Select Your Language

Notifications

webdunia
webdunia
webdunia
webdunia

ಗ್ರಾಹಕರಿಗೆ ಬರೆ : ಈರುಳ್ಳಿ ನಂತರ ಟೊಮ್ಯಾಟೋ ಬೆಲೆ ಗಗನಕ್ಕೆ

ಗ್ರಾಹಕರಿಗೆ ಬರೆ : ಈರುಳ್ಳಿ ನಂತರ ಟೊಮ್ಯಾಟೋ ಬೆಲೆ ಗಗನಕ್ಕೆ
ನವದೆಹಲಿ , ಗುರುವಾರ, 7 ನವೆಂಬರ್ 2013 (19:52 IST)
PR
ಈರುಳ್ಳಿ ಬೆಲೆಯ ನಂತರ ಈಗ ಟೊಮ್ಯಾಟೋದ ಬೆಲೆ ಗಗನಕ್ಕೆರಿದೆ. ದೆಹಲಿಯಲ್ಲಿ ಪ್ರತಿ ಕಿಲೋ ಟೊಮ್ಯಾಟೋಗೆ 80 ರೂಪಾಯಿ ಬೆಲೆ ನಿಗದಿಯಾಗಿದೆ. ದರಸಲ್‌, ಮಹರಾಷ್ಟ್ರ ಮತ್ತು ಮಧ್ಯ ಪ್ರದೇಶದಿಂದ ಟೊಮ್ಯಾಟೋದ ಪೂರೈಕೆ ಕಡಿಮೆಯಾಗುತ್ತಿದೆ.

ಕಳೆದ ವಾರ ಮಾರುಕಟ್ಟೆಯಲ್ಲಿ ಟೊಮ್ಯಾಟೋದ ಬೆಲೆ ಪ್ರತಿ ಕಿಲೋಗೆ 40 ರೂಪಾಯಿ ಇತ್ತು. ಮಧ್ಯಪ್ರದೇಶ ಮತ್ತು ಮಹರಾಷ್ಟ್ರದಿಂದ ಟೊಮ್ಯಾಟೋದ ಪೂರೈಕೆ ಕಡಿಮೆಯಾಗಿರುವುದರಿಂದ ಬೆಲೆ ಹೆಚ್ಚಳವಾಗಿದೆ ಎಂದು ವ್ಯಾಪಾರಿಗಳ ಅನಿಸಿಕೆಯಾಗಿದೆ. ಈ ಕಾರಣದಿಂದ ದೆಹಲಿಯಲ್ಲಿ ಟೊಮ್ಯಾಟೋದ ಬೆಲೆ ದ್ವಿಗುಣವಾಗಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.

ಹಿಮಾಚಲ ಪ್ರದೇಶದಲ್ಲಿ ಚಳಿಗಾಲದ ಕಾರಣ ಹಿಮಾವೃತ ಜಾಸ್ತಿ ಆಗುತ್ತಿರುವುದರಿಂದ ಇಲ್ಲಿನ ಸಂಪೂರ್ಣ ಟೊಮ್ಯಾಟೋದ ಪೂರೈಕೆ ನಿಂತಿದೆ. ಇದರ ಹೊರತು ರತಲಾಮ ಮತ್ತು ಮಹಾರಾಷ್ಟ್ರದಿಂದ ಕೂಡ ದಿನದಿಂದ ದಿನಕ್ಕೆ ಟೊಮ್ಯಾಟೋದ ಪೂರೈಕೆ ಕಡಿಮೆಯಾಗುತ್ತಿದೆ.

Share this Story:

Follow Webdunia kannada