Select Your Language

Notifications

webdunia
webdunia
webdunia
webdunia

ಭಾರಿ ನಷ್ಟದಲ್ಲಿ ಏಸರ್‌ ಕಂಪ್ಯೂಟರ್‌ ಸಂಸ್ಥೆ.

ಭಾರಿ ನಷ್ಟದಲ್ಲಿ ಏಸರ್‌ ಕಂಪ್ಯೂಟರ್‌ ಸಂಸ್ಥೆ.
ತೈವಾನ್‌ , ಮಂಗಳವಾರ, 5 ನವೆಂಬರ್ 2013 (20:06 IST)
PTI
PTI
ತೈವಾನ್‌ ಮೂಲದ ಪ್ರತಿಷ್ಟಿತ ಕಂಪ್ಯೂಟರ್‌ ಪಿಸಿ ತಯಾರಿಕಾ ಸಂಸ್ಥೆ ಏಸರ್‌ ಇಂಕ್‌ ಇದೀಗ ಭಾರಿ ನಷ್ಟದಲ್ಲಿದೆ. ಜಗತ್ತಿನ ನಾಲ್ಕನೆಯ ಅತಿ ದೊಡ್ಡ ಪಿಸಿ ಪೂರೈಕೆ ಸಂಸ್ಥೆಯಾಗಿರುವ ಏಸರ್‌ ಸಂಸ್ಥೆಗೆ 446 ಮಿಲಿಯನ್‌ ಡಾಲರ್‌ ನಷ್ಟವಾಗಿದೆ. ಹೀಗಾಗಿ ನೈತಿಕ ಹೊಣೆ ಹೊತ್ತಿರುವ ಏಸರ್‌ ಸಂಸ್ಥೆಯ ಸಿಇಓ ತಮ್ಮ ಹುದ್ದೆಗೆ ರಾಜಿನಾಮೆ ಸಲ್ಲಿಸಿ ಮನೆಗೆ ನಡೆದಿದ್ದಾರೆ.

ಈ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿರುವ ಏಸರ್‌ ಸಂಸ್ಥೆಯ ಅಧ್ಯಕ್ಷರಾಗಿರುವ ಜಿಮ್‌ ವಾಂಗ್‌ " ಏಸರ್‌ ಸಂಸ್ಥೆ ನಷ್ಟದಲ್ಲಿ ಇರುವುದನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಏಸರ್‌ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಲ್ಲಿ ಶೇ 7 ರಷ್ಟು ಸಿಬ್ಬಂದಿಗಳನ್ನು ಮನೆಗೆ ಕಳಿಸಲು ನಿರ್ಧರಿಸಿದ್ದಾರೆ.

ಉದ್ಯೋಗಿಗಳ ಕಡಿತದಿಂದ ಸುಮಾರು 100 ಮಿಲಿಯನ್‌ ಹಣವನ್ನು ಉಳಿಸುವ ಭರವಸೆ ಏಸರ್‌ ಸಂಸ್ಥೆ ಹೊಂದಿದ್ದು, ಇದರಿಂದಾಗಿ ಸಂಸ್ಥೆಯ ನಷ್ಟವನ್ನು ಅಲ್ಪಮಟ್ಟಿಗೆ ಸರಿದೂಗಿಸುವ ಪ್ರಯತ್ನ ಮಾಡಲಾಗುವುದು ಎಂದು ಸಂಸ್ಥಾ ಮುಖ್ಯಸ್ಥರು ಹೇಳಿದ್ರು.

"Q3 ಕಾರ್ಯನಿರ್ವಾಹಕ ವಿಫಲವಾದ ಕಾರಣದಿಂದಾಗಿಯೇ ಸಂಸ್ಥೆಗೆ ಭಾರಿ ಹೊಡೆತ ಬಿದ್ದಿರುವುದು ತಿಳಿದುಬಂದಿದೆ. ಹೀಗಾಗಿ ವಿಂಡೋಸ್‌ 8.1 ಕಾರ್ಯನಿರ್ವಾಹಕವನ್ನು ಬಳಸುವುದರ ಮೂಲಕ ಸಂಸ್ಥೆಯನ್ನು ಮೇಲೆತ್ತುವ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದು ಅವರು ಹೇಳಿದ್ರು.

Share this Story:

Follow Webdunia kannada