Select Your Language

Notifications

webdunia
webdunia
webdunia
webdunia

ಆರ್ಥಿಕಾಭಿವೃದ್ಧಿಗೆ ಪ್ರಥಮ ಆದ್ಯತೆ: ಪ್ರಣಬ್

ಆರ್ಥಿಕಾಭಿವೃದ್ಧಿಗೆ ಪ್ರಥಮ ಆದ್ಯತೆ: ಪ್ರಣಬ್
ನವದೆಹಲಿ , ಬುಧವಾರ, 27 ಮೇ 2009 (13:03 IST)
ದೇಶದ ಅಭಿವೃದ್ಧಿಯನ್ನು ಪರಿಷ್ಕರಿಸಲು ಯುಪಿಎ ಸರಕಾರ ಬದ್ಧವಾಗಿದ್ದು, ಆರ್ಥಿಕ ಅಭಿವೃದ್ಧಿ ದರವನ್ನು ಹೆಚ್ಚಿಸುವುದು ಅಗತ್ಯವಾಗಿದೆ ಎಂದು ಕೇಂದ್ರ ಹಣಕಾಸು ಖಾತೆ ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ.

ಯುಪಿಎ ಸರಕಾರದಲ್ಲಿ ವಿತ್ತ ಖಾತೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ಪ್ರಥಮ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ಮುಖರ್ಜಿ, ಜುಲೈ ಮೊದಲನೇ ವಾರದಲ್ಲಿ ಬಜೆಟ್ ಮಂಡಿಸಲಾಗುತ್ತಿದ್ದು, ಜುಲೈ 31 ರೊಳಗೆ ಸಂಸಂತ್ತಿನ ಅನುಮತಿ ಪಡೆಯಲಾಗುವುದು ಎಂದು ತಿಳಿಸಿದ್ದಾರೆ.

ಮುಂಬರುವ ಬಜೆಟ್ ಮಂಡನೆಯಲ್ಲಿ ಮೂಲಸೌಕರ್ಯಗಳ ವೆಚ್ಚ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಗಮನಹರಿಸುವಂತಹ ನೀತಿಗಳನ್ನು ಒಳಗೊಂಡಿರಲಿವೆ ಎಂದು ಮುಖರ್ಜಿ ಭರವಸೆ ನೀಡಿದರು.

ಪ್ರಸಕ್ತ ವರ್ಷದ ಆರ್ಥಿಕ ಕುಸಿತ ಕುರಿತಂತೆ ಕಳವಳ ವ್ಯಕ್ತಪಡಿಸಿದ ಸಚಿವ ಮುಖರ್ಜಿ ಸರಕಾರ ಆರ್ಥಿಕ ಕುಸಿತವನ್ನು ತಡೆಯಲು ಸರಕಾರ ಹಲವಾರು ಯೋಜನೆಗಳು, ಪ್ಯಾಕೇಜ್‌ಗಳನ್ನು ಬಿಡುಗಡೆ ಮಾಡಲು ಉದ್ದೇಶಿಸಿದೆ ಎಂದು ವಿವರಣೆ ನೀಡಿದರು.

Share this Story:

Follow Webdunia kannada