ನಕ್ಸಲ್ ಪೀಡಿತ ಪ್ರದೇಶದಲ್ಲಿ ಮೊಬೈಲ್ ಟವರ್ ನಿರ್ಮಿಸಲು ಬಿಎಸ್ಎನ್ಎಲ್ ನಿರ್ಧಾರ
ನವದೆಹಲಿ , ಬುಧವಾರ, 21 ಆಗಸ್ಟ್ 2013 (15:50 IST)
ಸಾರ್ವಜನಿಕ ವಲಯವಾದ ಭಾರತೀಯ ಸಂಚಾರ ನಿಗಮ ಮಂಡಳಿ ನಕ್ಸಲ್ ಪೀಡಿತ ಪ್ರದೇಶಗಳ ನಾಲ್ಕು ರಾಜ್ಯಗಳಲ್ಲಿ ಮೊಬೈಲ್ ಟವರ್ ನಿರ್ಮಿಸಲು ಟೆಂಡರ್ ಕರೆದಿದೆ. ಬಿಹಾರ, ಜಾರ್ಖಂಡ, ಒಡಿಶಾ, ಪಶ್ಚಿಮ ಬಂಗಾಳ ದಲ್ಲಿ 1,315 ಸ್ಥಳಗಳಲ್ಲಿ 2ಜಿ ಜಿ ಎಸ್ ಎಮ್ ನೆಟ್ವರ್ಕ್ ನ ಟವರ್ ಸ್ಥಾಪನೆ ಯ ಪರಿಶಿಲನೆ ಜಾರಿಯಲ್ಲಿದೆ. ಇದು ಎರಡು ವರ್ಷಗಳವರೆಗೆ ಜಾರಿಯಲ್ಲಿ ಇರುತ್ತದೆ.