Select Your Language

Notifications

webdunia
webdunia
webdunia
webdunia

ಪಿಎಫ್‌‌ ಇಲಾಖೆಯಿಂದ ಶುಭ ಸುದ್ದಿ

ಪಿಎಫ್‌‌ ಇಲಾಖೆಯಿಂದ ಶುಭ ಸುದ್ದಿ
, ಗುರುವಾರ, 20 ಫೆಬ್ರವರಿ 2014 (13:47 IST)
PR
ಕಾರ್ಮಿಕರ ಭವಿಷ್ಯ ನಿಧಿ ಇಲಾಖೆಯಿಂದ ಶುಭ ಸುದ್ದಿಯೊಂದಿದೆ. ನಿಮ್ಮ ಪಿಎಫ್‌ ಹಣಕ್ಕೆ ಇನ್ನು ಮುಂದೆ ಹೆಚ್ಚಿನ ಬಡ್ಡಿ ಸಿಗಲಿದೆ. ಈ ಪ್ರಕ್ರಿಯೆ ಈ ವಿತ್ತ ವರ್ಷದಲ್ಲಿ ಕೊನೆಗೊಂಡು ಹೊಸ ಬಡ್ಡಿ ದರದ ನೀತಿ ಜಾರಿಯಾಗಲಿದೆ ಎಂದು ಮೂಲಗಳು ತಿಳಿಸಿವೆ. ಪಿಫ್‌‌ ಹೊಂದಿರುವ ಕಾರ್ಮಿಕರಿಗೆ ಸರ್ಕಾರ ಶೇ.0.25 ರಷ್ಟು ಮತ್ತು ಇದಕ್ಕಿಂತ ಹೆಚ್ಚಿನ ಬಡ್ಡಿ ಹೆಚ್ಚಳ ಮಾಡಲಿದೆ. ಲೋಕಸಭಾ ಚುನಾವಣೆಗಿಂತ ಮೊದಲು ಈ ಹೆಚ್ಚಳ ಮಾಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ರಾಜ್ಯ ಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುವ ವೇಳೆಯಲ್ಲಿ ಕೇಂದ್ರ ಕಾರ್ಮಿಕ ರಾಜ್ಯ ಮಂತ್ರಿ ಕೆ. ಸುರೇಶ್ ಈ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ . ಈ ಕುರಿತು ಹಣಕಾಸು ಇಲಾಖೆಗೆ ತಿಳಿಸಲಾಗಿದೆ. 2013-14ರ ಸಾಲಿನ ಪಿಎಫ್‌ಗೆ ಶೇ.8.75 ರಷ್ಟು ಬಡ್ಡಿ ನೀಡುವ ಕುರಿತು ಹಣಕಾಸು ಇಲಾಖೆಗೆ ಶಿಫಾರಸ್ಸು ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

Share this Story:

Follow Webdunia kannada