Webdunia - Bharat's app for daily news and videos

Install App

ಮೊದಲ ದಿನವೇ ಕ್ರೆಡೈ ರಿಯಾಲ್ಟಿ ಎಕ್ಸ್‌ಪೋಗೆ ಉತ್ತಮ ಪ್ರತಿಕ್ರಿಯೆ

Webdunia
ಶನಿವಾರ, 29 ಮಾರ್ಚ್ 2014 (18:33 IST)
PR
ಈ ವರ್ಷದ ಕ್ರೆಡೈ ರಿಯಾಲ್ಟಿ ಎಕ್ಸ್‌ಪೋ ಇಂದಿನಿಂದ ಶುರುವಾಗಿದೆ. ಮೊದಲ ದಿನವೇ ಎಕ್ಸ್‌ಪೋಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬನ್ನೇರುಘಟ್ಟ ರಸ್ತೆಯ ಐಐಎಂಬಿ ಸಮೀಪದ ಕಲ್ಯಾಣಿ ಕಲಾಮಂದಿರದಲ್ಲಿ ಈ ಎಕ್ಸ್‌ಪೋ ನಡೆಯುತ್ತಿದೆ.

ಈ ಬಾರಿಯ ಎಕ್ಸ್‌ಪೋದಲ್ಲಿ ೩೧ ಡೆವೆಲಪರ್‌ಗಳು ಮತ್ತು ೩ ಬ್ಯಾಂಕ್‌ಗಳು ಭಾಗವಹಿಸಿವೆ. ಶ್ರೀ. ಕೆ.ಕೆ ಮಾಲ್ಪಾನಿ, ಸಂಸ್ಥಾಪಕ ಅಧ್ಯಕ್ಷ, ಕ್ರೆಡೈ ಬೆಂಗಳೂರು ಸಮಾರಂಭವನ್ನು ಉದ್ಘಾಟಿಸಿದರು. ಶ್ರೀ ಸಿ.ಎನ್ ಗೋವಿಂದರಾಜು, ಅಧ್ಯಕ್ಷ, ಕ್ರೆಡೈ ಬೆಂಗಳೂರು, ಶ್ರೀ ಅನಿಲ್ ನಾಯಕ್, ಸಿಇಓ, ಕ್ರೆಡೈ ಬೆಂಗಳೂರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಕೆ.ಕೆ. ಮಾಲ್ಪಾನಿ, ಸಂಸ್ಥಾಪಕ ಅಧ್ಯಕ್ಷ, ಕ್ರೆಡೈ ಬೆಂಗಳೂರು " ಇದು ಈ ವರ್ಷದ ಮೊದಲ ಎಕ್ಸ್‌ಪೋ. ಈ ಎಕ್ಸ್‌ಪೋದಲ್ಲಿ ಭಾಗವಹಿಸಿರುವ ಎಲ್ಲಾ ಡೆವೆಲಪರ್‌ಗಳಿಗೆ ಕ್ರೆಡೈ ಧನ್ಯವಾದ ತಿಳಿಸಲು ಬಯಸುತ್ತದೆ. ಈ ಜಾಗದಲ್ಲಿ ಈ ಎಕ್ಸ್‌ಪೋಗೆ ಇರುವ ಡಿಮ್ಯಾಂಡ್‌ನಿಂದಾಗಿ ನಾವು ಈ ವರ್ಷನೂ ಎಕ್ಸ್‌ಪೋನ ಇಲ್ಲೇ ನಡೆಸುತ್ತಿದ್ದೇವೆ" ಎಂದರು.

ಇನ್ನು ಪ್ರದರ್ಶನದ ಬಗ್ಗೆ ಮಾತನಾಡಿದ ಶ್ರೀ ಸಿ.ಎನ್ ಗೋವಿಂದರಾಜು, ಅಧ್ಯಕ್ಷ, ಕ್ರೆಡೈ ಬೆಂಗಳೂರು "ಇದು ಕ್ರೆಡೈ ನಡೆಸುತ್ತಿರುವ ಅದ್ಭುತವಾದ ಪ್ರದರ್ಶನ. ಈ ಬಾರಿ ೩೧ ಡೆವೆಲಪರ್‌ಗಳು ಈ ಪ್ರದರ್ಶನದಲ್ಲಿ ಭಾಗವಹಿಸಿದ್ದಾರೆ. ಡೆವೆಲಪರ್‌ಗಳಿಗೆ ತಮ್ಮ ಪ್ರಾಜೆಕ್ಟ್‌ಗಳನ್ನು ತೋರಿಸಲು ಇದು ಉತ್ತಮ ವೇದಿಕೆ" ಎಂದು ತಿಳಿಸಿದರು,.

ಇನ್ನು ಸ್ಥಳದ ಆಯ್ಕೆಯ ಬಗ್ಗೆ ಮಾತನಾಡಿದ ಶ್ರೀ ಅನಿಲ್ ನಾಯಕ್, ಸಿಇಓ, ಕ್ರೆಡೈ ಬೆಂಗಳೂರು "ಈ ಜಾಗಕ್ಕೆ ತುಂಬಾ ಬೇಡಿಕೆ ಇದೆ. ನಮ್ಮ ಕಸ್ಟಮರ್‌ಗಳು ಈ ಜಾಗದಲ್ಲಿ ಎಕ್ಸ್‌ಪೋ ನಡೆಸುವಂತೆ ನಮ್ಮನ್ನು ಕೇಳಿಕೊಂಡಿದ್ದಾರೆ. ಆದ್ದರಿಂದ ಇದೇ ಜಾಗದಲ್ಲಿ ನಾವು ಮತ್ತೆ ಈ ಬಾರಿಯ ರಿಯಾಲ್ಟಿ ಎಕ್ಸ್‌ಪೋ ಹಮ್ಮಿಕೊಂಡಿದ್ದೇವೆ" ಎಂದರು.

ಕ್ರೆಡೈ ರಿಯಾಲ್ಟಿ ಎಕ್ಸ್‌ಪೋದ ಸಮಾರೋಪ ಭಾನುವಾರ, ೩೦ ಮಾರ್ಚ್ ೨೦೧೪ ರಂದು ಕಲ್ಯಾಣಿ ಕಲಾ ಮಂದಿರದಲ್ಲಿ ನಡೆಯಲಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments