Select Your Language

Notifications

webdunia
webdunia
webdunia
webdunia

ಮಲಬಾರ್‌ ಗೋಲ್ಡ್‌ ಮಾರುಕಟ್ಟೆ ವಿಸ್ತರಣೆ ಯೋಜನೆ

ಮಲಬಾರ್‌ ಗೋಲ್ಡ್‌ ಮಾರುಕಟ್ಟೆ ವಿಸ್ತರಣೆ ಯೋಜನೆ
ದುಬಾಯಿ , ಶನಿವಾರ, 31 ಮಾರ್ಚ್ 2012 (09:47 IST)
PR
ದಕ್ಷಿಣ ಭಾರತ ಮತ್ತು ಮಧ್ಯಪೂರ್ವದ ಪ್ರಮುಖ ಚಿನ್ನ ಮತ್ತು ವಜ್ರಾಭರಣ ವ್ಯಾಪಾರ ಸಂಸ್ಥೆಯಾಗಿರುವ ಮಲಬಾರ್‌ ಗೋಲ್ಡ್‌ ವಾರ್ಷಿಕ ವ್ಯವಹಾರವನ್ನು 30,000 ಕೋ. ರೂ.ಗೇರಿಸಿಕೊಳ್ಳುವ ಮಹತ್ವಾಕಾಂಕ್ಷೆಯ ನಾಲ್ಕು ವರ್ಷಗಳ ವಿಸ್ತರಣಾ ಯೋಜನೆಯನ್ನು ಅನಾವರಣಗೊಳಿಸಿದೆ.

ಮಳಿಗೆಗಳ ಸಂಖ್ಯೆಯನ್ನು 64ರಿಂದ 220ಕ್ಕೇರಿಸಿಕೊಳ್ಳುವುದು, 3500 ಕೋ. ರೂ. ಹೂಡಿಕೆ, 15,000 ಉದ್ಯೋಗ ಸೃಷ್ಟಿಯೊಂದಿಗೆ ಜಗತ್ತಿನ ಪ್ರಮುಖ ಆಭರಣ ಬ್ರಾಂಡ್‌ ಆಗಿ ಮಲಬಾರ್‌ ಗೋಲ್ಡ್‌ನ್ನು ರೂಪಿಸುವುದು ಈ ಯೋಜನೆಯ ಮುಖ್ಯ ಆಶಯಗಳು. ಈ ಉದ್ದೇಶಕ್ಕಾಗಿ ಮಲಬಾರ್‌ ಗೋಲ್ಡ್‌ನ್ನು ಇನ್ನುಮುಂದೆ ಮಲಬಾರ್‌ ಗೋಲ್ಡ್‌ ಆಂಡ್‌ ಡೈಮಂಡ್ಸ್‌ ಎನ್ನುವ ಹೊಸ ಹೆಸರಿನಿಂದ ಗುರುತಿಸಲಾಗುವುದು. ಹೊಸ ಹೆಸರನ್ನು ಪತ್ರಿಕಾಗೋಷ್ಠಿಯಲ್ಲಿ ಮಲಬಾರ್‌ ಗೋಲ್ಡ್‌ ಅಧ್ಯಕ್ಷ ಎಂಪಿ ಅಹ್ಮದ್‌ ಅನಾವರಣಗೊಳಿಸಿದರು.

ಮಲಬಾರ್‌ ಗೋಲ್ಡ್‌ಗೆ ಅಂತರಾಷ್ಟ್ರೀಯ ನೋಟ ದೊರಕಿಸಿಕೊಡುವ ಸಲುವಾಗಿ ಬ್ರಾಂಡ್‌ ಸ್ಥಿತ್ಯಂತರ ಮಾಡುತ್ತಿದ್ದೇವೆ. ವ್ಯವಹಾರ ಮತ್ತು ಸೇವೆಯಲ್ಲಿ ಮಲಬಾರ್‌ ಗೋಲ್ಡ್‌ನ್ನು ಜಗತ್ತಿನ ಅತ್ಯಂತ ಶ್ರೇಷ್ಠ ಮತ್ತು ದೊಡ್ಡ ಚಿನ್ನಾಭರಣ ಬ್ರಾಂಡ್‌ ಆಗಿ ಪರಿವರ್ತಿಸುವುದು ನಮ್ಮ ಗುರಿ ಎಂದು ಅಹ್ಮದ್‌ ತಿಳಿಸಿದ್ದಾರೆ.

ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲೇ ಮಲಬಾರ್‌ ಗೋಲ್ಡ್‌ ಆಭರಣಗಳು ಲಭ್ಯವಾಗಲಿವೆ. ಗ್ರಾಹಕರು ನೀಡುವ ಹಣಕ್ಕೆ ಅತ್ಯುತ್ತಮ ಬ್ರಾಂಡ್‌ ಮತ್ತು ಸೇವೆ ಲಭ್ಯವಾಗಲಿದೆ. ಸಮಕಾಲೀನ ಜಾಗತಿಕ ಮಾರುಕಟ್ಟೆಯ ಅಭಿರುಚಿಗನುಗುಣವಾದ ವಿಶ್ವದರ್ಜೆಯ ಗುಣಮಟ್ಟ ಮತ್ತು ವಿನ್ಯಾಸದ ಆಭರಣಗಳನ್ನು ಗ್ರಾಹಕರಿಗೆ ಒದಗಿಸಲಿದ್ದೇವೆ ಎಂದಿದ್ದಾರೆ.

ದಕ್ಷಿಣ ಏಶ್ಯಾ, ಮಧ್ಯ ಪೂರ್ವದ ಇತರ ದೇಶಗಳು, ಯುರೋಪ್‌ ಮತ್ತು ಅಮೆರಿಕದಲ್ಲಿ ಮಲಬಾರ್‌ ಗೋಲ್ಡ್‌ ಮಳಿಗೆ ಪ್ರಾರಂಭವಾಗಲಿದೆ ಎಂದು ತಿಳಿಸಿದ್ದಾರೆ.

Share this Story:

Follow Webdunia kannada