ಲೆಕ್ಕಾ ಇಲ್ಲ ಕಣ್ರೀ..

Webdunia
ಗುರುವಾರ, 20 ನವೆಂಬರ್ 2014 (14:36 IST)
ಭಾರತೀಯ: ನಂಗೆ ನಾಲ್ಕು ತಂಗಿಯರು ಮತ್ತು ಮೂರು ಅಣ್ಣಂದಿರಿದ್ದಾರೆ... ನಿಂಗೆ?
 
ಅಮೆರಿಕನ್: ನನಗೆ ಅಕ್ಕ-ತಂಗಿ, ಅಣ್ಣ-ತಮ್ಮಂದಿರಿಲ್ಲ. ಆದರೆ ಮೊದಲ ತಂದೆಯಿಂದ ಐವರು ತಾಯಿಯರು ಹಾಗೂ ಮೊದಲ ತಾಯಿಯಿಂದ ನಾಲ್ವರು ತಂದೆಯರಿದ್ದಾರೆ..!
 
*****
ಬ್ಲಡ್ ಟೆಸ್ಟ್..
 
ಆತ: ಯಾಕೋ ನೀನು ರಕ್ತಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಓದುತ್ತಿದ್ದೀಯಾ?
 
ಗುಂಡ: ನಾಳೆ ನಂಗೆ ಬ್ಲಡ್ ಟೆಸ್ಟ್ ಇದೆ ಅಂತ ಡಾಕ್ಟರ್ ಹೇಳಿದ್ದಾರೆ. ಒಳ್ಳೇ ಮಾರ್ಕ್ಸ್ ತಗೋಬೇಕು..!
 
*****
 
ಸೇಡಿನ ಪರಿ
 
ಬಂತಾ: ನನ್ನ ಸಾವಿನ ನಂತರ ನೀನು ಸಂತಾನನ್ನೇ ಮದುವೆಯಾಗಬೇಕು.
 
ಹೆಂಡತಿ: ಯಾಕೆ.. ಅವರು ನಿಮ್ಮ ವೈರಿಯಲ್ಲವೇ?
 
ಬಂತಾ: ಅವನ ವಿರುದ್ಧ ಸೇಡು ತೀರಿಸಿಕೊಳ್ಳಲು ಉಳಿದಿರುವ ದಾರಿ ಇದೊಂದೇ..!
 
*******
 
ಪ್ರತ್ಯಕ್ಷ ಸಾಕ್ಷಿ
 
ಸಂತಾ: ಈ ಕಾಲೇಜು ಉತ್ತಮವಾಗಿದೆಯೇ?
 
ಸೆಕ್ಯುರಿಟಿ: ನಿಜಕ್ಕೂ ಸಾರ್...  ನಾನು ಇಲ್ಲೇ ಎಂಬಿಎ ಮಾಡಿದ್ದು.. ತಕ್ಷಣವೇ ಕೆಲ್ಸಾನೂ ಸಿಕ್ತು...!
 
***
 
ಇದಪ್ಪಾ ವರಸೆ..
 
ಸಂತಾ: ನಾನು ಐದು ದಿನಗಳ ಕಾಲ ಮನೆಯಲ್ಲಿರೋಲ್ಲ. ದೂರ ಪ್ರವಾಸ ಹೋಗಲಿದ್ದೇನೆ.
 
ಹೆಂಡತಿ: ಆಯ್ತು. ಆದ್ರೆ ನನಗೆ ಸರ್ಪ್ರೈಸ್ ಕೊಡಬೇಕೆಂದು ಮುಂಚಿತವಾಗಿ ಬರಬೇಡಿ. ಹಾಗೆಲ್ಲಾದರೂ ಬಂದಿದ್ದೇ ಆದರೆ ನಿಮಗೆ ಸರ್ಪ್ರೈಸ್ ಕಾದಿರುತ್ತದೆ..!
 
***

ಓದಲೇಬೇಕು

ಪೇಜಾವರ ಶ್ರೀಗಳ ಆರೋಗ್ಯ ಸ್ಥಿತಿ ಸ್ಥಿರ; ಇಂದು ಬೆಂಗಳೂರಿನ ತಜ್ಞ ವೈದ್ಯರ ಭೇಟಿ

ಸಾರ್ವಜನಿಕ ಆಸ್ತಿಗೆ ನಷ್ಟ ಮಾಡುವವರ ವಿರುದ್ಧ ಕ್ರಮಕೈಗೊಳ್ಳುವ ಬಗ್ಗೆ ಶಾಸಕ ಜಿ.ಟಿ.ದೇವೇಗೌಡರು ಹೇಳಿದ್ದೇನು?

ಕ್ಯಾಬಿನೆಟ್ ವಿಸ್ತರಣೆಯ ಬದಲು ಬಜೆಟ್ ಗೆ ಒತ್ತು ನೀಡುತ್ತಿರುವ ಸಿಎಂ

ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗುವುದನ್ನು ತಪ್ಪಿಸಲು ಸಿದ್ದರಾಮಯ್ಯನವರಿಗೂ ಆಗುವುದಿಲ್ಲ - ಈಶ್ವರಪ್ಪ

ಯೇಸು ಕ್ರಿಸ್ತ ಪ್ರತಿಮೆ ನಿರ್ಮಾಣಕ್ಕೆ ಮುಂದಾದ ಡಿಕೆಶಿಗೆ ಟಾಂಗ್ ಕೊಟ್ಟ ಸಂಸದ ಅನಂತಕುಮಾರ್

ಎಲ್ಲವನ್ನೂ ನೋಡು

ತಾಜಾ

ಆನೆ ಮತ್ತು ಇರುವೆ ಜೋಕ್ಸ್ ನಿಮಗಾಗಿ

ಅಶ್ಲೀಲ ಸಾಹಿತ್ಯ ಎಂದರೇನು?

(Viral Video) ಎದೆ ಮೇಲೆ ಕಣ್ಣು ಹಾಕಿದ ಶಿಕ್ಷಕನಿಗೆ ವಿದ್ಯಾರ್ಥಿನಿ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತಾ..?

ಗುಂಡ ತನ್ನ ಮೊಮ್ಮಗಳಿಗೆ ಡಿಗ್ರಿ ಎಂದು ಹೆಸರಿಟ್ಟಿದ್ದ..!!!

ಕರ್ನಾಟಕಕ್ಕೆ ಎಚ್ಚರಿಕೆ

Show comments