ಈಗ ಎಟಿಎಂನಿಂದ 1000 ಲೀಟರ್ ನೀರು ಖರೀದಿಸಿ !
ಮುಂಬೈ , ಸೋಮವಾರ, 24 ಮಾರ್ಚ್ 2014 (15:46 IST)
ಈಗ ನಗರವಾಸಿಗಳು ಎಟಿಎಂ ನಿಂದ ನೀರನ್ನು ಕೂಡ ಖರೀದಿಸಬಹುದಾಗಿದೆ. ಕೇವಲ ಒಂದೇ ಒಂದು ರೂಪಾಯಿಗೆ ಒಂದು ಲೀಟರ್ ನೀರು ಪಡೆಯಹುದಾಗಿದೆ. ಸರಕಾರೇತರ ಸ್ವಾಮ್ಯದ ವಂದನಾ ಫೌಂಡೇಶನ್ ಮುಂಬೈ ನಿವಾಸಿಗಳಿಗೆ ಈ ಹೊಸ ಯೋಜನೆ ಜಾರಿಗೆ ತಂದಿದೆ. ಈ ನೀರು ಕೊಡುವ ಯಂತ್ರಕ್ಕೆ ಎಕ್ವಾಟಿಎಂ ಎಂಬ ಹೆಸರು ನೀಡಲಾಗಿದೆ. ಈ ಎಟಿಎಂನಿಂದ ಪ್ರತಿದಿನ 1000 ಲೀಟರ್ ನೀರು ಪಡೆಯಬಹುದಾಗಿದೆ ಎಂದು ವಂದನಾ ಫೌಂಡೇಶನ್ ತಿಳಿಸಿದೆ. ಗ್ರಾಹಕರು ಕೇವಲ ಒಂದು ರೂಪಾಯಿ ಪಾವತಿಸಿ ಒಂದು ಲೀಟರ್ ನೀರು ಪಡೆಯಬಹುದಾಗಿದೆ. ಈ ಜಲ ಎಟಿಎಂಗಾಗಿ ವಂದನಾ ಸಂಸ್ಥೆ ಇನ್ನೋಂದು ಎನ್ಜಿಓ ಆದ ಎಕ್ವಾಕ್ರಾಫ್ಟ್ ಸಂಸ್ಥೆಯ ಜೊತೆಗೆ ಕೈ ಜೋಡಿಸಿದೆ.