Select Your Language

Notifications

webdunia
webdunia
webdunia
webdunia

ಜ್ಯೋತಿಷ್ಯದಿಂದ ದೂರವಿರಲು ಹೂಡಿಕೆದಾರರಿಗೆ ಸೆಬಿ ಎಚ್ಚರಿಕೆ

ಜ್ಯೋತಿಷ್ಯದಿಂದ ದೂರವಿರಲು ಹೂಡಿಕೆದಾರರಿಗೆ ಸೆಬಿ ಎಚ್ಚರಿಕೆ
ನವದೆಹಲಿ , ಸೋಮವಾರ, 15 ಫೆಬ್ರವರಿ 2010 (19:54 IST)
ಶೇರುಪೇಟೆಯಲ್ಲಿ ಹೂಡಿಕೆ ಮಾಡಿ ಲಾಭಗಳಿಸುವುದು ಅದೃಷ್ಟ ಅಥವಾ ತಾರಾಬಲದ ಮೇಲೆ ನಿರ್ಭರವಾಗಿರುತ್ತದೆ ಎಂದು ಹೂಡಿಕೆದಾರರು ವರ್ಣಿಸುತ್ತಾರೆ.ಆದರೆ ಶೇರುಪೇಟೆ ನಿಯಂತ್ರಕ ಸಂಸ್ಥೆ ಸೆಬಿ,ಜ್ಯೋತಿಷ್ಯ ಭವಿಷ್ಯವನ್ನು ನಂಬಿ ಹೂಡಿಕೆ ಮಾಡುವ ಬಗ್ಗೆ ಹೂಡಿಕೆದಾರರಿಗೆ ಎಚ್ಚರಿಕೆ ನೀಡಿದೆ.

ಶೇರುದರಗಳು ಹಾಗೂ ಮಾರುಕಟ್ಟೆಗಳು ಜ್ಯೋತಿಷ್ಯ ಭವಿಷ್ಯದ ಮಾರ್ಗದರ್ಶನದ ಮೇಲೆ ಅವಲಂಬಿತವಾಗಿರುವುದಿಲ್ಲವೆಂದು ಸೆಕ್ಯೂರಿಟೀಸ್ ಆಂಡ್ ಎಕ್ಸ್‌ಚೇಂಜ್ ಬೋರ್ಡ್‌ ಆಫ್ ಇಂಡಿಯಾ ಇತ್ತೀಚೆಗೆ ಹೂಡಿಕೆದಾರರಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ.

ಶೇರುಪೇಟೆಯಲ್ಲಿ ಹೂಡಿಕೆ ಮಾಡುವ ಹೂಡಿಕೆದಾರರು ಸೆಬಿ ಎಚ್ಚರಿಕೆಯನ್ನು ಗಮನಿಸುವುದಿಲ್ಲ.ತಮ್ಮ ಶೇರು ಮಾರುಕಟ್ಟೆ ಜ್ಯೋತಿಷ್ಯದ ಆಧಾರದ ಮೇಲೆ ಹೂಡಿಕೆ ಮಾಡುತ್ತಾರೆ ಎನ್ನಲಾಗಿದೆ.

ನಮ್ಮ ಜ್ಯೋತಿಷ್ಯದ ಭವಿಷ್ಯ ಸತ್ಯವಾಗಿದೆ ಎನ್ನುವುದು ಸಾಬೀತಾಗಿದ್ದರಿಂದ ಹೂಡಿಕೆದಾರರು ನಮ್ಮ ಹತ್ತಿರ ಬರುತ್ತಾರೆ.ಒಂದು ವೇಳೆ ನಮ್ಮ ಜ್ಯೋತಿಷ್ಯ ಸುಳ್ಳೆಂದು ಸಾಬೀತಾದಲ್ಲಿ ಗ್ರಾಹಕರು ಮರಳಿ ನಮ್ಮ ಹತ್ತಿರ ಬರುವುದಿಲ್ಲ. ಈ ಹಿಂದೆ ಹಲವಾರು ಬಾರಿ ನಮ್ಮ ಭವಿಷ್ಯ ಸತ್ಯವೆಂದು ಸಾಬೀತಾಗಿದೆ ಎಂದು ಖ್ಯಾತ ಜ್ಯೋತಿಷಿ ಹೇಳಿಕೆ ನೀಡಿದ್ದಾರೆ.

ಭಾರತದಲ್ಲಿ ನೂರಾರು ಜ್ಯೋತಿಷಿಗಳು ಶುಲ್ಕವನ್ನು ಪಡೆದು ಶೇರುಪೇಟೆ ಏರಿಳಿಕೆ ಕುರಿತಂತೆ ಹೂಡಿಕೆದಾರರಿಗೆ ಸಲಹೆ ನೀಡುತ್ತಾರೆ.ಕೆಲ ಜ್ಯೋತಿಷಿಗಳು ಸಂಪೂರ್ಣ ವಿವರಗಳನ್ನು ಹೊಂದಿರುವ ವೆಬ್‌ಸೈಟ್‌ಗಳಉ ಲಭ್ಯವಿವೆ.

ಬಹುತೇಕ ಜ್ಯೋತಿಷಿಗಳು ಮತ್ತು ವೆಬ್‌ಸೈಟ್‌ಗಳು 1ಲಕ್ಷ ರೂಪಾಯಿ ವಾರ್ಷಿಕ ಶುಲ್ಕ ಪಡೆದು ಸಲಹೆಗಳನ್ನು ನೀಡುತ್ತವೆ. ಆದರೆ ಕೆಲವು ಕಡೆ ಮಾಸಿಕ ಶುಲ್ಕವನ್ನು ಪಡೆದು ಕೂಡಾ ಶೇರುಪೇಟೆ ಹೂಡಿಕೆ ಕುರಿತಂತೆ ಸಲಹೆಗಳನ್ನು ನೀಡುತ್ತಾರೆ.

ಶೇರುಪೇಟೆಯ ಖ್ಯಾತ ಜ್ಯೋತಿಷಿ ಸತೀಶ್ ಶರ್ಮಾ ಅವರನ್ನು ಸಂಪರ್ಕಿಸಿದಾಗ, ಸೆಬಿಯ ನೋಟಿಸ್ ಬಗ್ಗೆ ನನಗೆ ಮಾಹಿತಿಯಿಲ್ಲ.ಆದರೆ ಹೂಡಿಕೆದಾರರು ಭವಿಷ್ಯದಲ್ಲಿ ದಿನಗಳಲ್ಲಿ ಉತ್ತಮ ಹಣವನ್ನು ಮರಳಿ ಪಡೆಯಲು ಶೇರುಪೇಟೆಯಲ್ಲಿ ಹೂಡಿಕೆ ಮಾಡುತ್ತಾರೆ.ಭವಿಷ್ಯದ ಬಗ್ಗೆ ಜ್ಯೋತಿಷ್ಯಶಾಸ್ತ್ರ ಮಾತ್ರ ಹೇಳಲು ಸಾಧ್ಯ ಎಂದು ಹೇಳಿದ್ದಾರೆ.

Share this Story:

Follow Webdunia kannada