Select Your Language

Notifications

webdunia
webdunia
webdunia
webdunia

ಹೇರ್‌ಲೈನ್ ಇಂಟರ್‌ನ್ಯಾಷನಲ್‌ನಿಂದ ಕ್ಲಿಪ್-ಆನ್ ಫ್ರಿಂಜಸ್ ಸೇರಿದಂತೆ ಕೂದಲು ವಿನ್ಯಾಸದ ಪ್ಯಾಕೇಜ್ ಬಿಡುಗಡೆ

ಹೇರ್‌ಲೈನ್ ಇಂಟರ್‌ನ್ಯಾಷನಲ್‌ನಿಂದ ಕ್ಲಿಪ್-ಆನ್ ಫ್ರಿಂಜಸ್ ಸೇರಿದಂತೆ ಕೂದಲು ವಿನ್ಯಾಸದ ಪ್ಯಾಕೇಜ್ ಬಿಡುಗಡೆ
ಬೆಂಗಳೂರು , ಸೋಮವಾರ, 9 ಡಿಸೆಂಬರ್ 2013 (14:17 IST)
PR
ಪಾರ್ಟಿಗೆ ಹೋಗಲು ನೀವು ಹೊರಟು ನಿಂತಿದ್ದೀರಾ, ಆದರೆ ಪಾರ್ಲರ್‌ಗೆ ಭೇಟಿ ನೀಡಲು ನಿಮ್ಮ ಬಳಿ ಸಮಯವಿಲ್ಲ.. ಇಂತಹ ಸಮಸ್ಯೆಗೆ ಇಲ್ಲೊಂದು ಸಿದ್ಧ ಪರಿಹಾರವಿದೆ. ಕೇವಲ ಕ್ಲಿಪ್ ಧರಿಸಿ ಕೂದಲು ವಿನ್ಯಾಸ ಮಾಡಿಕೊಳ್ಳಲು ಫ್ರಿಂಜಸ್, ಪೋನಿ-ಟೇಲ್ ಎಕ್ಸ್‌ಟೆನ್ಷನ್ಸ್ ಮತ್ತು ಹೇರ್ ಹೈಲೆಟ್ಸ್ ಪರಿಹಾರೋಪಾಯಗಳನ್ನು ಬಳಸಿ ನಿಮ್ಮ ಅಂದವನ್ನು ಕ್ಷಣಾರ್ಧದಲ್ಲಿ ಹೆಚ್ಚಿಸಿಕೊಳ್ಳಬಹುದಾಗಿದೆ. ಹೇರ್‌ಲೈನ್ ಇಂಟರ್‌ನ್ಯಾಷನಲ್ ಹೇರ್ ಮತ್ತು ಸ್ಕಿನ್ ಕ್ಲಿನಿಕ್ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಕಸ್ಟಮೈಸ್ಡ್ ಕ್ಲಿಪ್-ಆನ್ ಫ್ರಿಂಜಸ್, ಪೋನಿ-ಟೇಲ್ ಎಕ್ಸ್‌ಟೆನ್ಷನ್ ಮತ್ತು ಹೇರ್ ಹೈಲೆಟ್ಸ್ ಅನ್ನು ಬಿಡುಗಡೆ ಮಾಡಿದೆ.
ಕ್ಲಿಪ್-ಆನ್ ಫ್ರಿಂಜಸ್‌ನಲ್ಲಿ ಹಲವು ವಿಧಗಳಿದ್ದು ನಿಮ್ಮ ಅಭಿರುಚಿ ಹಾಗೂ ಸiರ್ಥ್ಯಕ್ಕೆ ತಕ್ಕಂತೆ ಇವು ದೊರೆಯುತ್ತವೆ. ನೇರ ಬ್ಯಾಂಗ್ಸ್, ನೀಳ ಕೂದಲಿನ ಥರದ ಬ್ಯಾಂಗ್ಸ್, ಕೆಳಗೆ ಮೇಲೆ ವಿಂಗಡಿಸಿದ ಅಕಾರದ ಕೂದಲು ಶೈಲಿ ಸೃಷ್ಟಿಸಬಲ್ಲ ಕ್ಲಿಪ್‌ಗಳು ಇಲ್ಲಿ ಲಭ್ಯವಿದೆ. ಕೂದಲಿಗೆ ಹಾಕಿದ ಫ್ರಿಂಜಸ್ ನಿಮ್ಮ ಮುಖದ ಭಾಗಕ್ಕೆ ಸ್ವಲ್ಟ ಮಟ್ಟಿಗೆ ಜೋತುಬಿದ್ದು, ನಿಮ್ಮ ಚೆಲುವನ್ನು ಇಮ್ಮಡಿಗೊಳಿಸುತ್ತದೆ.

ಕ್ಲಿಪ್-ಆನ್ ಬ್ಯಾಂಗ್ಸ್‌ಗಳೂ ಕೂಡ ನೀಳ ಅಂಗಲ್ಡ್ ಶೈಲಿಯನ್ನು ಸೃಷ್ಟಿಸಲು ನೇರವಾಗುತ್ತದೆ. ಫ್ರಿಂಜಸ್ ಫ್ಲೈರ‍್ಸ್ ಕೂಡ ಲಭ್ಯವಿದೆ.

ಪೋನಿ-ಟೇಲ್ ಎಕ್ಸ್‌ಟೆನ್ಷನ್‌ನಲ್ಲಿ ನಿಮ್ಮ ಆಯ್ಕೆಗೆ ತಕ್ಕಂತಹ ಹೆಂಚ್‌ಗಳಿದ್ದು, ಪೋನಿಟೆಲ್ಸ್, ಪ್ಲೇಟ್ಸ್, ಪೆಟೈಟ್ ಮತ್ತು ಲಾಂಗ್ ಪೋನಿಸ್ ಮತ್ತಿತರ ಶೈಲಿಗಳಿವೆ. ಈ ಪೋನಿಟೇಲ್ಸ್ ಎಕ್ಸ್‌ಟೆನ್ಷನ್ನು ವಧುವಿನ ಸಿಂಗಾರಕ್ಕೆ ಬಳಸಬಹುದಾಗಿದೆ. ಹೈಲೈಟ್ ಎಕ್ಸ್‌ಟೆನ್ಷನ್‌ನಲ್ಲಿ ಸ್ಥಳದಲ್ಲಿಯೇ ಕೂದಲನ್ನು ಬ್ಲೀಚ್ ಮಾಡಿಕೊಳ್ಳುವ ಕಲರ್ ಹಾಕಿಕೊಳ್ಳುವ ಅವಕಾಶವಿದೆ. ಇದರಲ್ಲಿ ಹೇರ್ ಟೆಕ್ಚರ್‌ಗೆ ಅನುಗುಣವಾಗಿ ವಿವಿಧ ಬಗೆಯ ಬಣ್ಣಗಳನ್ನು ಈ ಹೈಲೈಟ್ ಎಕ್ಸ್‌ಟೆನ್ಷನ್‌ನಲ್ಲಿ ಹಾಕಿಕೊಳ್ಳಬಹುದಾಗಿದೆ. ಬ್ರೌನ್, ಬ್ಲಾಕ್ ಅಲ್ಲದೆ ಅಭಿರುಚಿಗೆ ತಕ್ಕಂತಹ ಬ್ಲೆಂಡೆಡ್ ಕಲರ್ ಹಾಕಿಕೊಳ್ಳಲು ಅವಕಾಶವಿದೆ. ನಿಮ್ಮ ಕೂದಲಿನ ಹೊಳಪು ಗಾತ್ರಕ್ಕೆ ಅನುಗುಣವಾಗಿ ನಿಮ್ಮ ಅಭಿರುಚಿಗೆ ಸರಿಹೊಂದುವ ಕಲರ್‌ಗಳನ್ನು ಇದರಲ್ಲಿ ಹಾಕಿಕೊಳ್ಳಬಹುದಾಗಿದೆ. ಹೇರ್‌ಲೈನ್ ಸ್ವಾಭಾವಿಕವಾಗಿ ಗುಣಮಟ್ಟದ ಕಲರ್‌ಗಳನ್ನು ಒದಗಿಸುತ್ತದೆ. ಕ್ಲಿಪ್ ಆನ್ ಫ್ರಿಂಜಸ್, ಪೋನಿಟೇಲ್ ಮತ್ತು ಹೈಲೈಟ್ ಎಕ್ಸ್‌ಟೆನ್‌ಷನ್ಸ್ ಮೂಲಕ ನೀವು ವಿವಿಧ ಶೈಲಿಯ ಹೇರ್‌ಸ್ಟೈಲ್‌ನ ಪ್ರಯೋಗ ನಡೆಸಬಹುದಾಗಿದೆ. ಯಾವುದೇ ಶೈಲಿಗೆ ಬಹುದಿನಗಳ ಕಾಲ ಅಂಟಿಕೊಳ್ಳದೆ ವಿವಿಧ ಹೇರ್‌ಸ್ಟೈಲ್‌ಗಳನ್ನು ಮಾಡಿಕೊಳ್ಳಬಹುದಾಗಿದೆ. ಅಲ್ಲದೆ ನೀವು ಕೆಮಿಕಲ್‌ಗಳ ರೂಪದ ಪ್ರಸಾದನ ಸಾಮಗ್ರಿಗಳನ್ನು ಬಳಸುವುದು ತಪ್ಪುತ್ತದೆ. ಕೂದಲು ಉದುರುವುದು, ಹೇರ್ ಡ್ಯಾಮೇಜ್
ದೀರ್ಫಾವಧಿಗೆ ತಪ್ಪುತ್ತದೆ.

ನೀವು ಹೆಲ್‌ಲೈನ್‌ಗೆ ಬಂದರೆ ಪ್ರತಿಯೊಂದು ಕ್ರಿಯೆಯೂ ಸರಿದಾರಿಯಲ್ಲಿ ನಡೆಯಲು
ಅನುಕೂಲವಾಗುವಂತೆ ಎಕ್ಸ್‌ಟೆನ್ಷನ್ ಮತ್ತು ಚಿಕಿತ್ಸೆ ಪದ್ಧತಿಗಳನ್ನು ಕಂಪ್ಯೂಟರ್‌ನಲ್ಲಿ ದಾಖಲು ಮಾಡಲಾಗುತ್ತದೆ. ಗ್ರಾಹಕರ ಕೂದಲ ಮಾದರಿ ತೆಗೆದುಕೊಂಡು ಕಂಪ್ಯೂಟರೈಸ್ಡ್‌ಗೆ ಕಳುಹಿಸಲಾಗಿದೆ. ಕೂದಲಿನ ಬಣ್ಣ, ಟೆಕ್ಚ್ಸರ್, ಥೀಕ್‌ನೆಸ್ ಅನುಗುಣವಾಗಿ ಯಾವ ರೀತಿಯ ಚಿಕಿತ್ಸೆ ಹಾಗೂ ಹೇರ್‌ಸ್ಟೈಲ್ ಅಳವಡಿಸಿಕೊಳ್ಳಬಹುದು ಎಂಬುದನ್ನು ನಿರ್ಧರಿಸಲಾಗುತ್ತದೆ. ನೀಳ ಕೂದಲು, ವೇವಿ, ಫ್ರಿಜಿ ಅಥವಾ ಪಾರ್ಮ್‌ಡ್ ಈ ಎಲ್ಲಾ ಎಕ್ಸ್‌ಟೆನ್ಷನ್‌ಗಳನ್ನು ಹೇರ್‌ಲೈನ್ ಸ್ವಾಭಾವಿಕ ಹ್ಯೂಮನ್ ಹೇರ್‌ಗಳಿಂದ ಮಾಡುತ್ತದೆ. ಹೀಗಾಗಿ ನಿಮ್ಮ ಒರಿಜನಲ್ ಕೂದಲಿಗೆ ಎಕ್ಸ್‌ಟೆನ್ಷನ್ಸ್ ಫರ್‌ಫೆಕ್ಟ್ ಆಗಿ ಮ್ಯಾಚ್ ಆಗುತ್ತದೆ" ಎನ್ನುತ್ತಾರೆ ಹೇರ್‌ಲೈನ್ .

Share this Story:

Follow Webdunia kannada