Select Your Language

Notifications

webdunia
webdunia
webdunia
webdunia

ಗುಲ್ಬರ್ಗಾ ಸೇರಿದಂತೆ 17 ನಗರಗಳಲ್ಲಿ ವಿಮಾನ ನಿಲ್ದಾಣ ಸ್ಥಾಪನೆ

ಗುಲ್ಬರ್ಗಾ ಸೇರಿದಂತೆ 17 ನಗರಗಳಲ್ಲಿ ವಿಮಾನ ನಿಲ್ದಾಣ ಸ್ಥಾಪನೆ
ನವದೆಹಲಿ , ಗುರುವಾರ, 8 ಆಗಸ್ಟ್ 2013 (14:17 IST)
PTI
12ನೇ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ದೇಶಾದ್ಯಂತ 17 ನೂತನ ವಿಮಾನ ನಿಲ್ದಾಣಗಳನ್ನು ನಿರ್ಮಾಣ ಮಾಡಲು ಕೇಂದ್ರ ಸರಕಾರ ಉದ್ದೇಶಿಸಿದೆ ಎಂದು ಮೂಲಗಳು ತಿಳಿಸಿವೆ.

ಮುಂದಿನ ಐದು ವರ್ಷಗಳ ಅವಧಿಯಲ್ಲಿ 17 ವಿಮಾನ ನಿಲ್ದಾಣಗಳ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ.ಸಿ.ವೇಣುಗೋಪಾಲ್ ಸಂಸತ್ತಿಗೆ ಮಾಹಿತಿ ನೀಡಿದ್ದಾರೆ.

ಮೊಪಾ, ಗೋವಾ, ಗುಲ್ಬರ್ಗಾ, ಬಿಜಾಪುರ, ಹಾಸನ್, ಶಿವಮೊಗ್ಗ, ಅರನ್‌ಮುಲಾ ಮತ್ತು ಕಣ್ಣುರ್, ಸಿಂಧುದುರ್ಗ್, ನವಿ ಮುಂಬೈ, ಶಿರ್ಡಿ, ದರ್ಬಾ, ಕರೈಕಲ್, ಖುಶಿನಗರ್, ಅಂಡಾಲ್ ಫರಿದ್‌ಪುರ್, ಇಟಾನಗರ್, ಕಿಶನ್‌ಘರ್ ದಿಯೋಘರ್ ನಗರಗಳಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ಉದ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

ಸಣ್ಣ ಸಣ್ಣ ನಗರಗಳಲ್ಲಿ ಕಡಿಮೆ ವೆಚ್ಚದ ವಿಮಾನ ನಿಲ್ದಾಣಗಳ ಅವಶ್ಯಕತೆಯಿದೆ. ಇದರಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಳಕ್ಕೆ ಉತ್ತೇಜನ ನೀಡುತ್ತದೆ ಎಂದು ವಿವರಣೆ ನೀಡಿದ್ದಾರೆ.

Share this Story:

Follow Webdunia kannada