Select Your Language

Notifications

webdunia
webdunia
webdunia
webdunia

ನೋಟಿನ ಮೇಲೆ ಎನನ್ನೂ ಬರೆಯಬೇಡಿ: ಆರ್‌ಬಿಐ

ನೋಟಿನ ಮೇಲೆ ಎನನ್ನೂ ಬರೆಯಬೇಡಿ: ಆರ್‌ಬಿಐ
ವಾರಣಾಸಿ , ಸೋಮವಾರ, 2 ಡಿಸೆಂಬರ್ 2013 (16:50 IST)
PR
PR
ಇಲ್ಲಿಯವರೆಗೆ ನಿವು ನೋಟಿನ ಮೇಲೆ ಎನಾದರು ಬರೆಯುತ್ತಿದ್ದಿರಿ. ಆದರೆ ಇನ್ನು ಮುಂದೆ ನೋಟಿನ ಮೇಲೆ ಏನನ್ನು ಬರೆಯಲು ಹೋಗಬೇಡಿ . ಜನೆವರಿ 1 ರಿಂದ ನೋಟಿನ ಮೇಲೆ ಎನಾದರು ಬರೆದರೆ , ಅಂತಹ ನೋಟುಗಳನ್ನು ಬ್ಯಾಂಕುಗಳು ಸ್ವೀಕರಿಸುವುದಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ ಡೆಪ್ಯೂಟಿ ಗವರ್ನರ್ ಕೆಸಿ ಚಕ್ರವರ್ತಿ ಹೇಳಿದ್ದಾರೆ.

ನೋಟಿನ ಮೇಲೆ ಏನನ್ನೂ ಬರೆಯಲು ಹೋಗಬೇಡಿ, ನೋಟುಗಳನ್ನು ಸ್ವಚ್ಛವಾಗಿ ಇಡುವ ಉದ್ದೇಶ ನಮ್ಮದಾಗಿದೆ. ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಒಂದು ವೇಳೆ ನೋಟಿನ ಮೇಲೆ ಎನಾದರು ಬರೆದರೆ, ದೇಶದ ಯಾವುದೇ ಬ್ಯಾಂಕ್ ಆ ನೋಟುಗಳನ್ನು ಸ್ವೀಕರಿಸುವುದಿಲ್ಲ. ಈ ಕ್ರಮದಿಂದ ಜನರು ನೋಟಿನ ಮೇಲೆ ಬರೆಯುವುದನ್ನು ನಿಲ್ಲಿಸುತ್ತಾರೆ ಎಂದು ಚಕ್ರವರ್ತಿ ತಿಳಿಸಿದ್ದಾರೆ.

ಜನೆವರಿ ಮೊದಲ ದಿನದಿಂದ ಈ ರೀತಿ ನೋಟಿನ ಮೇಲೆ ಎನಾದರೂ ಬರೆದರೆ , ಆ ನೋಟುಗಳನ್ನು ಬ್ಯಾಂಕಿನ ಸಿಬ್ಬಂದಿ ಸ್ವೀಕರಿಸುವುದಿಲ್ಲ ಮತ್ತು ಬ್ಯಾಂಕಿನ ಸಿಬ್ಬಂದಿ ಕೂಡ ನೋಟುಗಳ ಮೇಲೆ ಏನನ್ನು ಬರೆಯಬಾರದು ಎಂದು ಆರ್‌ಬಿಐ ಆದೇಶಿಸಿದೆ.

Share this Story:

Follow Webdunia kannada