Select Your Language

Notifications

webdunia
webdunia
webdunia
webdunia

ನಕಲಿ ನೋಟುಗಳ ಬಗ್ಗೆ ಕಟ್ಟೆಚ್ಚರ: ಆರ್‌ಬಿಐ

ನಕಲಿ ನೋಟುಗಳ ಬಗ್ಗೆ ಕಟ್ಟೆಚ್ಚರ: ಆರ್‌ಬಿಐ
ನಕಲಿ ಮುಂಬೈ , ಬುಧವಾರ, 29 ಜುಲೈ 2009 (10:13 IST)
ನಕಲಿ ಕರೆನ್ಸಿ ನೋಟುಗಳ ಬಗ್ಗೆ ಕಳವಳ ಪಡುವ ಅಗತ್ಯವಿಲ್ಲ ಮತ್ತು ಬ್ಯಾಂಕ್ ಸತತ ಕಟ್ಟೆಚ್ಚರ ವಹಿಸಿದೆಯೆಂದು ರಿಸರ್ವ್ ಬ್ಯಾಂಕ್ ಮಂಗಳವಾರ ತಿಳಿಸಿದೆ.ಇಲ್ಲಿ ಸಾಲ ನೀತಿಯ ಕುರಿತ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಗಳಿಗೆ ಉತ್ತರಿಸಿದ ಆರ್‌ಬಿಐ ಡೆಪ್ಯುಟಿ ಗವರ್ನರ್ ಉಷಾ ಥೋರಟ್, ನಕಲಿ ನೋಟುಗಳ ಪ್ರಮಾಣ ಹೆಚ್ಚಾಗಿಲ್ಲ ಮತ್ತು ಪ್ರತಿಯೊಂದು ನಕಲಿ ನೋಟು ನಿದರ್ಶನವನ್ನು ತನಿಖೆ ಮಾಡುವುದಾಗಿ ಹೇಳಿದ್ದಾರೆ.

ನೋಟುಗಳ ಭದ್ರತಾ ಲಕ್ಷಣಗಳನ್ನು ಸತತವಾಗಿ ಸುಧಾರಿಸುವ ಮ‌ೂಲಕ, ಕರೆನ್ಸಿ ಚೆಸ್ಟ್‌ಗಳಲ್ಲಿ ತಪಾಸಣೆ ನಡೆಸುವುದು, ಜಾರಿ ಸಂಸ್ಥೆಗಳ ಜತೆ ಸಮನ್ವಯತೆ ಮತ್ತು ನಕಲಿ ನೋಟುಗಳ ಬಗ್ಗೆ ಜನರಲ್ಲಿ ಜಾಗೃತಿ ಮ‌ೂಡಿಸುತ್ತಿರುವುದಾಗಿ ಅವರು ಹೇಳಿದರು.

Share this Story:

Follow Webdunia kannada