Webdunia - Bharat's app for daily news and videos

Install App

ಆರ್‌ಬಿಐಯಿಂದ ಮತ್ತೆ ರೆಪೋ ದರ ಹೆಚ್ಚಳ ಸಾಧ್ಯತೆ: ತಜ್ಞರು

Webdunia
ಸೋಮವಾರ, 25 ಜುಲೈ 2011 (10:58 IST)
PTI
ಹಣದುಬ್ಬರ ದರ ಏರಿಕೆಯಿಂದ ಇಕ್ಕಟ್ಟಿಗೆ ಸಿಲುಕಿರುವ ಭಾರತೀಯ ರಿಸರ್ವ್ ಬ್ಯಾಂಕ್, ಮೊದಲ ತ್ರೈಮಾಸಿಕ ಪರಿಷ್ಕರಣ ಸಭೆಯಲ್ಲಿ ಮತ್ತೆ ರೆಪೋ ದರಗಳಲ್ಲಿ 25 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸುವ ಸಾಧ್ಯತೆಗಳಿವೆ ಎಂದು ಬ್ಯಾಕಿಂಗ್ ಕ್ಷೇತ್ರದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಭಾರತೀಯ ರಿಸರ್ವ್ ಬ್ಯಾಂಕ್, ಹಣದುಬ್ಬರ ದರ ಏರಿಕೆ ನಿಯಂತ್ರಣಕ್ಕಾಗಿ 25 ಬೇಸಿಸ್ ಪಾಯಿಂಟ್‌ಗಳಷ್ಟು ರೆಪೋ ದರಗಳಲ್ಲಿ ಏರಿಕೆ ಮಾಡುವ ನಿರೀಕ್ಷೆಗಳಿವೆ ಎಂದು ಕೆನರಾ ಬ್ಯಾಂಕ್ ಕಾರ್ಯಕಾರಿ ನಿರ್ದೇಶಕಿ ಅರ್ಚನಾ ಎಸ್.ಭಾರ್ಗವಾ ತಿಳಿಸಿದ್ದಾರೆ.

ದೇಶದ ಹಣದುಬ್ಬರ ದರ ಶೇ.5-6 ರಷ್ಟು ದರ ಸೂಕ್ತವಾಗಿರುತ್ತದೆ. ಆದರೆ, ಕಳೆದ ಜೂನ್ ತಿಂಗಳ ಅವಧಿಯಲ್ಲಿ ಹಣದುಬ್ಬರ ದರ ಶೇ.9.44ಕ್ಕೆ ಏರಿಕೆಯಾಗಿರುವುದು ಆರ್‌ಬಿಐಗೆ ನುಂಗಲಾರದ ತುತ್ತಾಗಿದೆ.

ದರ ಏರಿಕೆ ನಿಯಂತ್ರಣಕ್ಕಾಗಿ ಸಮರ ಸಾರಿರುವ ಆರ್‌ಬಿಐ, ಕಳೆದ ಮಾರ್ಚ್ 2010ರಿಂದ 10 ಬಾರಿ ಅಥವಾ 275 ಬೇಸಿಸ್ ಪಾಯಿಂಟ್‌ಗಳಷ್ಟು ರೆಪೋ ದರಗಳಲ್ಲಿ ಏರಿಕೆಗೊಳಿಸಿ ಆದೇಶ ಹೊರಡಿಸಿದೆ.

ಹಣದುಬ್ಬರ ದರ ಗರಿಷ್ಠ ಏರಿಕೆ ಕಂಡಿದ್ದರಿಂದ, ರಿಸರ್ವ್ ಬ್ಯಾಂಕ್‌ಗದೆ ರೆಪೋ ದರಗಳ ಏರಿಕೆ ಹೊರತುಪಡಿಸಿ ಬೇರೆ ದಾರಿಯಿಲ್ಲ ಎಂದು ಕೊಟಾಕ್ ಮಹೀಂದ್ರಾ ಬ್ಯಾಂಕ್‌ ಗ್ರೂಪ್‌ ಮುಖ್ಯ ಹಣಕಾಸು ಅಧಿಕಾರಿ ಜೈಮಿನ್ ಭಟ್ ಹೇಳಿದ್ದಾರೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹಾರಲು ಪರ್ಮಿಷನ್ ಬೇಕಾಗಿಲ್ಲ ಎಂದ ಶಶಿ ತರೂರ್: ಮುಂದಿನ ಸಲ ಬಿಜೆಪಿ ಪಕ್ಕಾ ಎಂದ ನೆಟ್ಟಿಗರು

ವಾಲ್ಮೀಕಿ ಹಗರಣ ಎಷ್ಟು ಕೋಟಿ, ವಂಚನೆಯಾಗಿದ್ದು ಹೇಗೆ ಎಂದ ಬಿಜೆಪಿ ನಾಯಕ ಬಂಗಾರು ಹನುಮಂತು

ವನ್ಯಜೀವಿ, ಮಾನವ ಸಂಘರ್ಷವನ್ನು ಪರಿಗಣಿಸದಿರುವುದೇ ಹುಲಿಗಳ ಸಾವಿಗೆ ಕಾರಣ: ಸುನೀಲ್ ಕುಮಾರ್‌ ವಿಷಾದ

ಅಮರನಾಥ ಯಾತ್ರೆಗೆ ಯಾತ್ರಿಕರ ಸಂಖ್ಯೆಯಲ್ಲಿ ಇಳಿಕೆ, ಇದೇ ಕಾರಣ ಎಂದ ಗವರ್ನರ್‌

ಬೇಸತ್ತು ಹೋದೆ: ಕ್ಯಾನ್ಸರ್‌ ರೋಗಿ ಅಜ್ಜಿಯನ್ನು ಬೀದಿಯಲ್ಲಿ ಬಿಡಲು ಕಾರಣ ಕೊಟ್ಟ ಮೊಮ್ಮಗ

Show comments