Select Your Language

Notifications

webdunia
webdunia
webdunia
webdunia

ಎಚ್ಚರ ತೆರಿಗೆ ವಂಚಕರೇ, ಎಚ್ಚರ, ಸ್ವಿಸ್ ಬ್ಯಾಂಕ್ ಖಾತೆಗಳ ವಿವರ ಬಟಾಬಯಲು

ಎಚ್ಚರ ತೆರಿಗೆ ವಂಚಕರೇ, ಎಚ್ಚರ, ಸ್ವಿಸ್ ಬ್ಯಾಂಕ್ ಖಾತೆಗಳ ವಿವರ ಬಟಾಬಯಲು
, ಬುಧವಾರ, 16 ಅಕ್ಟೋಬರ್ 2013 (16:13 IST)
PR
PR
ಜಿನೀವಾ/ನವದೆಹಲಿ: ತೆರಿಗೆ ತಪ್ಪಿಸಿಕೊಳ್ಳಲು ವಿದೇಶಗಳಲ್ಲಿ ಕೋಟಿಗಟ್ಟಲೆ ಕಪ್ಪುಹಣವನ್ನು ಪೇರಿಸಿಟ್ಟಿರುವ ತೆರಿಗೆವಂಚಕರೇ ಎಚ್ಚರ, ಸ್ವಿಸ್ ಬ್ಯಾಂಕ್‌ಗಳಲ್ಲಿ ಭಾರತೀಯರು ಹೊಂದಿರುವ ಬೃಹತ್ ಪ್ರಮಾಣದ ಕಪ್ಪು ಹಣದ ಬ್ಯಾಂಕ್ ವಿವರಗಳ ಮಾಹಿತಿ ಸದ್ಯದಲ್ಲೇ ಬಟಾಬಯಲಾಗುವ ಸಾಧ್ಯತೆಯಿದೆ. ಸ್ವಿಸ್ ಬ್ಯಾಂಕ್‌ಗಳಲ್ಲಿ ಭಾರತದ ತೆರಿಗೆವಂಚಕರು ಕೋಟ್ಯಂತರ ರೂ. ಕಪ್ಪುಹಣವನ್ನು ಇರಿಸಿರುವುದು ಈಗಾಗಲೇ ಬಯಲಾಗಿದೆ.

ಈಗ ಸ್ವಿಜರ್‌ಲೆಂಡ್ ವಿದೇಶಿ ಅಧಿಕಾರಿಗಳೊಂದಿಗೆ ತೆರಿಗೆ ವಿಷಯಗಳಲ್ಲಿ ಮಾಹಿತಿ ಮತ್ತು ಪರಸ್ಪರ ಆಡಳಿತಾತ್ಮಕ ಸಹಾಯ ವಿನಿಮಯಕ್ಕೆ ಒಪ್ಪಿರುವುದರಿಂದ ಭಾರತದಲ್ಲಿ ತೆರಿಗೆ ವಂಚಕರನ್ನು ಬಯಲಿಗೆಳೆಯುವ ಆಶಾಭಾವನೆ ಚಿಗುರಿದೆ.
ಗೋಪ್ಯತೆಯ ಗೋಡೆ ಕುಸಿದಿದೆ-ಮುಂದಿನ ಪುಟದಲ್ಲಿ ಮಾಹಿತಿ

webdunia
PR
PR
ಇದರಿಂದಾಗಿ ಸ್ವಿಸ್ ಬ್ಯಾಂಕ್ ಸುತ್ತ ಆವರಿಸಿದ್ದ ಗೋಪ್ಯತೆಯ ಗೋಡೆ ಅಕ್ಷರಶಃ ಕುಸಿದುಬಿದ್ದಿದೆ. ಸ್ವಿಸ್ ರಾಷ್ಟ್ರೀಯ ಬ್ಯಾಂಕ್ ಬಿಡುಗಡೆ ಮಾಡಿರುವ ಇತ್ತೀಚಿನ ಅಧಿಕೃತ ಅಂಕಿಅಂಶಗಳ ಪ್ರಕಾರ, ಭಾರತೀಯರು ಸ್ವಿಸ್ ಬ್ಯಾಂಕ್‌ಗಳಲ್ಲಿ 2012ರ ಕೊನೆಯಲ್ಲಿ 9000 ಕೋಟಿ ರೂ.ಗಳ ಕಪ್ಪು ಹಣವನ್ನು ಪೇರಿಸಿಟ್ಟಿದ್ದಾರೆ. ಸ್ವಿಸ್ ಬ್ಯಾಂಕ್‌ಗಳಲ್ಲಿ ಜಗತ್ತಿನಾದ್ಯಂತ ವ್ಯಕ್ತಿಗಳು, ಸಂಸ್ಥೆಗಳು ಇಟ್ಟಿರುವ ಒಟ್ಟು ಹಣದ ಮೊತ್ತ ಬರೋಬ್ಬರಿ 90 ಲಕ್ಷ ಕೋಟಿ ರೂ.ಗಳು.

ಸ್ವಿಸ್ ಬ್ಯಾಂಕ್‌ಗಳಲ್ಲಿರುವ ಖಾತೆಗಳ ಮಾಹಿತಿ ಹಂಚಿಕೊಳ್ಳಲು ವಿದೇಶಿ ಅಧಿಕಾರಿಗಳ ಜತೆ ಸಹಕರಿಬೇಕೆಂದು ಸ್ವಿಜರ್‌ಲೆಂಡ್ ತೀವ್ರ ಜಾಗತಿಕ ಒತ್ತಡವನ್ನು ಎದುರಿಸುತ್ತಿತ್ತು.
ಸ್ವಿಸ್ ಬ್ಯಾಂಕ್ ದುರುಪಯೋಗ-ನೋಡಿ ಮುಂದಿನ ಪುಟ

webdunia
PR
PR
ಸ್ವದೇಶಗಳಲ್ಲಿ ತೆರಿಗೆ ತಪ್ಪಿಸುವುದಕ್ಕಾಗಿ ಸ್ವಿಸ್ ಬ್ಯಾಂಕ್‌ಗಳನ್ನು ಭಾರತದ ತೆರಿಗೆಗಳ್ಳರು ಸೇರಿದಂತೆ ಜಗತ್ತಿನಾದ್ಯಂತ ತೆರಿಗೆಗಳ್ಳರು ದುರುಪಯೋಗ ಮಾಡಿಕೊಂಡಿದ್ದರು. ತೀವ್ರ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದ ಸ್ವಿಜರ್‌ಲೆಂಡ್ ತೆರಿಗೆ ವಿಷಯಗಳಿಗೆ ಸಂಬಂಧಿಸಿದ ಪರಸ್ಪರ ಆಡಳಿತಾತ್ಮಕ ನೆರವಿನ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಒಪ್ಪಂದಕ್ಕೆ ಭಾರತ ಸೇರಿದಂತೆ 58 ರಾಷ್ಟ್ರಗಳು ಸಹಿ ಹಾಕಿವೆ.

ತೆರಿಗೆ ವಂಚನೆ ಮತ್ತು ಅಕ್ರಮ ಹಣ ಬಚ್ಚಿಟ್ಟಿರುವುದರ ವಿರುದ್ಧ ಹೋರಾಟಕ್ಕೆ ಸಹಿ ಹಾಕಿದ ಎಲ್ಲ ರಾಷ್ಟ್ರಗಳು ಮಾಹಿತಿ ಹಂಚಿಕೆ ಮಾಡಿಕೊಳ್ಳಲು ಒಪ್ಪಂದ ಅವಕಾಶ ಕಲ್ಪಿಸಿದೆ.
ಗೋಪ್ಯತೆ ಆರಂಭವಾಗಿದ್ದು ಹೇಗೆ-ಮುಂದಿನ ಪುಟದಲ್ಲಿ ಮಾಹಿತಿ

webdunia
PR
PR
ಸ್ವಿಸ್ ಬ್ಯಾಂಕ್‌ಗಳಲ್ಲಿ ಪ್ರಸ್ತುತ ರೂಪದ ಗೋಪ್ಯತೆ ಆರಂಭವಾಗಿದ್ದು ಹೇಗೆ? ಸ್ವಿಸ್ ಬ್ಯಾಂಕ್‌ಗಳಲ್ಲಿರಿಸಿರುವ ಖಾತೆಗಳ ಗೋಪ್ಯತೆ ಕಾಪಾಡುವ ಸಂಪ್ರದಾಯ ಎರಡನೇ ವಿಶ್ವಯುದ್ಧಕ್ಕೆ ಮುಂಚಿತವಾಗಿ ಆರಂಭವಾಗಿತ್ತು. ನಾಜಿಗಳಿಂದ ಕಿರುಕುಳಕ್ಕೊಳಗಾದ ಜನರಿಗೆ ತಮ್ಮ ಆಸ್ತಿಗಳನ್ನು ರಕ್ಷಣೆ ಮಾಡುವುದಕ್ಕೆ ಇದು ದಾರಿ ಕಲ್ಪಿಸಿತ್ತು. ಈ ಜನರು ಸ್ವಿಸ್ ಬ್ಯಾಂಕ್‌ ಖಾತೆಗಳಲ್ಲಿ ತಮ್ಮ ಹಣವನ್ನು ಇರಿಸುವ ಮೂಲಕ ನಾಜಿಗಳ ಕಪಿಮುಷ್ಠಿಯಿಂದ ಪಾರಾಗಿದ್ದರು.

ಆದರೆ 2008ರಲ್ಲಿ ಜಗತ್ತಿನಾದ್ಯಂತ ತೀವ್ರ ಆರ್ಥಿಕ ಬಿಕ್ಕಟ್ಟು ಮತ್ತು ತರುವಾಯದ ಯೂರೋವಲಯ ಸಾಲದ ಬಿಕ್ಕಟ್ಟಿನಿಂದಾಗಿ ಸ್ವಿಜರ್‌ಲೆಂಡ್ ಮತ್ತು ಪ್ರಖ್ಯಾತ ತೆರಿಗೆಸ್ವರ್ಗಗಳಲ್ಲಿ ಈ ನೀತಿಯನ್ನು ರದ್ದು ಮಾಡುವಂತೆ ಅಭಿಯಾನ ಆರಂಭವಾಯಿತು.
ರೋಸಿ ಹೋದ ಜನತೆ-ಮುಂದಿನ ಪುಟದಲ್ಲಿ ಮಾಹಿತಿ

webdunia
PR
PR
ಮಿತವ್ಯಯ ಕ್ರಮಗಳಿಂದ ಮತ್ತು ಬಿಕ್ಕಟ್ಟಿನಿಂದ ಅಧಿಕ ತೆರಿಗೆಯ ಭಾರದಿಂದ ತತ್ತರಿಸಿದ ಜನಸಾಮಾನ್ಯರು ಶ್ರೀಮಂತ ಜನರ ತೆರಿಗೆವಂಚನೆಯಿಂದ ರೋಸಿಹೋಗಿದ್ದರು.ಅಮೆರಿಕ ತೆರಿಗೆ ಅಧಿಕಾರಿಗಳು ವಿಶೇಷವಾಗಿ ಸ್ವಿಸ್ ಬ್ಯಾಂಕ್ ಖಾತೆಗಳ ಬಹಿರಂಗಕ್ಕೆ ಕಠಿಣ ಕ್ರಮ ಕೈಗೊಂಡಿತು.

ಇದೇ ಸಂದರ್ಭದಲ್ಲಿ ಸ್ವಿಸ್ ಬ್ಯಾಂಕ್‌ಗಳಲ್ಲಿರುವ ಖಾತೆಗಳ ಪಟ್ಟಿ ತೆರಿಗೆ ಅಧಿಕಾರಿಗಳಿಗೆ ಸೋರಿಕೆಯಾದಾಗ ವಿವಾದಗಳಿಗೆ ಗುರಿಯಾಗಿತ್ತು.
ಈಗ ಸ್ವಿಸ್ ಬ್ಯಾಂಕ್ ಖಾತೆಯ ವಿವರಗಳು ಬಹಿರಂಗವಾಗುವ ಸಾಧ್ಯತೆಯಿರುವುದಿರಿಂದ ಈ ಖಾತೆಗಳಲ್ಲಿ ಕಳ್ಳಹಣವನ್ನು ಇಟ್ಟಿರುವ ಭಾರತದ ಅನೇಕ ತೆರಿಗೆವಂಚಕರ ಬಣ್ಣ ಬಯಲಾಗಲಿದೆ.

Share this Story:

Follow Webdunia kannada