Select Your Language

Notifications

webdunia
webdunia
webdunia
webdunia

ಎಫ್.ಡಿ.ಐ ವಿರೋಧಿಸಿದ ಕರುಣಾನಿಧಿ

ಎಫ್.ಡಿ.ಐ ವಿರೋಧಿಸಿದ ಕರುಣಾನಿಧಿ
ಚೆನ್ನೈ , ಭಾನುವಾರ, 21 ಜುಲೈ 2013 (14:51 IST)
PR
PR
ವಿವಿಧ ಕ್ಷೇತ್ರಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯ ವ್ಯಾಪ್ತಿಯನ್ನು ವಿಸ್ತರಿಸಿದ್ದನ್ನು ಡಿ.ಎಂ.ಕೆಯ ಹಿರಿಯ ಮುಖಂಡ ಕರುಣಾನಿಧಿ ಅವರು ವಿರೋಧಿಸಿದ್ದಾರೆ . ಲೋಕಸಭಾ ಚುನಾವಣೆಗೂ ಮೊದಲು ಕಾಂಗ್ರೆಸ್ ನ ಈ ಕ್ರಮ ಸರಿ ಇಲ್ಲ ಎಂದು ಕರುಣಾನಿಧಿ ತಿಳಿಸಿದರು.

ಅರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಸಂದರ್ಭದಲ್ಲಿ ಈ ತರಹದ ನೀತಿ ಜಾರಿಗೆ ತರೋದು ಒಳ್ಳೆಯದಲ್ಲ , ಇದರಿಂದ ಮತ್ತೆ ಬೇರೆ ಬೇರೆತರಹದ ಸಮಸ್ಯೆ ಉದ್ಭವ ಆಗುತ್ತವೆ ಎಂದು ಕರುಣಾನಿಧಿ ಹೇಳಿದರು . ಕೇಂದ್ರ ಸರ್ಕಾರವು ದೂರ ಸಂಪರ್ಕ ಕ್ಷೇತ್ರದಲ್ಲಿ ಎಫ.ಡಿ.ಐ ಶೇಕಡಾ ನೂರರಷ್ಟು ವಿಸ್ತರಿಸಿರುವ ಕ್ರಮವನ್ನು ಕರುಣಾನಿಧಿ ಖಂಡಿಸಿದ್ದಾರೆ.

ಕರುಣಾನಿಧಿ ಅವರು ತಮ್ಮ ಪಕ್ಷದ ಕಾರ್ಯಕರ್ತರಿಗೆ ಬರೆದ ಪತ್ರದಲ್ಲೂ ಕೂಡ ಈ ವಿಷಯವನ್ನು ನಮೂದಿಸಿದ್ದಾರೆ , ಟೆಲಿಕಾಂ ವಲಯದಲ್ಲಿ ಶೇಕಡಾ ನೂರರಷ್ಟು ಎಫ್.ಡಿ.ಐ ವಿಸ್ತರಿಸಿರುವುದರಿಂದ ವಿದೇಶಿ ಕಂಪನಿಗಳಿಗೆ ಮಾತ್ರ ಲಾಭ , ಹೊರತು ದೇಶಿಯ ಕಂಪನಿಗಳಿಗೆ ಇಲ್ಲ . ಇದರಿಂದ ದೇಶಿಯ ಕಂಪನಿಗಳು ನಷ್ಟಕ್ಕೊಳಗಾಗಿ ಕಂಪನಿ ಮುಚ್ಚುವ ಹಂತಕ್ಕೆ ಬರುತ್ತದೆ ಎಂದು ತಿಳಿಸಿದ್ದಾರೆ.

Share this Story:

Follow Webdunia kannada