Select Your Language

Notifications

webdunia
webdunia
webdunia
webdunia

ಅಕ್ಷಯ ತೃತೀಯ; ಅಂಚೆ ಕಚೇರಿಯಲ್ಲಿ ಚಿನ್ನಕ್ಕೆ ರಿಯಾಯಿತಿ

ಅಕ್ಷಯ ತೃತೀಯ; ಅಂಚೆ ಕಚೇರಿಯಲ್ಲಿ ಚಿನ್ನಕ್ಕೆ ರಿಯಾಯಿತಿ
ನವದೆಹಲಿ , ಸೋಮವಾರ, 23 ಏಪ್ರಿಲ್ 2012 (16:09 IST)
PR
ಅಕ್ಷಯ ತೃತೀಯ ಪ್ರಯುಕ್ತ ರಾಜಧಾನಿ ದೆಹಲಿಯಲ್ಲಿನ ಸುಮಾರು 31 ಪ್ರಮುಖ ಅಂಚೆ ಕಚೇರಿಗಳಲ್ಲಿ ಪ್ರತೀ ಚಿನ್ನದ ನಾಣ್ಯದ ಮೇಲೆ ಶೇಕಡಾ 6 ರಷ್ಟು ರಿಯಾಯಿತಿ ಘೋಷಿಸಲಾಗಿದೆ. 24 ಕ್ಯಾರೆಟ್ ಹಾಗೂ 99.99 ಶುದ್ಧತೆಯ 0.5, 1, 5, 8, 10, 20 ಮತ್ತು 50 ಗ್ರಾಂ. ತೂಕದ ನಾಣ್ಯಗಳಿಗೆ ಈ ರಿಯಾಯಿತಿ ಅನ್ವಯವಾಗುತ್ತದೆ. ಈ ಕೊಡುಗೆ ಕೇವಲ ಏಪ್ರಿಲ್ 23 ಮತ್ತು 24ರಂದು ಮಾತ್ರ ಇರಲಿದೆ.

ಕಳೆದ ವರ್ಷದ ಇದೇ ವೇಳೆಗೆ ಹತ್ತು ಗ್ರಾಂ.ಗೆ 22,000 ರೂಪಾಯಿಯಿದ್ದರೆ, ಪ್ರಸಕ್ತ ವರ್ಷದಲ್ಲಿ 28,000 ರೂ.ಗೆ ಬೆಲೆ ಏರಿಕೆಯಾಗಿದೆ.

ದೆಹಲಿಯ ಸಿವಿಲ್ ಲೈನ್ಸ್, ಕನೌಟ್ ಪ್ಲೇಸ್, ಗ್ರೇಟರ್ ಕೈಲಾಸ್, ಹೌಝ್ ಖಾಸ್, ಲಜಪತ್ ನಗರ್, ರೋಹಿನಿ ಸೆಕ್ಷನ್-7 ಸೇರಿದಂತೆ ಸುಮಾರು 31 ಪ್ರದೇಶಗಳಲ್ಲಿರುವ ಅಂಚೆ ಕಚೇರಿಗಳಲ್ಲಿ ಮಾತ್ರ ರಿಯಾಯಿತಿ ಮಾರಾಟ ಘೋಷಿಸಿರುವುದಾಗಿ ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಪ್ರಕಟಿಸಿದೆ.


Share this Story:

Follow Webdunia kannada