Select Your Language

Notifications

webdunia
webdunia
webdunia
webdunia

ಇಂಟರ್ನೆಟ್ ಸೆಕ್ಸ್ ವೀಕ್ಷಣೆ ಎಷ್ಟೊಂದು ಭಯಾನಕ ಗೊತ್ತಾ?

ಇಂಟರ್ನೆಟ್ ಸೆಕ್ಸ್ ವೀಕ್ಷಣೆ ಎಷ್ಟೊಂದು ಭಯಾನಕ ಗೊತ್ತಾ?
ಹೌಸ್ಟನ್‌ , ಸೋಮವಾರ, 7 ನವೆಂಬರ್ 2011 (17:27 IST)
ಅಂತರ್ಜಾಲ ತಾಣಗಳಲ್ಲಿ ಮಿತಿ ಮೀರಿ ಲೈಂಗಿಕ ದೃಶ್ಯಗಳನ್ನು ವೀಕ್ಷಿಸುವ ಯುವಕರಲ್ಲಿ ಬಹುಬೇಗನೆ ಲೈಂಗಿಕ ಆಸಕ್ತಿ ಕುಂಠಿತವಾಗಿರುವುದು ಇತ್ತೀಚಿನ ಸಂಶೋಧನೆಯಿಂದ ತಿಳಿದುಬಂದಿದೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಈ ಕುರಿತು ಇಟಲಿಯಲ್ಲಿ ನಡೆಸಲಾದ ಎರಡು ಪ್ರತ್ಯೇಕ ಸಂಶೋಧನೆಯಲ್ಲಿ 28,000 ಇಂಟರ್ನೆಟ್ ಬಳಕೆದಾರರನ್ನು ಸಂದರ್ಶಿಸಿ ಅವರವರ ಅಭಿಪ್ರಾಯ ಸಂಗ್ರಹಿಸಲಾಗಿತ್ತು. ಅವರಲ್ಲಿ ಹೆಚ್ಚಿನವರು 14ರ ಹರೆಯಕ್ಕೆ ಮೊದಲೇ ಅಂತರ್ಜಾಲದಲ್ಲಿ ಲೈಂಗಿಕ ದೃಶ್ಯಗಳನ್ನು ವೀಕ್ಷಿಸಿದ್ದಾರೆ.

ಆರಂಭದಲ್ಲಿ ಹೆಚ್ಚೆಚ್ಚು ಆಸಕ್ತಿ ಬೆಳೆಸಿಕೊಂಡು ಸೆಕ್ಸ್ ದೃಶ್ಯಗಳನ್ನು ವೀಕ್ಷಿಸಿದ ಇವರು, ಕೇವಲ 20 ವಯಸ್ಸಿನ ವೇಳೆಗೆ ವಿಕೃತ ಲೈಂಗಿಕ ದೃಶ್ಯಗಳನ್ನೇ ವೀಕ್ಷಿಸಲು ಉತ್ಸುಕರಾಗಿರುವುದು ಕಂಡು ಬಂದಿರುವುದಾಗಿ ಇಟಲಿಯ ಲೈಂಗಿಕ ಔಷಧ ಸಂಸ್ಥೆ ಸಿಯಾಮ್‌ನ ಮುಖ್ಯಸ್ಥರಾದ ಕಾರ್ಲೋ ಫೋರೆಸ್ಟಾ ತಿಳಿಸಿದ್ದಾರೆ.

ಈ ರೀತಿಯ ಬೆಳವಣಿಗೆಯಿಂದ ದೈಹಿಕವಾಗಿ ಸಬಲರಾಗಿರುವ ಯುವಕರಲ್ಲೂ ಮಾನಸಿಕವಾಗಿ ಆಸಕ್ತಿ ಕುಂದಿರುವುದಾಗಿ ಸೈಕಾಲಜಿ ಟುಡೆ ಜಾಲದಲ್ಲಿ ವರದಿಯೊಂದನ್ನು ಪ್ರಕಟಿಸಿರುವ ಪ್ರಸಿದ್ಧ ಲೇಖಕಿ ಮಾರ್ನಿಯ ರಾಬಿನ್‌ಸನ್ ಸ್ಪಷ್ಟಪಡಿಸಿದ್ದಾರೆ.

ಅಂತರ್ಜಾಲಗಳಲ್ಲೇ ಹೆಚ್ಚೆಚ್ಚು ಅಶ್ಲೀಲ ದೃಶ್ಯಗಳನ್ನು ವೀಕ್ಷಿಸಿರುವ ಇವರಲ್ಲಿ ನೈಜ ಲೈಂಗಿಕತೆಯಲ್ಲಿ ಆಸಕ್ತಿ ಕಡಿಮೆಯಾಗಿದ್ದು, ಕೇವಲ 20 -25 ವರ್ಷದಲ್ಲೇ ಲೈಂಗಿಕ ಆಸಕ್ತಿ ಕಡಿಮೆಯಾಗಿರುವುದು ಮನೋವೈದ್ಯರು ಹಾಗೂ ಲೈಂಗಿಕ ತಜ್ಞರಲ್ಲಿ ಆಘಾತ ಮೂಡಿಸಿದೆ.

Share this Story:

Follow Webdunia kannada