸಾಕಷ್ಟು ಸಮಯ ಬೇಕು ಎಂದು ವರದಿ ತಿಳಿಸಿದೆ.

webdunia
PR

ಅಬ್ಬರದ ಪ್ರಚಾರ ನಡೆಸುತ್ತಿರುವ ಗುಜರಾತಿನ ಮುಖ್ಯ ಮಂತ್ರಿ ಮತ್ತು ಬಿಜೆಪಿಯ ನರೇಂದ್ರ ಮೋದಿ ಒಂದು ವೇಳೆ ಪ್ರಧಾನ ಮಂತ್ರಿ ಆದರೆ , ದೇಶದ ಆರ್ಥಿಕತೆ ತಕ್ಷಣವೇ ಸುಧಾರಿಸುವುದಿಲ್ಲ ಎಂದು ರೆಟಿಜ್ ಮತ್ತು ಸಂಶೋಧನಾ ಎಜನ್ಸಿ ಮೂಡಿಸ್‌ ಕಂಪೆನಿ ತಿಳಿಸಿದೆ. ಎಕೆಂದರೆ ಈ ಮಂದಗತಿ 2015 ರವರೆಗೆ ಇರಲಿದೆ ಎಂದು ಕಂಪೆನಿಯ ಸಮೀಕ್ಷೆ ತಿಳಿಸಿದೆ.

' ಇಂಡಿಯಾ ಅಂಡರ್‌‌ಹ್ವೆಲಮ್‌‌' ಶೀರ್ಷಿಕೆಯ ಈ ವರದಿಯಲ್ಲಿ ಮುಂಬರುವ ದಿನಗಳಲ್ಲಿ ಆರ್ಥಿಕ ವ್ಯವಸ್ಥೆಯಲ್ಲಿ ಸುಧಾರಣೆ ಕಾಣುತ್ತದೆ ಮತ್ತು ಉದ್ಯೋಗಾವಕಾಶಗಳು ಕೂಡ ಸಿಗಲಿವೆ ಆದರೆ ಇದೆಲ್ಲ ಅತಿ ಶೀಘ್ರದಲ್ಲಿ ಆಗಲು ಸಾದ್ಯವಿಲ್ಲ, ಸುಧಾರಿಸಲು ಸಾಕಷ್ಟು ಸಮಯ ಬೇಕು ಎಂದು ವರದಿ ತಿಳಿಸಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್ಥಿಕ ವ್ಯವಸ್ಥೆ ಸುಧಾರಿಸಲು ಸಾಕಷ್ಟು ಅವಧಿ ತಗೆದುಕೊಳ್ಳುತ್ತದೆ. ಪ್ರಾರಂಭದಲ್ಲಿ ದೇಶದ ಆರ್ಥಿಕ ವ್ಯವಸ್ಥೆ ಶೇ.4.8 ರಷ್ಟಿರುವ ಸಾಧ್ಯತೆಗಳಿವೆ ಎಂದು ವರದಿ ತಿಳಿಸಿದೆ.
webdunia
PR

ಗುಜರಾತ್ ರಾಜ್ಯವನ್ನು ಅಭಿವೃದ್ದಿ ಮಾಡಿದ ಮೋದಿಗೆ ಈಡೀ ದೇಶದ ಅಬಿವೃದ್ದಿ ಕಷ್ಟವಾಗಬುದು ಎಂದು ಜನರ ಬಾಯಲ್ಲಿ ಬರುತ್ತಿರುವ ಮಾತಿದೆ . ಆದರೆ ಮುಂದಿನ ದಿನಗಳಲ್ಲಿ ಮೋದಿ ಉತ್ತಮ ಆಡಳಿತ ನಡೆಸುವ ಸಾದ್ಯತೆಗಳಿವೆ . ಆದರೆ ರಾಹುಲ್‌ ಗಾಂಧಿ ಕೂಡ ಉತ್ತಮ ಉದ್ದೇಶ ಇಟ್ಟು ಕೊಂಡು ಚುನಾವಣೆ ಎದುರಿಸಲಿದ್ದಾರೆ , ಆದರೆ ರಾಹುಲ್‌ ಗಾಂಧಿಯಿಂದ ಆರ್ಥಿಕ ವ್ಯವಸ್ಥೆ ಸುಧಾರಿಸುವುದೇ ? ಎಂಬ ಪ್ರಶ್ನೆ ಕೂಡ ಹೊರಬರುತ್ತಿವೆ. ರಾಹುಲ್‌ ಗಾಂಧಿಯ ಸುಧಾರಣಾ ನೀತಿ ಇತರ ಮಂತ್ರಿ ಮತ್ತು ಸಂಸದರು ಒಪ್ಪಿಕೊಳ್ಳುತ್ತಾರಾ ಎಂಬ ಅನುಮಾನ ಕೂಡ ಇದೆ.

ಸತತ 10 ವರ್ಷದ ಹಿಂದಿನಿಂದ ಕಾಂಗ್ರೆಸ ಪಕ್ಷ ಆಡಳಿತ ನಡೆಸುತ್ತಿದೆ . ಆದರೆ ಈ ಸಮಯದಲ್ಲಿ ಬೆಲೆ ಗಗನಕ್ಕೆರಿದೆ. ಇದರಿಂದ ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಆಡಳಿತಕ್ಕೆ ಬಂದರೆ ಬೆಲೆ ಏರಿಕೆ ನಿಲ್ಲುತ್ತದೆಯೆ ? ಎಂಬ ಪ್ರಶ್ನೆ ಜನರ ಮನಸ್ಸಿನಲ್ಲಿದೆ. ಇದನ್ನು ಮಾಡುತ್ತವೇ, ಅದನ್ನು ಮಾಡುತ್ತೇವೆ ಎಂದು ರಾಹುಲ್ ಹೇಳಿಕೆ ನೀಡುತ್ತಿದ್ದಾರೆ. ಆದರೆ ಆಮ್ ಆದ್ಮಿ ಕೇಳುವ ಪ್ರಶ್ನೆ ಏನೆಂದರೆ ಕಳೆದ 10 ವರ್ಷ ನೀವು ಮಾಡಿದ್ದೇನು. ಯಾವ ಬೆಲೆಗಳ ಇಳಿಕೆ ಮಾಡಿದ್ದೀರಿಎಂದು ಕೇಳುತ್ತಿದ್ದಾರೆ.

ಪೇಟ್ರೋಲ್‌ನಿಂದ ದಿನ ನಿತ್ಯ ಬಳಸುವ ಬಹುತೇಕ ಎಲ್ಲಾ ವಸ್ತುಗಳ ಬೆಲೆ ಗಗಕ್ಕೆರಿವೆ . ತೈಲ ಬೆಲೆಯಂತು ಗಗನಕ್ಕೆ ಏರಿಕೆಯಾಗಿದೆ. ಉಪ್ಪಿನಿಂದ ಹಿಡಿದು ಅಕ್ಕಿಯವರೇಗೆ ಎಲ್ಲ ವಸ್ತುಗಳ ಬೆಲೆ ಏರುತ್ತಿವೆ. ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೊದಲಿನ ತರಹ ಬೆಲೆ ಏರಿಕೆ ಮಾಡಿದರೆ ಹೇಗೆ ,, ಏಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ .
webdunia
PR

ಆದರೆ ಮೋದಿ ಅಧಿಕಾರಕ್ಕೆ ಬಂದರೆ ದೇಶದ ಆರ್ಥಿಕ ವ್ಯವಸ್ಥೆ ಸುಧಾರಿಸಬಹುದೇ ? ಮೋದಿ ಗುಜರಾತನ್ನು ಅಭಿವೃದ್ಧಿ ಪಥಕ್ಕೆ ತಗೆದುಕೊಂಡು ಹೋಗುತ್ತಿದ್ದಾರೆ . ಆದರೆ ಬಿಜೆಪಿಯ ಇತರ ಸಚಿವರು ಮತ್ತು ಸಂಸದರು ಮೋದಿ ನಿಲುವನ್ನು ಬೆಂಬಲಿಸುತ್ತವೆಯೇ .. ? ಎಂಬ ಅನುಮಾನ ಕೂಡ ವ್ಯಕ್ತವಾಗುತ್ತಿದೆ. ಸಭೆಯಲ್ಲಿ ಘರ್ಜಿಸುವುದಕ್ಕು ,ದೇಶವನ್ನಾಳುವುದಕ್ಕು ಸಾಕಷ್ಟು ವ್ಯತ್ಯಾಸ ಇದೆ .

ಒಟ್ಟಾರೆಯಾಗಿ ರಾಹುಲ್ ಮತ್ತು ಮೋದಿ ನುಡಿದಂತೆ ನಡೆದುಕೊಳ್ಳುತ್ತಾರೆಯೆ ? ಎಲ್ಲ ಬೆಲೆಗಳ ಇಳಿಕೆಯಾಗುತ್ತದೆಯೆ..? ಇಂತಹ ಪ್ರಶ್ನೆ ಕೂಡ ಕಾಡುತ್ತದೆ. ನೀವೇನಂತಿರಿ ..?

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada