Select Your Language

Notifications

webdunia
webdunia
webdunia
webdunia

ಡೀಸೆಲ್‌, ಪೆಟ್ರೋಲ್, ಗ್ಯಾಸ್‌ ಮತ್ತೆ ದುಬಾರಿಯಾಗಲಿವೆಯೆ ?

ಡೀಸೆಲ್‌, ಪೆಟ್ರೋಲ್, ಗ್ಯಾಸ್‌ ಮತ್ತೆ ದುಬಾರಿಯಾಗಲಿವೆಯೆ ?
ನವದೆಹಲಿ , ಬುಧವಾರ, 30 ಅಕ್ಟೋಬರ್ 2013 (17:47 IST)
PR
ಈಗಾಗಲೆ ತೈಲ ಮತ್ತು ಎಲ್‌ಪಿಜಿ ದರ ಹೆಚ್ಚಳವಾಗಿರುವದರಿಂದ ಸಾರ್ವಜನಿಕರು ಕಷ್ಟ ಅನುಭವಿಸುತ್ತಿದ್ದಾರೆ. ಇಂತಹದರಲ್ಲಿ ಮತೊಮ್ಮೆ ಸರ್ಕಾರ ಡೀಸೆಲ್‌, ಪೆಟ್ರೋಲ್ ಮತ್ತು ಅಡುಗೆ ಅನಿಲ ದರ ಹೆಚ್ಚಳ ಘೋಷಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಪ್ರತಿ ಒಂದು ಲೀಟರ್‌ ಡೀಸೆಲ್‌ಗೆ 5 ರೂಪಾಯಿ, ಪ್ರತಿ ಒಂದು ಲೀಟರ್‌ ಸಿಮೇಎಣ್ಣೆಗೆ 4 ರೂಪಾಯಿ, ಮತ್ತು ಅಡುಗೆ ಅನಿಲ (ಎಲ್‌ಪಿಜಿ)ದ ಪ್ರತಿ ಸಿಲಿಂಡರ್‌ಗೆ 250 ರೂಪಾಯಿ ಹೆಚ್ಚಳ ಮಾಡುವಂತೆ ಪಾರೇಖ ಕಮಿಟಿಯು ಸರಕಾರಕ್ಕೆ ಮನವಿ ಮಾಡಿದೆ.

ಪ್ರತಿ ಲೀಟರ್ ಡೀಸೆಲ್‌ಗೆ 6 ರೂಪಾಯಿ ಹೆಚ್ಚಳ ಮಾಡಿ ಅಂತ ಪಾರೇಖ್ ಕಮಿಟಿ ತೈಲ ಸಚಿವಾಲಯಕ್ಕೆ ಶಿಪಾರಸ್ಸು ಮಾಡಿದೆ.

ಸಬ್ಸಿಡಿ ದರದಲ್ಲಿ ಸದ್ಯಕ್ಕೆ ಪ್ರತಿ ಮನೆಗೆ 9 ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ ಸಿಗುತ್ತವೆ. ಆದರೆ ಪಾರೇಖ್ ಕಮಿಟಿ ಪ್ರತಿ ವರ್ಷಕ್ಕೆ 9 ಸಿಲಿಂಡರ್‌ಗಳಿಂದ 6 ಸಿಲಿಂಡರ್‌ಗಳಿಗೆ ಇಳಿಕೆ ಮಾಡುವಂತೆ ಶಿಫಾರಸ್ಸು ಮಾಡಿರುವುದು ಗ್ರಾಹಕರ ಮೇಲೆ ಮತ್ತೊಂದು ಬರೆ ಎಳೆದಂತಾಗಿದೆ.

Share this Story:

Follow Webdunia kannada