Select Your Language

Notifications

webdunia
webdunia
webdunia
webdunia

ಅಕ್ಷಯ ತೃತಿಯ ದಿನದಂದು ವಹಿವಾಟು ಅವಧಿ ವಿಸ್ತರಣೆ

ಅಕ್ಷಯ ತೃತಿಯ ದಿನದಂದು ವಹಿವಾಟು ಅವಧಿ ವಿಸ್ತರಣೆ
ಮುಂಬೈ , ಭಾನುವಾರ, 22 ಏಪ್ರಿಲ್ 2012 (08:56 IST)
PTI
ಇದೇ 24ರ ಅಕ್ಷಯ ತೃತೀಯ ದಂದು ಗೋಲ್ಡ್ ಇಟಿಎಫ್ ವಹಿವಾಟು ರಾತ್ರಿ 8 ಗಂಟೆಯವರೆಗೆ ವಿಸ್ತರಿಸಲಾಗಿದ್ದು, ಅಂದು ವಹಿವಾಟು ಶುಲ್ಕ ಇರುವುದಿಲ್ಲ ಎಂದು ರಾಷ್ಟ್ರೀಯ ಷೇರು ವಿನಿಮಯ (ಎನ್‌ಎಸ್‌ಇ) ಕೇಂದ್ರ ಹೇಳಿದೆ.

ಇತರೆ ದಿನ ಗೋಲ್ಡ್ ಇಟಿಎಫ್ ವಹಿವಾಟು ಬೆಳಿಗ್ಗೆ 9.15ರಿಂದ ಮಧ್ಯಾಹ್ನ 3.30ರವರೆಗೆ ಇರುತ್ತದೆ. ಅಕ್ಷಯ ತೃತಿಯದಂದು ಸಂಜೆ 4.30ರಿಂದ ಪುನಃ ವಹಿವಾಟು ಆರಂಭಗೊಂಡು ರಾತ್ರಿ 8ಗಂಟೆವರೆಗೂ ನಡೆಯಲಿದೆ ಎಂದು ಎನ್‌ಎಸ್‌ಇ ಪ್ರಕಟಣೆ ತಿಳಿಸಿದೆ.

2011ರ ಅಕ್ಷಯ ತೃತೀಯದಂದು ರೂ846 ಕೋಟಿಯಷ್ಟು ಗೋಲ್ಡ್ ಇಟಿಎಫ್ ವಹಿವಾಟು ನಡೆದಿತ್ತು.

Share this Story:

Follow Webdunia kannada