Webdunia - Bharat's app for daily news and videos

Install App

ಐಸ್ ಕ್ರೀಂ, ತಂಪು ಪಾನೀಯಗಳ ಭರಾಟೆ

Webdunia
ಬುಧವಾರ, 16 ಏಪ್ರಿಲ್ 2008 (18:23 IST)
ಸುಡು ಬೇಸಿಗೆಯು ತಂಪು ಪಾನೀಯ ಮತ್ತು ಐಸ್ ಕ್ರೀಂ ಉದ್ಯಮಕ್ಕೆ ಉತ್ತಮ ಮಾರುಕಟ್ಟೆಯನ್ನು ದೊರಕಿಸಿಕೊಡುವ ಸಾಧ್ಯತೆ ಬಹಳವಾಗಿದೆ. ಮುಂದಿನ ಏಳೆಂಟು ತಿಂಗಳು ತಂಪು ಪಾನೀಯಗಳ ಮಾರುಕಟ್ಟೆ ಅತಿವೇಗವಾಗಿ ಅವಕಾಶಗಳನ್ನು ತನ್ನದಾಗಿಸಿಕೊಳ್ಳಲಿದೆ. ಸರಿಸಾಟಿಯಿಲ್ಲದ ಬೆಲೆ, ಪ್ಯಾಕೇಜಿಂಗ್ ಅವಕಾಶ ಮೊದಲಾದವುಗಳನ್ನು ಒಳಗೊಂಡಂತೆ ಹೊಸಹೊಸ ತಂಪು ಪಾನೀಯ ಉತ್ಪನ್ನಗಳು ಮಾರುಕಟ್ಟೆಗೆ ಧಾರಾಳವಾಗಿ ಬರಲಿವೆ.

ಬೇಸಿಗೆ ಆರಂಭಗೊಳ್ಳುವಿಕೆ, ಸಕ್ಕರೆ ರಹಿತ ಮತ್ತು ಪ್ರೋ-ಬಯೋಟಿಕ್ ಐಸ್‌ಕ್ರೀಂಗಳು, ಕಡಿಮೆ ಸಕ್ಕರೆಯ ಪಾನೀಯಗಳು, ದೇಶಿ ಹಾಗೂ ವಿದೇಶಿ ಸುವಾಸನೆಯುಕ್ತ ಜ್ಯೂಸ್‌ಗಳು, ಸುವಾಸಿತ ಹಾಲು ಮತ್ತು ಹಾಲಿನ ಉತ್ಪನ್ನಗಳು, ಸ್ಥಳೀಯ ಪಾನೀಯಗಳಾದ ಲಸ್ಸಿ, ಲಿಂಬು ಪಾನೀಯ ಮತ್ತು ಹಲವಾರು ಬಗೆಯ ತಂಪು ಕಾಫಿ ಮತ್ತು ಐಸ್ ಟೀಗಳ ಬೇಡಿಕೆಯನ್ನು ಹೆಚ್ಚಿಸಲಿವೆ.

" ಬೇಸಿಗೆಯ ತಿಂಗಳುಗಳು, ತಂಪು ಪಾನೀಯ ಮತ್ತು ಐಸ್ ಕ್ರೀಂಗಳ ಮಾರಾಟದಲ್ಲಿ ಶೇ. 60-70ರಷ್ಟು ವೃದ್ಧಿಯನ್ನು ಉಂಟು ಮಾಡಲಿದೆ" ಎನ್ನುತ್ತಾರೆ ಪೆಪ್ಸಿ ಕೋ.ದ ಮಾರುಕಟ್ಟೆ ವಿಭಾಗದ ಕಾರ್ಯಕಾರಿ ನಿರ್ದೇಶಕ, ಪುನಿತಾ ಲಾಲ್. ಬೇಸಿಗೆ ತಂಪು ಪಾನೀಯಗಳ ಕ್ಷೇತ್ರದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆನ್ನುತ್ತಾರೆ, ಗುಜರಾತ್ ಹಾಲು ಮಾರುಕಟ್ಟೆ ವಿಭಾಗದ ಮುಖ್ಯ ಜನರಲ್ ಮ್ಯಾನೇಜರ್, ಆರ್.ಎಸ್.ಸೋಧಿ. ಅವರು ಮಾತನಾಡುತ್ತಾ, "ಏಪ್ರಿಲ್ - ಜೂನ್ ತಿಂಗಳುಗಳಲ್ಲಿ ಸುವಾಸಿತ ಹಾಲು ಮತ್ತು ಐಸ್ ಕ್ರೀಂಗಳ ಮಾರಾಟದಲ್ಲಿ ಶೇ.60ರಷ್ಟು ಮಾರಾಟ ಹೆಚ್ಚಲಿದೆ. ನಾವು ಈ ಸಂದರ್ಭಕ್ಕೆ ಸೂಕ್ತವೆನಿಸುವಂತೆ ಶ್ರೇಣಿಗಳನ್ನು ಸಿದ್ಧಪಡಿಸುತ್ತೇವೆ " ಎನ್ನುತ್ತಾರೆ.

" ಗ್ರಾಹಕರು ಕೆಲವೊಮ್ಮೆ ಆರೋಗ್ಯದ ಬಗ್ಗೆ ಮಾತನಾಡುತ್ತಾರೆ. ಅವರು ಹೊಸ ರುಚಿಯನ್ನು ಆಸ್ವಾದಿಸಲು ಹೆಚ್ಚಿನ ಆಸಕ್ತಿ ತೋರುತ್ತಾರೆ" ಎನ್ನುತ್ತಾರೆ ಪುನಿತಾ ಪಾಲ್. ಅವರು ತಮ್ಮ ಪೆಪ್ಸಿ ಕೋ. ದಿಂದ ಮಾವಿನ ಹಣ್ಣಿನ ತಿರುಳಿನ ಹಾಗೂ ಮಾವಿನ ಹಣ್ಣು ಆಧಾರಿತ ಪಾನೀಯಗಳನ್ನು ಬಿಡುಗಡೆಗೊಳಿಸಿರುವುದಾಗಿ ಹೇಳಿದರು.

ಈ ಸಾಲಿನಲ್ಲಿ ಕೋಕಾಕೋಲಾ, ಡಾಬರ್, ಮದರ್ ಡೈರಿ ಮತ್ತು ಹಿಂದೂಸ್ತಾನ್ ಯೂನಿ ಲಿವರ್ ಕಂಪನಿಗಳೂ ಸಹ ಹೊಸ ಮಾರುಕಟ್ಟೆ ಯೋಜನೆಗಳನ್ನು ಸಿದ್ಧಪಡಿಸುತ್ತಿವೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments