Webdunia - Bharat's app for daily news and videos

Install App

ನಾರಾಯಣ್ ಮೂರ್ತಿ ದಕ್ಷತೆ: ಇನ್ಫೋಸಿಸ್‌ಗೆ ಭಾರಿ ಲಾಭ

Webdunia
ಶನಿವಾರ, 12 ಅಕ್ಟೋಬರ್ 2013 (15:11 IST)
PTI
ಕಳೆದ ಎರಡು ವರ್ಷಗಳಿಂದ ನಿರಾಶಾದಾಯಕ ತ್ರೈಮಾ ಸಿಕ ಫಲಿತಾಂಶದ ಸರಣಿ ಮುಂದುವರಿ ಸಿದ್ದ ಇನ್ಫೊಸಿಸ್‌, ಪ್ರಸಕ್ತ ಹಣಕಾಸು ವರ್ಷದ ಜುಲೈ-ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಸಕಾರಾತ್ಮಕ ಫಲಿತಾಂಶ ಪ್ರಕಟಿಸಿ ಷೇರುದಾರರಿಗೆ ಹಬ್ಬದ ಸಿಹಿ ಉಣಿಸಿದೆ.

ಎನ್‌.ಆರ್.ನಾರಾಯ ಣ­ ಮೂರ್ತಿ ಇನ್ಫೊಸಿಸ್‌ ಕಾರ್ಯನಿರ್ವಾಹಕ ಅಧ್ಯಕ್ಷ ರಾಗಿ ಮರು ನೇಮಕಗೊಂಡ ನಂತರ ಪ್ರಕಟಿಸುತ್ತಿರುವ ಮೊದಲ ಪೂರ್ಣ ಪ್ರಮಾಣದ ತ್ರೈಮಾಸಿಕ ಫಲಿತಾಂಶ ಇದು. ಮೂರ್ತಿ ಮೋಡಿಗೆ ಮಾರುಕಟ್ಟೆ ಕೂಡ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದೆ.

ನಿವ್ವಳ ಲಾಭದಲ್ಲಿ ಕಂಪೆನಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 1.6ರಷ್ಟು ಮಾತ್ರ ಏರಿಕೆ ದಾಖಲಿಸಿದೆ. ರೂ 2,407 ಕೋಟಿ ನಿವ್ವಳ ಲಾಭ ಗಳಿಸಿದೆ. ಆದರೆ, 2013-14ನೇ ಸಾಲಿನ ನಾಲ್ಕೂ ತ್ರೈಮಾಸಿಕಗಳು ಸೇರಿ ಕಂಪೆನಿ ವರಮಾನ ಗಳಿಕೆಯಲ್ಲಿ ಶೇ 9ರಿಂದ ಶೇ 10ರಷ್ಟು ಪ್ರಗತಿ ಅಂದಾಜು ಮಾಡಿದೆ.

ಈ ಮೊದಲು ಶೇ 6ರಿಂದ ಶೇ 10ರಷ್ಟು ವರಮಾನ ಬರಬಹುದು ಎಂದು ಅಂದಾಜು ಮಾಡಲಾಗಿತ್ತು. ಜತೆಗೆ ರೂಪಾಯಿ ಮೂಲಕ ಬರುವ ವರಮಾನವೂ ಶೇ 21ರಿಂದ 22ರಷ್ಟು ಹೆಚ್ಚುವ ನಿರೀಕ್ಷೆ ಇದೆ ಕಂಪೆನಿ ಹೇಳಿದೆ. ಇದು ಮಾರುಕಟ್ಟೆಗೆ ದೊಡ್ಡ ಪ್ರಮಾಣ ದಲ್ಲಿ ಉತ್ತೇಜನ ನೀಡಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ