Select Your Language

Notifications

webdunia
webdunia
webdunia
webdunia

ಫಾರೆಕ್ಸ್‌‌‌‌:ರೂಪಾಯಿಯಲ್ಲಿ 26 ಪೈಸೆ ಚೇತರಿಕೆ

ಫಾರೆಕ್ಸ್‌‌‌‌:ರೂಪಾಯಿಯಲ್ಲಿ 26 ಪೈಸೆ ಚೇತರಿಕೆ
ಮುಂಬೈ , ಬುಧವಾರ, 9 ಏಪ್ರಿಲ್ 2014 (16:38 IST)
PR
ಅಂತರ ಬ್ಯಾಂಕ್‌ ವಿದೇಶೀ ವಿನಿಮಯ ಮಾರುಕಟ್ಟೆ (ಫಾರೆಕ್ಸ್‌‌‌‌)ನಲ್ಲಿ ಇಂದು ವಹಿವಾಟಿನ ಪ್ರಾರಂಭದಲ್ಲಿ ಡಾಲರ್‌‌ ಎದುರು ರೂಪಾಯಿಯಲ್ಲಿ 26 ಪೈಸೆ ಚೇತರಿಕೆ ಕಂಡು ಬರುವ ಮೂಲಕ ಪ್ರತಿ ಡಾಲರ್‌‌ಗೆ 59.85 ರೂಪಾಯಿಗೆ ತಲುಪಿತು. ಫಾರೆಕ್ಸ್‌ ವಿಶ್ಲೇಷಕರ ಪ್ರಕಾರ ಶೇರು ಮಾರುಕಟ್ಟೆಯಲ್ಲಿ ಉತ್ತಮ ಬೆಳವಣಿಗೆ ಕಂಡು ಬಂದ ಕಾರಣ ಡಾಲರ್‌‌ ಎದುರು ರೂಪಾಯಿಯಲ್ಲಿ ಚೇತರಿಕೆ ಕಂಡು ಬಂದಿದೆ.

ನಿನ್ನೆ ರಾಮನವಮಿ ಇದ್ದ ಕಾರಣ ಫಾರೆಕ್ಸ್‌ ಮಾರುಕಟ್ಟೆಯ ವಹಿವಾಟಗಳು ನಡೆದಿರಲಿಲ್ಲ. ಹಿಂದಿನ ದಿನದ ವಹಿವಾಟಿನಲ್ಲಿ ಪ್ರತಿ ಡಾಲರ್‌‌ಗೆ 60.11 ರೂಪಾಯಿಗೆ ಮಾರುಕಟ್ಟೆ ಸ್ಥಗಿತವಾಗಿತ್ತು. ಮುಂಬೈ ಶೇರು ಮಾರುಕಟ್ಟೆಯಲ್ಲಿ ಸೂಚಂಕ ಇಂದಿನ ಪ್ರಾರಂಭಿಕ ವಹಿವಾಟಿನಲ್ಲಿ 103.13 ಅಂಕ ಅಥವಾ ಶೇ.0.46 ರಷ್ಟು ಹೆಚ್ಚಳವಾಗಿ 22,446.58 ಅಂಕಗಳಿಗೆ ತಲುಪಿದೆ.

Share this Story:

Follow Webdunia kannada