Select Your Language

Notifications

webdunia
webdunia
webdunia
webdunia

ಆಗಸಕ್ಕೇರಿದ ಚಿನ್ನದ ಬೆಲೆ, 10 ಗ್ರಾಂ.ಗೆ 25,978 ರೂ.

ಆಗಸಕ್ಕೇರಿದ ಚಿನ್ನದ ಬೆಲೆ, 10 ಗ್ರಾಂ.ಗೆ 25,978 ರೂ.
ನವದೆಹಲಿ , ಸೋಮವಾರ, 8 ಆಗಸ್ಟ್ 2011 (13:50 IST)
ಅಮೆರಿಕದ ಕ್ರೆಡಿಟ್ ರೇಟಿಂಗ್ ನಿಕೃಷ್ಟ ಸ್ಥಿತಿಗೆ ಇಳಿಕೆಯಾಗಿರುವ ಪರಿಣಾಮ, ಬದಲಿ ಹೂಡಿಕೆಯಾಗಿ ಚಿನ್ನದ ಮೇಲೆ ಬೇಡಿಕೆ ಹೆಚ್ಚಾಗಿ ಚಿನ್ನದ ಡಾಲರ್ ಮೌಲ್ಯವೂ ಹೆಚ್ಚಾಗಿರುವುದಲ್ಲದೆ, ಸಗಟು ವ್ಯಾಪಾರಿಗಳ ಹೆಚ್ಚುವರಿ ಖರೀದಿಯಿಂದ ಸೋಮವಾರದ ಆರಂಭಿಕ ವಹಿವಾಟಿನಲ್ಲಿ 536 ರೂಪಾಯಿ ಏರಿಕೆಯೊಂದಿಗೆ ಹತ್ತು ಗ್ರಾಂ.ಚಿನ್ನದ ಬೆಲೆ 25,978 ರೂಪಾಯಿಯ ಗರಿಷ್ಠ ಮಟ್ಟಕ್ಕೆ ತಲುಪಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಜಾಗತಿಕ ಆರ್ಥಿಕ ಸ್ಥಿತಿ ಕುಸಿಯುತ್ತಿರುವ ಹಿನ್ನೆಲೆಯಲ್ಲಿ, ಬಹುಕೋಟಿ ಮೌಲ್ಯವನ್ನು ಚಿನ್ನದ ಮೇಲೆ ಹೂಡಿಕೆ ಮಾಡಲು ಪ್ರೇರೇಪಿಸುತ್ತಿರುವುದರ ಪರಿಣಾಮ ಏಷ್ಯಾದ ವಿದೇಶಿ ವಹಿವಾಟಿನಲ್ಲಿ ಪ್ರತೀ ಔನ್ಸ್ (28 ಗ್ರಾಂ) ಚಿನ್ನದ ಬೆಲೆ ಹಿಂದೆಂದೂ ಕಂಡಿರದ 1,700 ಡಾಲರ್‌ಗಿಂತಲೂ ಏರಿಕೆಯಾಗಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಏಪ್ರಿಲ್ ವಿತರಣೆಗಾಗಿ ಇರುವ ಚಿನ್ನದ ಬೆಲೆ ಶೇಕಡಾ 2.10 ಏರಿಕೆಯೊಂದಿಗೆ ಹತ್ತು ಗ್ರಾಂ.ಗೆ 536 ರೂಪಾಯಿ ಅನಿರೀಕ್ಷಿತ ಏರಿಕೆಯೊಂದಿಗೆ 25,978 ರೂಪಾಯಿಯ ಗರಿಷ್ಠ ಮಟ್ಟವನ್ನು ತಲುಪಿತ್ತು.

ಇದೇ ರೀತಿ, ಫೆಬ್ರವರಿ ತಿಂಗಳಿನ ವಿತರಣೆಗಾಗಿರುವ ಬೆಲೆ ಹತ್ತು ಗ್ರಾಂ. ಚಿನ್ನಕ್ಕೆ 560 ರೂಪಾಯಿ ಏರಿಕೆಯೊಂದಿಗೆ 25,858 ರೂಪಾಯಿ ಗರಿಷ್ಠ ಮಟ್ಟವನ್ನು ತಲುಪಿತ್ತು.

Share this Story:

Follow Webdunia kannada