Select Your Language

Notifications

webdunia
webdunia
webdunia
webdunia

ಉದ್ಯಮಿ ಬಿ.ಆರ್.ಶೆಟ್ಟಿಯಿಂದ ಆಸ್ಪತ್ರೆ ನಿರ್ಮಾಣ

ಉದ್ಯಮಿ ಬಿ.ಆರ್.ಶೆಟ್ಟಿಯಿಂದ ಆಸ್ಪತ್ರೆ ನಿರ್ಮಾಣ
ಖಲೀಫ್ ನಗರದಲ್ಲಿ ಎನ್.ಎಂ.ಸಿ. ಹೆಲ್ತಕೇರ್ ಸಂಸ್ಥೆ ನಿರ್ಮಿಸಲಿರುವ ಆಸ್ಪತ್ರೆಯ ಶಂಕುಸ್ಥಾಪನೆಯ ಸಮಾರಂಭದಲ್ಲಿ ಯುಎಇಯ ಆರೋಗ್ಯ ಇಲಾಖೆಯ ಸಹಾಯಕ ಅಧೀನ ಕಾರ್ಯದರ್ಶಿ ನಾಸೆರ್ ಖಲೀಫಾ ಅಲ್ ಬದೂರ್, ಆರೋಗ್ಯ ಪ್ರಾಧಿಕಾರದ ಆರೋಗ್ಯ ನಿಯಂತ್ರಣ ವಿಭಾಗದ ನಿರ್ದೇಶಕ ಡಾ. ಅಲಿ ಒಬೈದ್ ಅಲ್ ಅಲಿ, ರಾಷ್ಟ್ರೀಯ ಜೀವವಿಮಾ ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಾಲಿದ್ ಸಿದಾನಿ ಮತ್ತು ಎನ್.ಎಂ.ಸಿ. ಹೆಲ್ತ್‌ಕೇರ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ಆರ್. ಶೆಟ್ಟಿ ಭಾಗವಹಿಸಿದ್ದರು

ಅಬುಧಾಬಿ: ಎನ್.ಎಂ.ಸಿ. ಹೆಲ್ತಕೇರ್ ಸಂಸ್ಥೆ ಅರಬ್ ಗಣರಾಜ್ಯದಲ್ಲಿಯೇ ಅತಿ ದೊಡ್ಡ ವೈದ್ಯಕೀಯ ಸಂಸ್ಥೆಯಾಗಿದ್ದು ಖಲೀಫ್‌ನಗರದಲ್ಲಿ 250 ಹಾಸಿಗೆಗಳ ಆಸ್ಪತ್ರೆಯನ್ನು ನಿರ್ಮಿಸಲು ಉದ್ದೇಶಿಸಿದ್ದು ಇದರ ಶಂಕುಸ್ಥಾಪನಾ ಸಮಾರಂಭ ಇತ್ತೀಚೆಗೆ ನಡೆಯಿತು.

ಸಮಾರಂಭದಲ್ಲಿ ಯುಎಇಯ ಅಂತರರಾಷ್ಟ್ರೀಯ ಸಂಬಂಧ ಮತ್ತು ಆರೋಗ್ಯ ಇಲಾಖೆಯ ಸಹಾಯಕ ಅಧೀನ ಕಾರ್ಯದರ್ಶಿ ನಾಸೆರ್ ಖಲೀಫಾ ಅಲ್ ಬದೂರ್, ಆರೋಗ್ಯ ಪ್ರಾಧಿಕಾರದ ಆರೋಗ್ಯ ನಿಯಂತ್ರಣ ವಿಭಾಗದ ನಿರ್ದೇಶಕ ಡಾ. ಅಲಿ ಒಬೈದ್ ಅಲ್ ಅಲಿ, ಅಬುಧಾಬಿ ರಾಷ್ಟ್ರೀಯ ಜೀವವಿಮಾ ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಾಲಿದ್ ಸಿದಾನಿ ಈ ಮುಂತಾದವರು ಭಾಗವಹಿಸಿದ್ದರು. ಈ ಆಸ್ಪತ್ರೆಯ ಮೊದಲ ಹಂತ 2014ರಲ್ಲಿ ಕಾರ್ಯಾರಂಭವಾಗಲಿದೆ.

ಇದು 23 ವಿಭಾಗಗಳನ್ನು ಒಳಗೊಳ್ಳಲಿದೆ. ಅಬುಧಾಬಿ ನಗರಸಭೆ ಒದಗಿಸಿದ 54,200 ಚದರ ಮೀಟರ್ ಪ್ರದೇಶದಲ್ಲಿ ನಿರ್ಮಾಣಗೊಳ್ಳಲಿದ್ದು ಇದರ ನಿರ್ಮಾಣಕ್ಕೆ 200 ದಶಲಕ್ಷ ಡಾಲರ್ ವೆಚ್ಚವಾಗಲಿದೆ. ಆಸ್ಪತ್ರೆಗೆ ಜಾಗ ಒದಗಿಸಿದ ನಗರಸಭೆಗೆ ಹೆಲ್ತ್‌ಕೇರ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ಆರ್. ಶೆಟ್ಟಿ ಸಮಾರಂಭದಲ್ಲಿ ಕೃತಜ್ಞತೆ ಸಲ್ಲಿಸಿದರು.

Share this Story:

Follow Webdunia kannada