Select Your Language

Notifications

webdunia
webdunia
webdunia
webdunia

ಕಬ್ಬು ಬೆಳೆಗಾರರಿಗೆ ನಷ್ಟ- ಸಕ್ಕರೆ ಕಾರ್ಖಾನೆಗಳಿಗೆ ಲಾಭ

ಕಬ್ಬು ಬೆಳೆಗಾರರಿಗೆ ನಷ್ಟ- ಸಕ್ಕರೆ ಕಾರ್ಖಾನೆಗಳಿಗೆ ಲಾಭ
ಗುಲ್ಬರ್ಗ , ಶನಿವಾರ, 30 ನವೆಂಬರ್ 2013 (18:36 IST)
PR
ದೇಶ ದ ಅಭಿವೃದ್ಧಿಗೆ ಕೈಗಾರಿಕೆಗಳು ಬೇಕೇ ಬೇಕು ಆದರೆ ಕೈಗಾರಿಕೆಯ ಜೊತೆ ಜೊತೆಗೆ ಕೃಷಿ ಕೂಡ ಬೆಳೆಯಬೇಕು. ಆದರೆ ಕೃಷಿ ಆಧಾರಿತ ಸಕ್ಕರೆ ಕಂಪೆನಿಗಳು ಮಾತ್ರ ಲಾಭ ಮಾಡಿಕೊಳ್ಳುತ್ತಿವೆ , ಆದರೆ ರೈತರು ಮಾತ್ರ ನಷ್ಟದಲ್ಲಿ ಇದ್ದಾರೆ. ರೈತರಿಗೆ ಆದ ನಷ್ಟ ತುಂಬಿಸಲು ಸರ್ಕಾರ ಮಧ್ಯಸ್ಥಿಕೆ ವಹಿಸಿದರೂ ಕೂಡ ರೈತರಿಗೆ ನ್ಯಾಯ ಸಿಗುತ್ತಿಲ್ಲ.

ಬೆಳೆದ ಕಬ್ಬಿಗೆ ಸರಿಯಾದ ಬೆಲೆ ಸಿಗಬೇಕು ಎಂದು ರೈತರ ಒತ್ತಾಸೆ, ಆದರೆ ಸಕ್ಕರೆ ಕಾರ್ಖಾನೆಯ ಮಾಲಿಕರು ಮಾತ್ರ ಕಡಿಮೆ ಬೆಲೆಯಲ್ಲಿ ಕಬ್ಬು ಖರೀದಿ ಮಾಡಿ ಹೆಚ್ಚಿನ ಲಾಭ ಗಳಿಸುತ್ತಿವೆ. ಇದರಿಂದ ರೈತರು ನಷ್ಟದಲ್ಲಿ ಇದ್ದಾರೆ.

ಕಬ್ಬು ಬೆಳೆಗಾರರಿಗೆ ನ್ಯಾಯ ಸಿಗಲಿ ಎಂದು ರೈತನೊಬ್ಬ ಪ್ರಾಣವನ್ನೇ ತ್ಯಾಗಮಾಡಿದ್ದು ಗೊತ್ತೇ ಇದೆ. ಈ ಘಟನೆಯ ನಂತರ ಸರ್ಕಾರ ಕಬ್ಬಿಗೆ ಬೆಂಬಲ ಬೆಲೆಯಾಗಿ ಪ್ರತಿ ಟನ್'ಗೆ 2650 ರೂಪಾಯಿ ಬೆಲೆ ನಿಗದಿ ಪಡಿಸಿದೆ. ಆದೆರೆ ಸಕ್ಕರೆ ಕಾರ್ಖಾನೆಯ ಮಾಲಿಕರು ಮಾತ್ರ ಸರ್ಕಾರದ ಆದೇಶಕ್ಕೆ ಕ್ಯಾರೆ ಅನ್ನುತ್ತಿಲ್ಲ.

ಗುಲಬರ್ಗಾದ ಸಕ್ಕರೆ ಕಾರ್ಖಾನೆಯ ಮಾಲಿಕರು ರೈತರಿಂದ ಕಡಿಮೆ ಬೆಲೆಯಲ್ಲಿ ಕಬ್ಬು ಖರೀದಿಸಿ ಸರ್ಕಾರದ ಆದೇಶಕ್ಕ ಅವಮಾನಿಸುತ್ತಿದ್ದಾರೆ. ಪ್ರತಿ ಟನ್‌ ಕಬ್ಬಿಗೆ 18000 ರೂಪಾಯಿ ಮಾತ್ರ ನೀಡುತ್ತಿರುವ ಕಂಪೆನಿಗಳು ರೈತರಿಗೆ ಅನ್ಯಾಯ ಮಾಡುತ್ತಿವೆ. 1800 ರೂಪಾಯಿಗೆ ಕಬ್ಬು ಕೊಡುತ್ತಿದ್ದೇನೆ ಎಂದು ಸ್ವತ ರೈತರಿಂದ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಬರುತ್ತಿದೆ.

ಈಕಡೆ ರೈತರು ತಮ್ಮ ಕಬ್ಬು ಒಣಗಿ ಹೋಗಬಾರದು ಎಂದು ಕಡಿಮೆ ಬೆಲೆಯಲ್ಲಿಯೇ ಕಬ್ಬು ಮಾರಾಟ ಮಾಡುತ್ತಿದ್ದಾರೆ. ಈ ಸಂಭಂಧ ಸರ್ಕಾರ ಕಠೀಣ ಕ್ರಮ ಕೈಗೊಳ್ಳಬೇಕು ಎಂದು ರೈತರ ಒತ್ತಾಯವಿದೆ. ಆದರೆ ಕಡಿಮೆ ಬೆಲೆಯಲ್ಲಿ ಕಬ್ಬು ಖರೀದಿಸಿ , ಹೆಚ್ಚಿನ ಲಾಭ ಗಳಿಸುವಲ್ಲಿ ಸಕ್ಕರೆ ಕಾರ್ಖಾನೆಯ ಮಾಲಿಕರು ಬ್ಯುಸಿ ಆಗಿದ್ದಾರೆ. ಹಿಂಗಾದರೆ ಕೃಷಿಯನ್ನೆ ಅವಲಂಬಿಸಿರುವ ರಾಜ್ಯದ ರೈತರು ಬಹಳಷ್ಟು ನಷ್ಟದಲ್ಲಿ ಇದ್ದಾರೆ. ಇದಕ್ಕೆ ಸರ್ಕಾರವೇ ಉತ್ತರಿಸಬೇಕಾಗಿದೆ .

Share this Story:

Follow Webdunia kannada