Select Your Language

Notifications

webdunia
webdunia
webdunia
webdunia

ಭಾರತದಲ್ಲಿ ಅತಿ ವಿಶ್ವಾಸನೀಯ ಬ್ರಾಂಡ್‌ ಸಾಮ್‌‌ಸುಂಗ್

ಭಾರತದಲ್ಲಿ ಅತಿ ವಿಶ್ವಾಸನೀಯ ಬ್ರಾಂಡ್‌ ಸಾಮ್‌‌ಸುಂಗ್
, ಸೋಮವಾರ, 3 ಫೆಬ್ರವರಿ 2014 (13:45 IST)
PR
ನವದೆಹಲಿ : ದಕ್ಷಿಣ ಕೊರಿಯಾ ಇಲೆಕ್ಟ್ರಾನಿಕ್ಸ್‌ ಕಂಪೆನಿಯಾದ ಸಾಮ್‌‌ಸುಂಗ್ ಭಾರತದಲ್ಲಿ ಅತಿ ವಿಶ್ವಾಸನೀಯ ಬ್ರ್ಯಾಂಡ್‌ ಆಗಿದೆ. ಬ್ರ್ಯಾಂಡ್‌ ಟ್ರಸ್ಟ್‌ ರಿಪೋರ್ಟ್ 2014ರ ಅನುಸಾರ ಈ ಮಾಹಿತಿ ಹೊರ ಬಂದಿದೆ. ಎರಡನೇ ಮತ್ತು ಮೂರನೇಯ ವಿಶ್ವಾಸನೀಯ ಬ್ರ್ಯಾಂಡ್‌ ಸೋನಿ ಮತ್ತು ಟಾಟಾ ಕಂಪೆನಿ ಪಡೆದುಕೊಂಡಿದೆ.

ಕಳೆದ ವರ್ಷ ಈ ಮೂರು ಬ್ರ್ಯಾಂಡ್‌ಗಳು ಕ್ರಮವಾಗಿ ಎರಡನೇ , ಮೂರನೇ ಮತ್ತು ಐದನೇ ಸ್ಥಾನದಲ್ಲಿದ್ದವು. ಬ್ರ್ಯಾಂಡ್‌ ಟ್ರಸ್ಟ್‌‌ ರಿಪೋರ್ಟ್‌‌‌ ಕಳೆದ ನಾಲ್ಕು ವರ್ಷಗಳಲ್ಲಿ ಮಾಡಿದ ಅಧ್ಯಯನ ಆಧಾರದ ಮೇಲೆ ಒಟ್ಟು 100 ಕಂಪೆನಿಗಳಿಗೆ ಶ್ರೇಯಾಂಕವನ್ನು ನೀಡುತ್ತದೆ.

ದಕ್ಷಿಣ ಕೊರಿಯಾದ ಎಲ್‌ಜಿ ನಾಲ್ಕನೇ ಸ್ಥಾನದಲ್ಲಿದೆ ಮತ್ತು ನೋಕಿಯಾ ಐದನೇ ಸ್ಥಾನದಲ್ಲಿದೆ. ಕಂಪ್ಯೂಟರ್‌‌ ಕಂಪೆನಿಯಾದ ಹೆಚ್‌‌‌ಪಿ ಆರನೇ ಸ್ಥಾನದಲ್ಲಿದೆ. ಹೀರೋ 79 ಸ್ಥಾನದಿಂದ ಜಿಗಿದು 7ನೇ ಸ್ಥಾನಕ್ಕೆರಿದೆ. ಹೊಂಡಾ 8ನೇ, ರಿಲಾಯನ್ಸ್‌ 9ನೇ ಮತ್ತು ಮಹೇಂದ್ರಾ ಆಂಡ್‌ ಮಹೇಂದ್ರಾ 10 ನೇ ಸ್ಥಾನದಲ್ಲಿವೆ .

Share this Story:

Follow Webdunia kannada