Select Your Language

Notifications

webdunia
webdunia
webdunia
webdunia

ಗ್ರಾಹಕರಿಗೆ ಬರೆ : ಮತ್ತೆ ಅಡುಗೆ ಅನಿಲ ಸಿಲಿಂಡರ್‌ಗಳ ದರ ಹೆಚ್ಚಳ

ಗ್ರಾಹಕರಿಗೆ ಬರೆ : ಮತ್ತೆ ಅಡುಗೆ ಅನಿಲ ಸಿಲಿಂಡರ್‌ಗಳ ದರ ಹೆಚ್ಚಳ
ನವದೆಹಲಿ , ಮಂಗಳವಾರ, 10 ಡಿಸೆಂಬರ್ 2013 (19:07 IST)
PR
ಗ್ರಾಹಕರು ಖರೀದಿಸುವ ಹೆಚ್ಚುವರಿ ಅಡುಗೆ ಅನಿಲ ಸಿಲಿಂಡರ್‌ಗಳ ದರವನ್ನು ರೂ. 3.46ರಷ್ಟು ಏರಿಕೆ ಮಾಡಲಾಗಿದೆ.

ಇದರಿಂದ ಜನರಿಗೆ ಬಿಸಿ ತಟ್ಟಿದಂತಾಗಿದೆ. 14.2 ಕೆ.ಜಿ ಸಿಲಿಂಡರ್‌ಗೆ ರು. 3.46 ಹೆಚ್ಚಳ ಮಾಡಲಾಗಿದ್ದು, ಚಿಲ್ಲರೆ ಮಾರಟದ ಬೆಲೆಯನ್ನು ಏರಿಸಲಾಗಿದೆ ಎಂದು ತೈಲ ಸಚಿವಾಲಯ ಮಂಗಳವಾರ ತಿಳಿಸಿದೆ.

ಇಂದಿನಿಂದಲ್ಲೇ ಬೆಲೆ ಏರಿಕೆ ಜಾರಿಯಾಗಲಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸಿಲಿಂಡರ್ ಬೆಲೆ ಏರಿಕೆ ಮಾಡಲಾಗಿತ್ತು. ಇದಾದ ಕೆಲವು ತಿಂಗಳಲ್ಲೇ ಮತ್ತೆ ಸಿಲಿಂಡರ್ ಬೆಲೆ ಏರಿಕೆಗೆ ತೈಲ ಕಂಪನಿಗಳು ಒತ್ತಡ ಹೇರಿದ್ದವು. ಆದರೆ ಬೆಲೆ ಏರಿಕೆಗೆ ಕೇಂದ್ರ ಸರ್ಕಾರ ತಡೆ ಹಿಡಿದಿತ್ತು.

ಸಿಲಿಂಡರ್ ವಿತರಕರ ಕಮಿಷನ್ ಶೇ9 ರಷ್ಟು ಹೆಚ್ಚಾದ ಹಿನ್ನಲೆಯಲ್ಲಿ, ಈಗ ಮತ್ತೇ ಸಿಲಿಂಡರ್ ಬೆಲೆ ಏರಿಕೆ ಮಾಡಲಾಗಿದೆ ಎಂದು ಸಚಿವಾಲಯ ಹೇಳಿದೆ.

Share this Story:

Follow Webdunia kannada