Select Your Language

Notifications

webdunia
webdunia
webdunia
webdunia

ಇಂದಿನಿಂದ ಎರಡು ದಿನಗಳವರೆಗೆ ಸಾರ್ವಜನಿಕ ಬ್ಯಾಂಕ್‌‌ಗಳು ಬಂದ್‌‌

ಇಂದಿನಿಂದ ಎರಡು ದಿನಗಳವರೆಗೆ ಸಾರ್ವಜನಿಕ ಬ್ಯಾಂಕ್‌‌ಗಳು ಬಂದ್‌‌
ದೆಹಲಿ , ಸೋಮವಾರ, 10 ಫೆಬ್ರವರಿ 2014 (09:10 IST)
PR
ಸಾರ್ವಜನಿಕ ಬ್ಯಾಂಕ್‌‌ನ ನೌಕರರು ಇಂದಿನಿಂದ ಎರಡು ದಿನಗಳ ಕಾಲ ಬಂದ್ ಆಚರಿಸಿ ಹೋರಾಟ ಮಡಲು ಸಿದ್ದವಾಗಿವೆ. ಯೂನಿಯನ್‌‌ ಮತ್ತು ಮ್ಯಾನೇಜ್‌‌ಮೆಂಟ್‌‌ಗಳ ನಡುವೆ ಉಂಟಾದ ವೇತನದ ವಿಷಯದಲ್ಲಿನ ಉಂಟಾದ ಗೊಂದಲದಿಂದ ಈ ಹೊರಾಟ ಮಾಡುತ್ತಿರುವುದಾಗಿ ಬ್ಯಾಂಕ್‌ನ ಉದ್ಯೋಗಿಳು ತಿಳಿಸಿದ್ದಾರೆ . ಚೀಪ್‌ ಲೇಬರ್‌‌ ಕಮಿಶ್ನರ್‌‌ ಎದುರು ಇಂಡಿಯನ್‌‌ ಬ್ಯಾಂಕ್‌‌ ಅಸೋಷಿಯೆಶನ್‌‌‌ ಮತ್ತು ಯುನಿಯನ್‌ ನಡುವೆ ನಡೆದ ಮಾತುಕತೆ ವಿಫಲವಾದ ಕಾರಣ ಈ ಹೊರಾಟ ಮಾಡುತ್ತಿರುವುದಾಗಿ ಯುನೈಟೆಡ್‌‌ ಫೋರಮ್‌‌‌ ಆಫ್‌‌‌ ಬ್ಯಾಂಕ್‌ ಯೂನಿಯನ್‌ ಸಂಯೋಜಕ ಎಮ್‌‌.ವಿ.ಮುರಳಿ ತಿಳಿಸಿದ್ದಾರೆ .

ಇಡೀ ದೇಶದ ಯುನಿಯನ್‌‌ ಫೋರಮ್‌ ಆಫ್‌ ಬ್ಯಾಂಕ್‌ ಯುನಿಯನ್‌‌ ಇಂದಿನಿಂದ ಪ್ರತಿಭಟನೆ ನಡೆಸಲು ಸಿದ್ದರಾಗಿದ್ದಾರೆ. ಹೆಚ್ಚುತ್ತಿರುವ ಬೆಲೆ ಏರಿಕೆಯ ನಡುವೇಯು ಕೂಡ ಬ್ಯಾಂಕ್‌ ಉದ್ಯೋಗಿಗಳಿಗೆ ವೇತನ ಹೆಚ್ಚು ಮಾಡದ ಕಾರಣ ಎರಡು ದಿನಗಳ ಕಾಲ ಈ ಪ್ರತಿಭಟನೆ ನಡೆಸುತ್ತಿರುವುದಾಗಿ ನ್ಯಾಶನಲ್‌ ಆರರ್ಗನಾಯಿಶೆನ್ ಆಫ್ ಬ್ಯಾಂಕ್‌ ವರ್ಕರಸ್‌‌ನ ಜನೆರಲ್‌‌ ಸೆಕ್ರೆಟರಿ ಅಶ್ವಿನಿ ರಾನಾ ತಿಳಿಸಿದ್ದಾರೆ.

ಯೂನಿಯನ್‌‌ ಫೊರಮ್‌‌ ಆಫ್‌ ಬ್ಯಾಂಕ್‌ ಯೂನಿಯನ್‌‌ನಲ್ಲಿ 9 ಬ್ಯಾಂಕಗಳ ಉದ್ಯೋಗಿಗಳು ಮತ್ತು ಅಧಿಕಾರಿಗಳು ಈ ಯುನಿಯನ್‌‌‌ನಲ್ಲಿ ಇದ್ದಾರೆ . ದೇಶಾದ್ಯಂತ ಇರುವ 27 ಪಬ್ಲಿಕ್‌ ಸೆಕ್ಟೆರ್ ಬ್ಯಾಂಕ್‌ಗಳ ಉದ್ಯೋಗಿಗಳು ಒಟ್ಟು 8 ಲಕ್ಷಕ್ಕಿಂತ ಹೆಚ್ಚಿನ ಜನರಿದ್ದಾರೆ. ಈ ಎಲ್ಲಾ ಬ್ಯಾಂಕ್‌ಗಳು 50,000 ಶಾಖೆಗಳು ಹೊಂದಿವೆ.

Share this Story:

Follow Webdunia kannada