Select Your Language

Notifications

webdunia
webdunia
webdunia
webdunia

ಮನೆಸೇವಕರಿಗೆ ಕಡಿಮೆ ಸಂಬಳಕ್ಕೆ ಅಸಮಾನತೆ ಕಾರಣ'

ಮನೆಸೇವಕರಿಗೆ ಕಡಿಮೆ ಸಂಬಳಕ್ಕೆ ಅಸಮಾನತೆ ಕಾರಣ'
, ಭಾನುವಾರ, 2 ಮಾರ್ಚ್ 2014 (13:51 IST)
PR
PR
ನವದೆಹಲಿ: ಭಾರತದಲ್ಲಿ ಮನೆಸೇವಕರಿಗೆ ಕಡಿಮೆ ಸಂಬಳ ಕೊಡುವುದಕ್ಕೆ ಅಸಮಾನತೆ ಕಾರಣವಾಗಿದ್ದು, ಮನೆಸೇವಕರಿಗೆ ಸೂಕ್ತ ಸಂಬಳ ಖಾತರಿಗೆ ಐಎಲ್‌ಒ ಮನೆಸೇವಕರ ಒಪ್ಪಂದವನ್ನು ಅಂಗೀಕರಿಸಬೇಕಾದ ಅಗತ್ಯವಿದೆ ಎಂದು ಅರ್ಥಶಾಸ್ತ್ರದ ಪ್ರಾಧ್ಯಾಪಕ ಜಯತಿ ಘೋಷ್ ತಿಳಿಸಿದರು. ಭಾರತದಲ್ಲಿ ಅಸಮಾನತೆಯಿಂದ ಮನೆಕೆಲಸಕ್ಕೆ ಕಡಿಮೆ ಸಂಬಳ ನೀಡಲಾಗುತ್ತಿದೆ. ಮನೆಕೆಲಸದಿಂದ ರಾಷ್ಟ್ರೀಯ ಆದಾಯಕ್ಕೆ ಬರುತ್ತಿರುವ ಭಾರೀ ಕೊಡುಗೆಯಿಲ್ಲದೇ ಯಾವುದೇ ಸಮಾಜ ಉಳಿಯಲು ಸಾಧ್ಯವಿಲ್ಲ ಎಂದು ಘೋಷ್ `ಇನ್‌ವಿಸಿಬಲ್ ವರ್ಕರ್ಸ್: ರೈಟ್ಸ್, ಜಸ್ಟೀಸ್ ಮತ್ತು ಡಿಗ್ನಿಟಿ ಫಾರ್ ಡೊಮೆಸ್ಟಿಕ್ ವರ್ಕರ್ಸ್' ಕುರಿತು ವಿಶ್ವಸಂಸ್ಥೆ ಉಪನ್ಯಾಸದಲ್ಲಿ ಅವರು ಮಾತನಾಡುತ್ತಾ ತಿಳಿಸಿದರು.

ಐಎಲ್ಒ ಒಪ್ಪಂದದ ಅಂಗೀಕಾರದಿಂದ ಮನೆಸೇವಕರ ಜೀವನದಲ್ಲಿ ಸಂಪೂರ್ಣ ಬದಲಾವಣೆಯಾಗುತ್ತದೆ ಮತ್ತು ಉಳಿದ ಕೆಲಸಗಾರರಿಗೆ ಸಿಗುವ ಹಕ್ಕುಗಳು ಅವರಿಗೆ ಖಾತರಿಯಾಗುತ್ತದೆ ಎಂದು ಅವರು ನುಡಿದರು.ಮನೆಕೆಲಸದವರಿಗೂ ಕೂಡ ಸಮಂಜಸ ಗಂಟೆಗಳ ಕೆಲಸ, 24 ಗಂಟೆಗಳ ವಾರದ ರಜಾ, ಉದ್ಯೋಗದ ನಿಯಮಗಳ ಬಗ್ಗೆ ಸ್ಪಷ್ಟ ಮಾಹಿತಿ ಇರಬೇಕಾಗುತ್ತದೆ ಎಂದು ಅವರು ನುಡಿದರು.

Share this Story:

Follow Webdunia kannada