Select Your Language

Notifications

webdunia
webdunia
webdunia
webdunia

ಅಕ್ರಮ ವಲಸಿಗರ ನೇಮಕಾತಿಯ ಯುಕೆ ಕಂಪನಿಗಳಿಗೆ ದಂಡ

ಅಕ್ರಮ ವಲಸಿಗರ ನೇಮಕಾತಿಯ ಯುಕೆ ಕಂಪನಿಗಳಿಗೆ ದಂಡ
ಲಂಡನ್ , ಮಂಗಳವಾರ, 6 ಮೇ 2008 (18:44 IST)
ಭಾರತ, ಪಾಕಿಸ್ತಾನ ಮತ್ತು ಇತರೇ ದೇಶಗಳ ಅಕ್ರಮ ವಲಸಿಗರನ್ನು ನೇಮಿಸಿಕೊಂಡಿರುವ ಬ್ರಿಟನ್ನಿನ ಹಲವಾರು ಕಂಪೆನಿಗಳಿಗೆ ದಂಡ ವಿಧಿಸಲಾಗಿದೆ. ಭಾರತದ ರೆಸ್ಟೋರೆಂಟ್ ಸೇರಿದಂತೆ ಹಲವಾರು ಕಂಪನಿಗಳ ಮೇಲೆ ಅಲ್ಲಿನ ಸರಕಾರ, ಕಳೆದ ಫೆಬ್ರವರಿಯಿಂದೀಚೆಗೆ ಜಾರಿಗೆ ಬಂದ ಹೊಸ ಕಾನೂನಿನ ಪ್ರಕಾರ 500,000 ಪೌಂಡ್ ದಂಡ ವಿಧಿಸಿದೆ.

ಸುಮಾರು 137ಕ್ಕೂ ಅಧಿಕ ಕಂಪನಿಗಳ ಮೇಲೆ ದಂಡ ವಿಧಿಸಿದ್ದು, ಇದರಲ್ಲಿ ಬಹುತೇಕ ಭಾರತದ ಹೋಟೆಲ್‌ಗಳು ಸೇರಿವೆ. ಅಡುಗೆಯವರ ಕೊರತೆಯಿಂದ ಬಳಲುತ್ತಿರುವ ಹೋಟೆಲ್ ಮಾಲೀಕರು ಈ ರೀತಿಯ ನೇಮಕಾತಿಯಿಂದಾಗಿ ಸಿಕ್ಕಿ ಬಿದ್ದಿದ್ದು, ಪ್ರತಿಯೊಬ್ಬ ಉದ್ಯೋಗಿಗೆ ತಲಾ 10,000 ಪೌಂಡ್‌ನಂತೆ ದಂಡ ತೆರಬೇಕಾಗಿದೆ.

ಕಳೆದ ಎರಡು ತಿಂಗಳಲ್ಲಿ ನಡೆಸಲಾದ ಕಾರ್ಯಾಚರಣೆಯಲ್ಲಿ ಶೇ.40ರಷ್ಟು ವಲಸೆಗಾರರನ್ನು ಅಕ್ರಮವಾಗಿ ಕೆಲಸಕಿಟ್ಟು ಕೊಂಡಿರುವುದು ಬೆಳಕಿಗೆ ಬಂದಿದ್ದು , ಇದರಿಂದ 500,000 ಪೌಂಡ್ ದಂಡ ಸಂಗ್ರವಾಗಿದೆ. ನಿರಂತರ ತಪ್ಪಿತಸ್ಥರೂ ಕೂಡ ಜೈಲು ಶಿಕ್ಷೆ ಅನುಭವಿಬೇಕಾಗಿದೆ.

ಅಕ್ರಮ ವಲಸಿಗರು ಕಾರ್ಯನಿರ್ವಹಿಸುತ್ತಿದ್ದಾರೆಂಬ ಮಾಹಿತಿಯಾಧಾರದಲ್ಲಿ ಕೋಳಿ ಮಾಂಸ ಸಂಸ್ಕರಣಾ ಕಂಪೆನಿಯೊಂದರ ಮೇಲೆ ದಾಳಿ ನಡೆಸಿದ ವೇಳೆ ಕೆಲವರು ಸಿಕ್ಕಿಬಿದ್ದಿದ್ದಾರೆ. ದೊಡ್ಡ ಸಂಸ್ಕರಣಾ ಕೊಠಡಿ ಒಂದರಲ್ಲಿ 56 ಮಂದಿ ವಾಸುತ್ತಿದ್ದು, ಅವರಲ್ಲಿ 22 ಮಂದಿ ಅಕ್ರಮ ವಲಸಿಗರಾಗಿದ್ದು, ಇವರಲ್ಲಿ ಭಾರತ, ಪಾಕಿಸ್ತಾನ, ಆಫ್ಘಾನಿಸ್ತಾನ ಮತ್ತು ಇತರೇ ರಾಷ್ಟ್ರಗಳ ಅಕ್ರಮ ವಲಸಿಗರು ಸಿಕ್ಕಿಬಿದ್ದಿದ್ದರು.

Share this Story:

Follow Webdunia kannada