Webdunia - Bharat's app for daily news and videos

Install App

ಗುಟ್ಕಾ, ಪಾನ್ ಮಸಾಲಾ ಕಂಪೆನಿಗಳು ಬಂದ್

Webdunia
ಮಂಗಳವಾರ, 4 ಜೂನ್ 2013 (14:35 IST)
ರಾಜ್ಯದಲ್ಲಿ ಗುಟ್ಕಾ ಮತ್ತು ಪಾನ್ ಮಸಾಲಾ ತಯಾರಿಕೆ, ಸಂಗ್ರಹಣೆ, ಮಾರಾಟ ಮತ್ತು ವಿತರಣೆಯನ್ನು ಸಂಪೂರ್ಣವಾಗಿ ನಿಷೇಧಿಸಿರುವ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ತಾಲ್ಲೂಕಿನಲ್ಲಿ ಗುಟ್ಕಾ ಮತ್ತು ಪಾನ್‌ಮಸಾಲಾ ತಯಾರಿಕೆಯ ಎರಡು ಕಾರ್ಖಾನೆಗಳಿಗೆ ಬೀಗಮುದ್ರೆ ಹಾಕಿದರು.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಬೆಳಗಾವಿ ಜಿಲ್ಲಾ ಅಂಕಿತ ಅಧಿಕಾರಿ ಡಾ.ಜಗದೀಶ ನುಚ್ಚಿನ್, ತಾಲ್ಲೂಕು ಆಹಾರ ಸುರಕ್ಷತಾ ಅಧಿಕಾರಿ ಎಂ.ಎಸ್. ಬೆಕ್ಕೇರಿ ಅವರು ತಾಲ್ಲೂಕಿನ ನಿಪ್ಪಾಣಿ ಪಟ್ಟಣದ ಬೀರೂಬಾಮಾಳ ಹಾಗೂ ಅಪ್ಪಾಚಿವಾಡಿ ಬಳಿಯಿರುವ ಗುಟ್ಕಾ ಕಾರ್ಖಾನೆಗಳ ಪರಿಶೀಲನೆ ನಡೆಸಿದಾಗ, ಕಾರ್ಖಾನೆಯಲ್ಲಿ ಗುಟ್ಕಾ ತಯಾರಿಕೆಗೆ ಬಳಸಲಾಗುವ ಕಚ್ಚಾ ಸಾಮಗ್ರಿಗಳು ಹಾಗೂ ಕೆಲವು ಗುಟ್ಕಾ ಪ್ಯಾಕೆಟ್‌ಗಳು ದೊರೆತ ಹಿನ್ನ್ನೆಲೆಯಲ್ಲಿ ಎರಡೂ ಕಾರ್ಖಾನೆಗಳಿಗೆ ಬೀಗ ಮುದ್ರೆ ಹಾಕಿದರು.

ಕಾರ್ಖಾನೆಯಲ್ಲಿ ಗುಟ್ಕಾ ಮತ್ತು ಪಾನ್ ಮಸಾಲಾ ತಯಾರಿಕೆ ಬಳಸುವ ಕಚ್ಚಾ ಸಾಮಗ್ರಿಗಳು ಮತ್ತು ಕೆಲವು ಕೆಲವು ಗುಟ್ಕಾ, ಪಾನ್‌ಮಸಾಲಾ ಪ್ಯಾಕೆಟ್‌ಗಳು ದೊರೆತ ಹಿನ್ನೆಲೆಯಲ್ಲಿ ಕಾರ್ಖಾನೆಗಳಿಗೆ ಬೀಗ ಹಾಕಲಾಗಿದೆ' ಎಂದು ಡಾ.ಜಗದೀಶ ನುಚ್ಚಿನ್ `ಪ್ರಜಾವಾಣಿ'ಗೆ ತಿಳಿಸಿದರು.

` ಚಿಕ್ಕೋಡಿ ತಾಲ್ಲೂಕಿನಲ್ಲಿ ಒಟ್ಟು ಮೂರು ಗುಟ್ಕಾ ಕಂಪೆನಿ ಕಾರ್ಖಾನೆಗಳಿದ್ದು, ಆ ಪೈಕಿ ಸೋಮವಾರ ಎರಡು ಕಾರ್ಖಾನೆಗಳ ಪರಿಶೀಲನೆ ನಡೆಸಿ ಬೀಗ ಮುದ್ರೆ ಹಾಕಲಾಗಿದೆ. ಇನ್ನುಳಿದ ಒಂದು ಕಾರ್ಖಾನೆಯ ಪರಿಶೀಲನೆಯನ್ನೂ ನಡೆಸಲಾಗುವುದು' ಎಂದರು. ಇದಕ್ಕೂ ಮೊದಲೇ ಮೇ 31ರಂದೇ ಕೇಂದ್ರ ಅಬಕಾರಿ ಅಧಿಕಾರಿಗಳು ಕಾರ್ಖಾನೆಯ ಯಂತ್ರೋಪಕರಣ, ಗೋದಾಮು ಮತ್ತಿತರ ಘಟಕಗಳಿಗೆ ಬೀಗ ಮುದ್ರೆ ಹಾಕಿರುವುದೂ ಕಂಡುಬಂತು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments