Select Your Language

Notifications

webdunia
webdunia
webdunia
webdunia

ಕಾರು, ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಹೆಚ್ಚಳ

ಕಾರು, ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಹೆಚ್ಚಳ
ನವದೆಹಲಿ , ಗುರುವಾರ, 8 ಜುಲೈ 2010 (12:36 IST)
ದೇಶಿಯ ಕಾರು ಮಾರಾಟದಲ್ಲಿ ಚೇತರಿಕೆಯಾಗಿದೆ. ಜೂನ್ ತಿಂಗಳ ಅವಧಿಯ ನಿವ್ವಳ ಮಾರಾಟದಲ್ಲಿ ಶೇ.30.79ರಷ್ಟು ಏರಿಕೆಯಾಗಿದ್ದು,1,41,184 ವಾಹನಗಳನ್ನು ಮಾರಾಟ ಮಾಡಲಾಗಿದೆ. ಕಳೆದ ವರ್ಷದ ಜೂನ್ ತಿಂಗಳ ಅವಧಿಯಲ್ಲಿ 1,07,948 ವಾಹನಗಳನ್ನು ಮಾರಾಟ ಮಾಡಲಾಗಿತ್ತು.

ಸೂಸೈಟಿ ಆಫ್ ಇಂಡಿಯನ್ ಅಟೋಮೊಬೈಲ್ ಮ್ಯಾನುಫ್ಯಾಕ್ಚುರರ್ಸ್(ಸಿಯಾಮ್) ಪ್ರಕಾರ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಶೇ.29.98ರಷ್ಟು ಏರಿಕೆಯಾಗಿ 7,15,985 ವಾಹನಗಳನ್ನು ಮಾರಾಟ ಮಾಡಲಾಗಿದೆ.ಕಳೆದ ವರ್ಷದ ಜೂನ್ ತಿಂಗಳಲ್ಲಿ 5,50,830 ವಾಹನಗಳನ್ನು ಮಾರಾಟ ಮಾಡಲಾಗಿತ್ತು.

ಜೂನ್ 2010ಕ್ಕೆ, ಒಟ್ಟು ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಶೇ.31.99ರಷ್ಟು ಏರಿಕೆಯಾಗಿದ್ದು, 9,33,101 ವಾಹನಗಳನ್ನು ಮಾರಾಟ ಮಾಡಲಾಗಿದೆ. ಜೂನ್ 2009ರ ಅವಧಿಯಲ್ಲಿ 7,06,934 ವಾಹನಗಳನ್ನು ಮಾರಾಟ ಮಾಡಲಾಗಿತ್ತು.

ಜೂನ್ ತಿಂಗಳ ಅವಧಿಯ ವಾಣಿಜ್ಯ ವಾಹನಗಳ ಮಾರಾಟದಲ್ಲಿ ಶೇ.44.14ರಷ್ಟು ಏರಿಕೆಯಾಗಿ, 52,211 ವಾಹನಗಳನ್ನು ಮಾರಾಟ ಮಾಡಲಾಗಿದೆ.ಕಳೆದ ವರ್ಷದ ಅವಧಿಯಲ್ಲಿ 36,222 ವಾಹನಗಳನ್ನು ಮಾರಾಟ ಮಾಡಲಾಗಿತ್ತು ಎಂದು ಸಿಯಾಮ್ ವರದಿಯಲ್ಲಿ ಬಹಿರಂಗಪಡಿಸಿದೆ.

Share this Story:

Follow Webdunia kannada