ಸತತ ನಾಲ್ಕನೇ ದಿನಕ್ಕೆ ಬೆಲೆ ಏರಿಕೆ ಕಂಡಿರುವ ಅಪರಂಜಿ, ಚಿನಿವಾರ ಪೇಟೆಯಲ್ಲಿ ಮಂಗಳವಾರ ಪ್ರತೀ ಹತ್ತು ಗ್ರಾಂ.ಗೆ 225 ರೂಪಾಯಿ ಚೇತರಿಕೆಯೊಂದಿಗೆ 28,690 ರೂ.ಗೆ ತಲುಪಿದೆ. ಬೆಳ್ಳಿ ಬೆಲೆಯಲ್ಲಿ ಗಣನೀಯ ಏರಿಕೆ ಕಂಡಿದ್ದು ಪ್ರತೀ ಕೆ.ಜಿ. ಬೆಳ್ಳಿ ಬೆಲೆಯಲ್ಲಿ 500 ರೂಪಾಯಿ ಏರಿಕೆಯೊಂದಿಗೆ 56,500 ರೂಪಾಯಿಗೆ ತಲುಪಿದೆ.