Webdunia - Bharat's app for daily news and videos

Install App

ನರಕ

Webdunia
ಭಾರತೀಯನೊಬ್ಬ ಸತ್ತ ಮೇಲೆ ನರಕಕ್ಕೆ ಹೋದ ಅಲ್ಲಿ ಬೇರೆ ಬೇರೆ ದೇಶಗಳ ನರಕಳೂ ಇದ್ದವು. ಅಲ್ಲದೆ ಯಾವುದೇ ವೀಸಾದ ಅಗತ್ಯವಿಲ್ಲದೆ ನಮಗೆ ಬೇಕಾದ ದೇಶದ ನರಕಕ್ಕೆ ಹೋಗುವ ಅವಕಾಶವೂ ಇತ್ತು.

ಜೀವಂತವಾಗಿರುವಾಗಂತೂ ವಿದೇಶಕ್ಕೆ ಹೋಗುವ ಕನಸು ನನಸಾಗಲಿಲ್ಲ ಇಲ್ಲಿ ಉಚಿತವಾಗಿ ಸಿಗುವ ಅವಕಾಶವನ್ನು ಬಿಡುವುದು ಯಾಕೆ ಎಂದು ಯೋಚಿಸಿದ ಭಾರತೀಯನು ಜರ್ಮನಿ, ಅಮೆರಿಕ, ರಶ್ಯಾ, ಜಪಾನ್ ದೇಶಗಳ ನರಕದಲ್ಲಿ ಹೋಗಿ ಶಿಕ್ಷೆ ಏನೆಂದು ಕೇಳಿದ.

ಇಲ್ಲಿ ಬಂದವರಿಗೆ ಮೊದಲಿಗೆ ವಿದ್ಯುತ್ ಖುರ್ಚಿಯ ಮೇಲೆ ಕುಳ್ಳಿರಿಸಿ ಶಿಕ್ಷೆ ನೀಡುತ್ತಾರೆ. ನಂತರ ಭೂತವೊಂದು ಬಂದು ಛಟಿಯೇಟು ನೀಡುತ್ತದೆ ಎಂದು ಅವರು ಕಠಿಣವಾದ ಶಿಕ್ಷೆಗಳ ಪಟ್ಟಿಯನ್ನೇ ಹೇಳುತ್ತಿದ್ದರು.

ಬೇಸರಗೊಂಡು ಭಾರತೀಯನು ಬೇರೆ ವಿಧಿಯಿಲ್ಲದೆ ಭಾರತದ ನರಕಕ್ಕೇ ಮರಳಿದಾಗ ಅವನಿಗೊಂದು ಆಶ್ಚರ್ಯ ಕಾದಿತ್ತು. ಭಾರತದ ನರಕದ ಮುಂದೆ ಇಷ್ಟುದ್ದ ಕ್ಯೂ. ಭಾರತದ ನರಕದಲ್ಲೂ ಕಠಿಣ ಶಿಕ್ಷೆ ಇದೆ ಮತ್ಯಾಕೆ ಇಲ್ಲಿ ಇಷ್ಟೊಂದು ಕ್ಯೂ ಅಂತ ಯೋಚಿಸಿ ಒಬ್ಬನನ್ನು ಪ್ರಶ್ನಿಸಿದಾಗ ಆತನು ಹೀಗೇಂದು ಉತ್ತರಕೊಟ್ಟ.

" ಇಲ್ಲಿ ವಿದ್ಯುತ್ ಕುರ್ಚಿ ಹಾಳಾಗಿದೆ ಮತ್ತು ವಿದ್ಯುತ್‌ನ ಕೊರತೆ ಇದೆ. ಇಲ್ಲಿಯ ಭೂತ ಹಿಂದೆ ಸರಕಾರಿ ಇಲಾಖೆಯಲ್ಲಿ ಕೆಲಸದಲ್ಲಿದ್ದವನಂತೆ. ಬಂದ ಕೂಡಲೇ ಸಹಿ ಹಾಕಿ ಕಾಫಿಗೆ ಹೋಗಿ ನಿದ್ದೆಮಾಡುತ್ತಾನೆ. " ಇದನ್ನು ಕೇಳಿದ ಭಾರತೀಯನು ತವರೂರ ಕ್ಯೂನಲ್ಲಿ ನಿಂತುಕೊಂಡ.

ಪೇಜಾವರ ಶ್ರೀಗಳ ಆರೋಗ್ಯ ಸ್ಥಿತಿ ಸ್ಥಿರ; ಇಂದು ಬೆಂಗಳೂರಿನ ತಜ್ಞ ವೈದ್ಯರ ಭೇಟಿ

ಸಾರ್ವಜನಿಕ ಆಸ್ತಿಗೆ ನಷ್ಟ ಮಾಡುವವರ ವಿರುದ್ಧ ಕ್ರಮಕೈಗೊಳ್ಳುವ ಬಗ್ಗೆ ಶಾಸಕ ಜಿ.ಟಿ.ದೇವೇಗೌಡರು ಹೇಳಿದ್ದೇನು?

ಕ್ಯಾಬಿನೆಟ್ ವಿಸ್ತರಣೆಯ ಬದಲು ಬಜೆಟ್ ಗೆ ಒತ್ತು ನೀಡುತ್ತಿರುವ ಸಿಎಂ

ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗುವುದನ್ನು ತಪ್ಪಿಸಲು ಸಿದ್ದರಾಮಯ್ಯನವರಿಗೂ ಆಗುವುದಿಲ್ಲ - ಈಶ್ವರಪ್ಪ

ಯೇಸು ಕ್ರಿಸ್ತ ಪ್ರತಿಮೆ ನಿರ್ಮಾಣಕ್ಕೆ ಮುಂದಾದ ಡಿಕೆಶಿಗೆ ಟಾಂಗ್ ಕೊಟ್ಟ ಸಂಸದ ಅನಂತಕುಮಾರ್

ಆನೆ ಮತ್ತು ಇರುವೆ ಜೋಕ್ಸ್ ನಿಮಗಾಗಿ

ಅಶ್ಲೀಲ ಸಾಹಿತ್ಯ ಎಂದರೇನು?

(Viral Video) ಎದೆ ಮೇಲೆ ಕಣ್ಣು ಹಾಕಿದ ಶಿಕ್ಷಕನಿಗೆ ವಿದ್ಯಾರ್ಥಿನಿ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತಾ..?

ಗುಂಡ ತನ್ನ ಮೊಮ್ಮಗಳಿಗೆ ಡಿಗ್ರಿ ಎಂದು ಹೆಸರಿಟ್ಟಿದ್ದ..!!!

ಕರ್ನಾಟಕಕ್ಕೆ ಎಚ್ಚರಿಕೆ

Show comments