Webdunia - Bharat's app for daily news and videos

Install App

ಬೆಂಗಳೂರಿನಲ್ಲಿ ಚರ್ಮ ಮತ್ತು ಕೂದಲು ಚಿಕಿತ್ಸೆಗಾಗಿ ಜೆನೆಟಿಕ್ ಪರೀಕ್ಷೆ

ಮೆರಿಸಿಸ್ ಥೆರಪ್ಯುಟಿಕ್ಸ್ ಜೊತೆ ಹೇರ್‌ಲೈನ್ ಇಂಟರ್‌ನ್ಯಾಷನಲ್ ಒಪ್ಪಂದ- ಎಂಒಯುಗೆ ಸಹಿ

Webdunia
ಮಂಗಳವಾರ, 10 ಡಿಸೆಂಬರ್ 2013 (14:26 IST)
PR
" ನಾನು 35 ವರ್ಷ ವಯಸ್ಸಿಗನಾಗಿದ್ದಾಗ ನನ್ನ ತಲೆಕೂದಲು ನಿಧಾನವಾಗಿ ಉದುರಲು ಆರಂಭಿಸಿತು. ಇದರಿಂದ ನಾನು ಚಿಂತಿತನಾದೆ. ಈ ಬಗ್ಗೆ ಹೇರ್‌ಲೈನ್ ಇಂಟರ್‌ನ್ಯಾಷನಲ್ ಕೂದಲು ಸಂಶೋಧನಾ ಚಿಕಿತ್ಸಾ ಕೇಂದ್ರದ ತಜ್ಞರ ಮೊರೆ ಹೋದೆ. ಹೇರ್ ಟ್ರಾನ್ಸ್‌ಪ್ಲಾಂಟ್ ಪರಿಣಿತ ಹಾಗೂ ಡರ್ಮಾಟೋ ತಜ್ಞ ಡಾ.ದಿನೇಶ್ ಅವರ ಸಲಹೆಯಂತೆ, ಅನುವಂಶಿಕ ಪರೀಕ್ಷೆ(ಜೆನೆಟಿಕ್ ಟೆಸ್ಟ್) ಮಾಡಿಸಿಕೊಳ್ಳಲು ನಿರ್ಧರಿಸಿದೆ. ಅದರಂತೆ ನನ್ನ ರಕ್ತದ ಮಾದರಿ ತೆಗೆದುಕೊಂಡು ಪರೀಕ್ಷೆ ನಡೆಸಿದಾಗ ನಾನು ೩೮ ವರ್ಷದ ವೇಳೆಗೆ ಸಂಪೂರ್ಣ ಕೂದಲು ಕಳೆದುಕೊಂಡು ಬೋಳಾಗುವುದು ತಿಳಿದುಬಂತು. ಈ ಆಧಾರದ ಮೇಲೆ ಸಮರ್ಪಕವಾದ ಚಿಕಿತ್ಸೆ ಪಡೆಯುತ್ತಿದ್ದೇನೆ.-ಕುಶಾಲಪ್ಪ.

ಜೆನೆಟಿಕ್ ಚಿಕಿತ್ಸೆ ಹೇಗೆ ಜನರ ಕೂದಲು ಮತ್ತು ಚರ್ಮದ ಚಿಕಿತ್ಸೆಗೆ ನೆರವಾಗುತ್ತದೆ ಎಂಬುದಕ್ಕೆ ಕುಶಾಲಪ್ಪ ಒಂದು ಉದಾಹರಣೆ ಮಾತ್ರ. ಹೇರ್‌ಲೈನ್ ಇಂಟರ್‌ನ್ಯಾಷನಲ್ ಹೇರ್ ರಿಸರ್ಚ್ ಮತ್ತು ಟ್ರೀಟ್‌ಮೆಂಟ್ ಸೆಂಟರ್ ಇದೀಗ ಮೆರಿಸಿಸ್ ಥೆರಪ್ಯುಟಿಕ್ಸ್ ಜೊತೆ ಒಪ್ಪಂದ ಮಾಡಿಕೊಂಡು ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಜೆನೆಟಿಕ್ ಪರೀಕ್ಷೆ ಹಾಗೂ ಚಿಕಿತ್ಸೆ ಆರಂಭಿಸಿದೆ.

" ಕಾಸ್ಮೆಟೋಲಜಿ ಮತ್ತು ಡರ್ಮಟೋಲಜಿ ಪೇಷೆಂಟ್‌ಗಳು ಇದೀಗ ಮುಂಚೆಯೇ ತಲೆ ಬೋಳಾಗುವ ಸಾಧ್ಯತೆಯನ್ನು ಅರಿಯಬಹುದು ಮತ್ತು ಚರ್ಮದ ಮುಲಾಮುಗಳನ್ನು ತೆಗೆದುಕೊಳ್ಳುವ ಮೂಲಕ ತಡೆಗಟ್ಟಬಹುದು. ಶೇ.70ರಷ್ಟು ಸಾಧ್ಯತೆಯನ್ನು ಈ ಪರೀಕ್ಷೆ ದೃಢಪಡಿಸುತ್ತಾದೆ" ಎನ್ನುತ್ತಾರೆ ಡಾ. ದಿನೇಶ್.

ಅನುವಂಶಿಕತೆ ವಂಶಾವಳಿಯ ಆಧಾರದ ಮೇಲೆ ಈ ವಿಧಾನದಿಂದ ಅಕಾಲಿಕ ಕೂದಲು ಉದುರುವಿಕೆಯ ಬಗ್ಗೆ ಮೊದಲೇ ಮಾಹಿತಿ ಸಿಗುತ್ತದೆ. ಒತ್ತಡದ ಜೀವನಶೈಲಿಯ ಹಿನ್ನೆಲೆ

ತಲೆ ಬೋಳಾಗುವುದರ ಬಗ್ಗೆಯೂ ಪರೀಕ್ಷೆಯಲ್ಲಿ ತಿಳಿಯುತ್ತದೆ. ಈ ಮಾದರಿ ಪರೀಕ್ಷೆಯನ್ನು ವಿಜ್ಞಾನಿ ಡಾ. ಕೌಶಿಕ್ ಡಿ ದೇಬ್ ನಡೆಸುತ್ತಾರೆ.

ಏನೀದು ಕಾಸ್ಮೆಟಿಕ್ ಮತ್ತು ಡರ್ಮೋಲಾಜಿಯಲ್ಲಿ ವಂಶವಾಹಿ ವಿಧಾನ ಬಳಕೆ?
ಅಂತರಾಷ್ಟೀಯ ಹ್ಯೂಮನ್ ಜಿನೋಮ್ ಪ್ರಾಜೆಕ್ಟ್ ಮನುಷ್ಯರ ಡಿಎನ್‌ಎ ಮಾದರಿ ಬಳಸಿ ಆತನಿಗೆ ಭವಿಷ್ಯದಲ್ಲಿ ಅನುವಂಶಿಕವಾಗಿ ಬರಬಹುದಾದ ಕಾಯಿಲೆಗಳಾವುವು ಮತ್ತು ಅದಕ್ಕೆ ಚಿಕಿತ್ಸೆಯ ನಿರ್ದಿಷ್ಟ ದಾರಿ ಯಾವುದು ಎಂಬ ಬಗ್ಗೆ ಹೊಸ ಸೂತ್ರವನ್ನು ಕಂಡುಹಿಡಿದಿದೆ. ಇದೇ ವಿಧಾನವನ್ನು ಕಾಸ್ಮೊಟೊಲಾಜಿ ಮತ್ತು ಡರ್ಮಾಟೋಲಾಜಿಯಲ್ಲಿಯೂ ಬಳಸಿಕೊಂಡು ತಲೆಬೋಳು ಸಮಸ್ಯೆ ಸಾಧ್ಯತೆಗಳನ್ನು ಪತ್ತೆ ಹಚ್ಚಲಾಗುತ್ತದೆ. ಇತರೆ ಕೂದಲು ಮತ್ತು ಚರ್ಮ ಸಮಸ್ಯೆಗಳನ್ನು ಕಂಡುಹಿಡಿಯಲಾಗುತ್ತದೆ. ಒಂದು ಪರೀಕ್ಷೆ ನಡೆಸಿ ಅದರ ಫಲಿತಾಂಶ ಹೊರಬೀಳುತ್ತಲೇ ಆ ಸಮಸ್ಯೆಗಳಿಗೆ ಚಿಕಿತ್ಸೆ ಮಾಡಿಸಿಕೊಳ್ಳಬಹುದಾಗಿದೆ.

ಅನುವಂಶಿಕವಾಗಿ ವ್ಯಕ್ತಿಯೊಬ್ಬನಿಗೆ ಬರುವ ಯಾವುದೇ ಗುಣ ಒಂದು ವರ್ಷ ವಯಸ್ಸಿನಿಂದಲೇ ಅರಂಭವಾಗುತ್ತದೆ. ಇದನ್ನು ೪-೫ ಮಿಲಿಲೀಟರ್ ರಕ್ತ ಮಾದರಿ ತೆಗೆದುಕೊಂಡು ಕಂಡುಹಿಡಿಯಲಾಗುತ್ತದೆ. ಈ ಪರೀಕ್ಷೆ ಹಲವು ಹಂತಗಳಲ್ಲಿ ಜರುಗಬೇಕಾಗಿರುವುದರಿಂದ ಇದಕ್ಕೆ ಹೆಚ್ಚು ಸಮಯ ಹಿಡಿಯುತ್ತದೆ.

" ಇಂದಿನ ಜೀವನಶೈಲಿ ಒತ್ತಡದಾಯಕವಾಗಿದೆ. ಮತ್ತು ಯುವಕರು ತಮ್ಮ ೨೫ರಿಂದ ೩೦ ವಯೋಮಿತಿಯಲ್ಲಿಯೇ ತಲೆಬೋಳಾಗುತ್ತಿರುವ ಲಕ್ಷಣಗಳನ್ನು ಕಂಡು ಹೌಹಾರುತ್ತಾರೆ. ಅಲ್ಲದೆ ವಂಶವಾಹಿ ಅಂತಹ ಗುಣಗಳು ಇದ್ದರೆ ನಾವು ಅದನ್ನು ಮುಂಚೆಯೇ ಗುರುತಿಸುತ್ತೇವೆ. ಇದು ಸಮರ್ಪಕ ಮುಂಜಾಗ್ರತಾ ಚಿಕಿತ್ಸೆ ಕೈಗೊಂಡು ಬಾಲ್ಡ್ ಆಗುವುದನ್ನು ತಡೆಯಲು ಸಹಕಾರಿಯಾಗುತ್ತದೆ". ಎನ್ನುತ್ತಾರೆ ಹೇರ್‌ಲೈನ್ ಇಂಟರ್‌ನ್ಯಾಷನಲ್ ಹೇರ್ ರಿಸರ್ಚ್ ಮತ್ತು ಚಿಕಿತ್ಸಾ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಬಾನಿ ಆನಂದ್.

ದೇಶ ಮತ್ತು ವಿದೇಶದಲ್ಲಿಯೂ ದೇಹ ಅಣುಕೋಶದ ಸಂಶೋಧನೆಯಲ್ಲಿ ಭಾಗಿಯಾಗಿರುವ ಡಾ.ದೇಬ್ ಅವರು ಹೇಳುವಂತೆ," ಮನುಷ್ಯನ ದೇಹದ ಜೀನ್ಸ್‌ಗಳು ಒಂದಕ್ಕೊಂದರ ನಡುವೆ ಹೇಗೆ ಸಂವಾದ ಮಾಡುತ್ತವೆ ಹಾಗೂ ಪ್ರಕೃತಿಗೆ ಹೇಗೆ ಪ್ರತಿಕ್ರಿಯಿಸುತ್ತವೆ ಎಂಬ ಬಗ್ಗೆ ಮಾಹಿತಿ ಹೆಕ್ಕಬಹುದು" ಎನ್ನುತ್ತಾರೆ.

ಈ ಜೀನ್‌ಗಳ ಪ್ರೊಪೈಲ್ ಸಂಶೋಧನಾ ಮಾಹಿತಿ ಪಡೆಯಲು ಜೀನ್ ಸ್ಯಾಂಪಲ್ ಪರೀಕ್ಷೆಗೆ ಅಮೆರಿಕಾದ ಲ್ಯಾಬೋರೇಟರಿಗಳಲ್ಲಿ ೬೦ ಸಾವಿರ ಮತ್ತು ಭಾರತದಲ್ಲಿ ೩೦ ಸಾವಿರ ವೆಚ್ಚವಾಗುತ್ತದೆ ಎನ್ನುತ್ತಾರೆ ಅವರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments