Webdunia - Bharat's app for daily news and videos

Install App

ತರಕಾರಿ ದರ ಏರಿಕೆ: ಹಣದುಬ್ಬರ ದರ ಹೆಚ್ಚಳ

Webdunia
ಮಂಗಳವಾರ, 15 ಅಕ್ಟೋಬರ್ 2013 (13:23 IST)
PTI
ಈರುಳ್ಳಿ ಸೇರಿದಂತೆ ಪ್ರಮುಖ ತರಕಾರಿಗಳ ಬೆಲೆ ಹೆಚ್ಚಿದ ಹಿನ್ನೆಲೆಯಲ್ಲಿ ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧರಿಸಿದ ಹಣದುಬ್ಬರ ದರ ಸೆಪ್ಟೆಂಬರ್‌ನಲ್ಲಿ 7 ತಿಂಗಳ ಗರಿಷ್ಠ ಮಟ್ಟವಾದ ಶೇ 6.46ಕ್ಕೆ ಏರಿಕೆ ಕಂಡಿದೆ.

ಈರುಳ್ಳಿ ಬೆಲೆ ಏರಿಕೆಯಿಂದ ಕಳೆದ 4 ತಿಂಗಳಿಂದ ಹಣದುಬ್ಬರ ಸತತ ಏರಿಕೆ ಕಾಣುತ್ತಿದೆ. ಈರುಳ್ಳಿ ಸೆಪ್ಟೆಂಬರ್‌ನಲ್ಲಿಶೇ 323ರಷ್ಟು ತುಟ್ಟಿಯಾಗಿದೆ.

ಜುಲೈನಲ್ಲಿ ಶೇ 5.85ರಷ್ಟು ಮತ್ತು ಆಗಸ್ಟ್‌ನಲ್ಲಿ ಶೇ 6.1ರಷ್ಟು‘ಡಬ್ಲ್ಯುಪಿಐ’ ದಾಖಲಾಗಿತ್ತು. ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಇದು ಶೇ 8.07ರಷ್ಟಿತ್ತು.

ಒಟ್ಟಾರೆ ತರಕಾರಿಗಳ ಬೆಲೆ ಸೆಪ್ಟೆಂಬರ್‌ನಲ್ಲಿ ಶೇ 89ರಷ್ಟು ಹೆಚ್ಚಿದೆ. ಹಣ್ಣುಗಳ ಬೆಲೆ ಶೇ 15ರಷ್ಟು ತುಟ್ಟಿಯಾಗಿದೆ. ಇದರಿಂದ ಒಟ್ಟಾರೆ ಆಹಾರ ಹಣದುಬ್ಬರ ದರ ಶೇ 18.40ಕ್ಕೆ ಜಿಗಿದಿದೆ. ಆಗಸ್ಟ್‌ನಲ್ಲಿ ಇದು ಶೇ 18.18ರಷ್ಟಿತ್ತು. ‘ಎಲ್‌ಪಿಜಿ’ ಮತ್ತು ಪೆಟ್ರೋಲ್‌ ಹಣದುಬ್ಬರ ಕ್ರಮವಾಗಿ ಶೇ 9 ಮತ್ತು ಶೇ 9.64ಕ್ಕೆ ಏರಿಕೆ ಕಂಡಿದೆ. ಮೊಟ್ಟೆ, ಮಾಂಸ, ಮೀನು, ಪಾನೀಯಗಳು, ತಂಬಾಕು, ಅಕ್ಕಿ, ಗೋಧಿ ಮತ್ತು ಬೇಳೆಕಾಳುಗಳ ಧಾರಣೆಯಲ್ಲಿ ಅಲ್ಪ ಇಳಿಕೆ ಕಂಡುಬಂದಿದೆ.

‘ಹಣದುಬ್ಬರ ಸದ್ಯ ಹಿತಕರ ಮಟ್ಟಕ್ಕಿಂತ (ಶೇ 6ಕ್ಕಿಂತ) ಹೆಚ್ಚಿದೆ. ಆದರೆ, ಈಗಾಗಲೇ ಈರುಳ್ಳಿ ಬೆಲೆ ಇಳಿಯುವ ಸೂಚನೆಗಳು ಕಂಡ ು­ ಬಂದಿದ್ದು, ಮುಂಬರುವ ತಿಂಗಳಲ್ಲಿ ‘ಡಬ್ಲ್ಯುಪಿಐ’ ಇಳಿಕೆ ಕಾಣುವ ನಿರೀಕ್ಷೆ ಇದೆ ಎಂದು ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್‌ ಸಿಂಗ್‌ ಅಹ್ಲುವಾಲಿಯಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments