Select Your Language

Notifications

webdunia
webdunia
webdunia
webdunia

ಈಗ, ಕನ್ನಡ ಸೇರಿದಂತೆ 9 ಸ್ಥಳೀಯ ಭಾಷೆಗಳಲ್ಲಿ ಫೇಸ್‌ಬುಕ್ ಲಭ್ಯ

ಈಗ, ಕನ್ನಡ ಸೇರಿದಂತೆ 9 ಸ್ಥಳೀಯ ಭಾಷೆಗಳಲ್ಲಿ ಫೇಸ್‌ಬುಕ್ ಲಭ್ಯ
, ಶುಕ್ರವಾರ, 27 ಡಿಸೆಂಬರ್ 2013 (17:57 IST)
PR
ಭಾರ್ತಿ ಏರ್‌ಟೆಲ್‌ ತನ್ನ ಗ್ರಾಹಕರಿಗೆ ಒಂದು ಉತ್ತಮ ಕೊಡುಗೆ ನೀಡಿದೆ. ಏರ್‌ಟೆಲ್‌ ಬಳಸುತ್ತಿರುವ ಗ್ರಾಹಕರು ತಮ್ಮ ಮೊಬೈಲ್‌ನಲ್ಲಿ ಕನ್ನಡ ಸೇರಿದಂತೆ ಒಟ್ಟು 9 ಭಾಷೆಗಳಲ್ಲಿ ಫೇಸ್‌ಬುಕ್‌ ಬಳಸಬಹುದು ಎಂದು ಏರ್‌ಟೆಲ್‌ ಕಂಪೆನಿಯ ಮೂಲಗಳು ತಿಳಿಸಿವೆ.

" ಏರ್‌ಟೆಲ್‌ ಪ್ರಿಪೇಡ್ ಗ್ರಾಹಕರು ತಮ್ಮ ಮೊಬೈಲ್‌ನಲ್ಲಿ 9 ಪ್ರಾದೇಶಿಕ ಭಾಷೆಗಳಲ್ಲಿ ಫೇಸ್‌ಬುಕ್‌ ಬಳಸಬಹುದು. ಈ ಸೇವೆ ಭಾರತಾದ್ಯಂತ ಅನ್ವಯವಾಗಲಿದೆ ಎಂದು ಭಾರ್ತಿ ಏರ್‌‌ಟೆಲ್‌‌ ಮೂಲಗಳು ತಿಳಿಸಿವೆ.

ಮೊಬೈಲ್‌ನಲ್ಲಿ ಫೇಸಬುಕ್‌‌ ಬಳಸುತ್ತಿರುವ ಏರ್‌ಟೆಲ್‌‌ ಗ್ರಾಹಕರು ಈದೀಗ ಕನ್ನಡ, ಹಿಂದಿ, ಬೆಂಗಾಲಿ, ಗುಜರಾತ್, ಮರಾಠಿ, ಪಂಜಾಬ್, ತಮಿಳು , ತೆಲುಗು ಮತ್ತು ಮಲೆಯಾಳಿ ಭಾಷೆಯಲ್ಲಿ ಫೇಸ್‌ಬುಕ್‌ ಬಳಸಬಹುದು.

ಪ್ರತಿ ತಿಂಗಳು ಏರ್‌ಟೆಲ್‌ ತನ್ನ ಗ್ರಾಹಕರಿಗೆ ಹಬ್ಬಗಳ ಸಂದರ್ಭಗಳಲ್ಲಿ ಮನೋರಂಜನೆ ಪಡೆಯಲು ಮಾಸಿಕವಾಗಿ 30MB ಉಚಿತ ಫೇಸಬುಕ್‌ ಸೌಲಭ್ಯ ನೀಡಲಿದೆ ಎಂದು ಕಂಪೆನಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

Share this Story:

Follow Webdunia kannada