Select Your Language

Notifications

webdunia
webdunia
webdunia
webdunia

ಕಪ್ಪು ಹಣದ ನಿಯಂತ್ರಕ್ಕಾಗಿ ನೋಟುಗಳನ್ನು ಮರಳಿ ಪಡೆಯುತ್ತಿಲ್ಲ : ರಾಜನ್‌‌

ಕಪ್ಪು ಹಣದ ನಿಯಂತ್ರಕ್ಕಾಗಿ ನೋಟುಗಳನ್ನು ಮರಳಿ ಪಡೆಯುತ್ತಿಲ್ಲ : ರಾಜನ್‌‌
, ಸೋಮವಾರ, 3 ಫೆಬ್ರವರಿ 2014 (16:59 IST)
PR
ಮುಂಬೈ : 2005 ಕ್ಕಿಂತ ಮೊದಲಿನ ನೋಟುಗಳನ್ನು ಮರಳಿ ಪಡೆಯಲು ಆರ್‌ಬಿಐ ನಿರ್ಧರಿಸಿರುವುದು ಕಪ್ಪು ಹಣ ನಿಯಂತ್ರಣಕ್ಕಾಗಿಯಲ್ಲ ಹೊರತು ನಕಲಿ ನೋಟುಗಳನ್ನು ತಡೆಯಲು ಮಾತ್ರ ಈ ಹೊಸ ನಿಯಮ ಜಾರಿಗೆ ತರಲಾಗಿದೆ ಎಂದು ಆರ್‌ಬಿಐನ ಗವರ್ನರ್ ರಘು ರಾಜನ್‌ ತಿಳಿಸಿದ್ದಾರೆ.

ಮೂರನೇ ತ್ರೈಮಾಸಿಕ ಸಮೀಕ್ಷೆ ಘೋಷಣೆ ಮಾಡಿದ ನಂತರ ಮಾದ್ಯಮದವರ ಜೊತೆಗೆ ಮಾತನಾಡುವಾಗ ಈ ವಿಷಯವನ್ನು ಗವರ್ನರ ತಿಳಿಸಿದ್ದಾರೆ.

ಹೊಸ ನೋಟುಗಳನ್ನು ಬಿಡುಗಡೆ ಮಾಡುವ ಉದ್ದೇಶದಿಂದ ನಾವು ಹಳೆಯ ನೋಟುಗಳನ್ನು ಮರಳಿ ಪಡೆಯುತ್ತಿದ್ದೇವೆ, ಮತ್ತು ಹೊಸ ನೋಟುಗಳೂ ಸುರಕ್ಷಣಾತ್ಮಕವಾಗಿವೆ. ಇದರಿಂದ ನಕಲಿ ನೋಟುಗಳ ಚಲಾವಣೆ ನಿಲ್ಲುತ್ತದೆ ಮತ್ತು ಜನರ ಕೈಯಲ್ಲಿ ಹೊಸ ಮತ್ತು ಅಧಿಕ ವಿಶ್ವಾಸನೀಯ ನೋಟುಗಳನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ರಾಜನ್‌‌ ತಿಳಿಸಿದ್ದಾರೆ .

ಕಳೆದ ವರ್ಷ ಆರ್‌ಬಿಐ 31 ಮಾರ್ಚ್ 2013 ನಂತರ 2005ರ ಮೊದಲ ನೋಟುಗಳನ್ನು ಮರಳಿ ಪಡೆಯುವುದಾಗಿ ತಿಳಿಸಿತ್ತು , ಎಪ್ರಿಲ್‌ 2014ರಿಂದ ಜನರ ನೋಟುಗಳನ್ನು ಅದಲು - ಬದಲು ಮಾಡಲು ಜನರು ಬ್ಯಾಂಕ್‌ಗಳಿಗೆ ಹೋಗಬೇಕಾಗುತ್ತದೆ. ಸುರಕ್ಷೆಯ ಸಲುವಾಗಿ ಈ ಹೊಸ ನಿಯಮ ಜಾರಿಗೆ ತರಲಾಗಿದೆ ಮತ್ತು ನಕಲಿ ನೋಟುಗಳನ್ನು ಪತ್ತೆ ಹಚ್ಚಲು ಕಷ್ಟವಾಗುತ್ತಿತ್ತು, ಆದರೆ ಈ ಮೂಲಕ ನಕಲಿ ನೋಟಿನ ಹಾವಳಿ ತಡೆಯಬಹುದು ಎಂದು ರಾಜನ್‌ ತಿಳಿಸಿದ್ದಾರೆ. ಈ ಹಳೆ ನೋಟು ಮರಳಿ ಪಡೆಯುವುದರ ಮೂಲಕ ಭವಿಷ್ಯದಲ್ಲಿ ನಕಲಿ ನೋಟುಗಳನ್ನು ನಿಯಂತ್ರಣ ಮಾಡಲು ಸಹಾಯಕವಾಗುತ್ತದೆ ಎಂದು ಆರ್‌ಬಿಐ ಗವರ್ನರ್ ರಾಜನ್‌ ತಿಳಿಸಿದ್ದಾರೆ.

Share this Story:

Follow Webdunia kannada