Select Your Language

Notifications

webdunia
webdunia
webdunia
webdunia

ಕಾರು ತಗೋತೀರಾ?: ಭರ್ಜರಿ 'ದೀಪಾವಳಿ' ಡಿಸ್ಕೌಂಟ್ಸ್

ಕಾರು ತಗೋತೀರಾ?: ಭರ್ಜರಿ 'ದೀಪಾವಳಿ' ಡಿಸ್ಕೌಂಟ್ಸ್
ಮುಂಬೈ , ಮಂಗಳವಾರ, 11 ಸೆಪ್ಟಂಬರ್ 2012 (09:34 IST)
PR
ದೀಪಾವಳಿಯ ಹಬ್ಬದ ಹಿನ್ನೆಲೆಯಲ್ಲಿ ಪ್ರತಿಷ್ಠಿತ ಕಾರು ತಯಾರಿಕಾ ಕಂಪನಿಗಳಾದ ಹೋಂಡಾ, ಟಾಟಾ ಮೋಟಾರ್ಸ್, ಫೋರ್ಡ್ ಮತ್ತು ಮಾರುತಿ ಸುಜುಕಿ ಸುಮಾರು 60 ಸಾವಿರ ರೂಪಾಯಿಗಳವರೆಗೆ ಡಿಸ್ಕೌಂಟ್ಸ್ ಆಫರ್ ನೀಡಿದೆ.

ಮಾರ್ಕೆಟ್‌ನಲ್ಲಿ ಹೆಸರಾಗಿರುವ ಮಾರುತಿ ಸುಜುಕಿ ಕೂಡ ತನ್ನ ಕಂಪನಿಯ ಅಲ್ಟೋ, ವ್ಯಾಗನ್ ಆರ್ ಮತ್ತು ಎಸ್ಟಿಲೋ ಮಾದರಿ ಕಾರುಗಳಿಗೆ 30ರಿಂದ 35 ಸಾವಿರ ರೂಪಾಯಿಯವರೆಗೆ ಡಿಸ್ಕೌಂಟ್ಸ್ ನೀಡುವುದಾಗಿ ಹೇಳಿದೆ.

ಅದೇ ರೀತಿ ಹೋಂಡಾ ಕಂಪನಿ ಕೂಡ ಕ್ಯಾಶ್ ಡಿಸ್ಕೌಂಟ್ಸ್ ಜತೆಗೆ ಫ್ರೀ ಇನ್ಸೂರೆನ್ಸ್, ಲಾಯಲ್ಟಿ ಎಕ್ಸಚೇಂಜ್ ಬೋನಸ್ ಸೇರಿದಂತೆ ಇನ್ನಿತರ ಆಫರ್ ನೀಡಿದೆ. ಹಬ್ಬದ ಸೀಸನ್ ಹಿನ್ನೆಲೆಯಲ್ಲಿ ನಾವು ನಮ್ಮ ಗ್ರಾಹಕರಿಗೆ ವಿಶೇಷ ಆಫರ್ ಸ್ಕೀಮ್ ನೀಡುತ್ತಿರುವುದಾಗಿ ಹೋಂಡಾ ತಿಳಿಸಿದೆ.

ಬ್ರಿಯೋ, ಸಿಟಿ, ಸಿವಿಕ್ ಮತ್ತು ಎಕೋರ್ಡ್, ಹೋಂಡಾ ಸಿಯೇಲ್ ಕಾರುಗಳಿಗೆ ಇನ್ಸೂರೆನ್ಸ್ ಆಫರ್ ನೀಡುತ್ತಿರುವುದಾಗಿ ಹೋಂಡಾ ಕಂಪನಿಯ ಸೇಲ್ಸ್ ಮತ್ತು ಮಾರ್ಕೆಟಿಂಗ್ ಉಪಾಧ್ಯಕ್ಷ ಜ್ಞಾನೇಶ್ವರ್ ಸೇನ್ ವಿವರಿಸಿದ್ದಾರೆ.

ಹಬ್ಬದ ಸೀಸನ್ ನಮಗೆ ತುಂಬಾ ಮುಖ್ಯವಾದದ್ದು ಎಂದಿರುವ ಫೋರ್ಡ್ ಇಂಡಿಯಾ ಕೂಡ ಸುಮಾರು 52 ಸಾವಿರ ರೂಪಾಯಿಯವರೆಗೆ ಡಿಸ್ಕೌಂಟ್ಸ್ ನೀಡುವುದಾಗಿ ಹೇಳಿದೆ.

Share this Story:

Follow Webdunia kannada