Select Your Language

Notifications

webdunia
webdunia
webdunia
webdunia

ಏಕದಿನ ಪಂದ್ಯಾವಳಿಯಲ್ಲಿ ವಿಶ್ವ ಕಪ್ ಚಾಂಪಿಯನ್ನರು, ಐಪಿಎಲ್‌ನಲ್ಲಿ ಸಂಪೂರ್ಣ ಫ್ಲಾಪ್

ಏಕದಿನ ಪಂದ್ಯಾವಳಿಯಲ್ಲಿ  ವಿಶ್ವ ಕಪ್ ಚಾಂಪಿಯನ್ನರು, ಐಪಿಎಲ್‌ನಲ್ಲಿ ಸಂಪೂರ್ಣ ಫ್ಲಾಪ್
ನವದೆಹಲಿ , ಶನಿವಾರ, 2 ಮೇ 2015 (15:37 IST)
ರಾಜಸ್ಥಾನ ರಾಯಲ್ಸ್ ಶುಕ್ರವಾರ ಜೇಮ್ಸ್ ಫಾಲ್ಕ್‌ನರ್ ಅವರನ್ನು ಕೈಬಿಟ್ಟಿತು. ಫಾಲ್ಕ್‌ನರ್ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವೆ ವಿಶ್ವಕಪ್ ಫೈನಲ್‌ನಲ್ಲಿ ಪಂದ್ಯಶ್ರೇಷ್ಟ ಪ್ರಶಸ್ತಿಗೆ ಪುರಸ್ಕೃತರಾಗಿದ್ದರು. ಆಟದ ಅತೀ ದೊಡ್ಡ ಪಂದ್ಯಾವಳಿಯ ಫೈನಲ್‌ನಲ್ಲಿ ಶ್ರೇಷ್ಟ ಪ್ರದರ್ಶನ ನೀಡಿದವರು ದೇಶೀಯ ಪಂದ್ಯಾವಳಿಯಲ್ಲಿ 11 ಮಂದಿ ಆಟಗಾರರ ಪೈಕಿ ಸ್ಥಾನ ಪಡೆಯಲು ವಿಫಲರಾಗಿದ್ದು ಹೇಗೆ?  
 
ಜಗತ್ತಿನ ಅತೀ ಶ್ರೀಮಂತ ಪಂದ್ಯಾವಳಿಯಲ್ಲಿ ಭಾಗವಹಿಸಲು ಭಾರತಕ್ಕೆ ತೇಲಿಬಂದ ಆಸ್ಟ್ರೇಲಿಯಾದ ಹಡಗಿನಲ್ಲಿ ಫಾಲ್ಕನರ್ ಒಬ್ಬರೇ ಅಲ್ಲ. 2014ರ ಐಪಿಎಲ್‌ನಲ್ಲಿ ಮೈನವಿರೇಳಿಸುವ ಶಾಟ್‌ಗ
ಳ ಮೂಲಕ  ರನ್ ಹೊಳೆ ಹರಿಸಿದ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಕೂಡ ಪಂಜಾಬ್  ಕಳೆದ ಮೂರು ಪಂದ್ಯಗಳಲ್ಲಿ ಆಡಿಸಿಲ್ಲ.  ಈ ಸಾರಿ ಐಪಿಎಲ್‌ನಲ್ಲಿ ಅವರ ಸ್ಕೋರುಗಳು 7,6, 15, 33 ಮತ್ತು 1. ಹಿಂದಿನ ಐಪಿಎಲ್‌ನ 5 ಪಂದ್ಯಗಳಲ್ಲಿ ಅವರು 95, 89, 95, 15 ಮತ್ತು 6 ರನ್ ಸ್ಕೋರ್ ಮಾಡಿದ್ದರು.

 ರಾಜಸ್ಥಾನ್ ನಾಯಕ ಶೇನ್ ವಾಟ್ಸನ್ ಮೊದಲ 4 ಪಂದ್ಯಗಳಲ್ಲಿ ಆಡಲಿಲ್ಲ. ಅವರಿಗೆ ಗಾಯವಾಗಿದೆಯೆಂದು ವರದಿಯಾಗಿತ್ತು. ಆದರೆ ಆಸ್ಟ್ರೇಲಿಯಾ ಕ್ರಿಕೆಟರ್ ಡೀನ್ ಡೋನ್ಸ್,  ವಾಟ್ಸನ್ ಅವರನ್ನು ಡ್ರಾಪ್ ಮಾಡಲಾಗಿತ್ತು ಎಂದು ಊಹಿಸಿದ್ದಾರೆ. ವಿಶ್ವಕಪ್ ಫೈನಲ್‌ನಲ್ಲಿ 3 ವಿಕೆಟ್ ಕಬಳಿಸಿದ ವೇಗಿ ಮಿಚೆಲ್ ಜಾನ್ಸನ್ ಐಪಿಎಲ್‌ನಲ್ಲಿ ಅರ್ಧದಷ್ಟೂ ಪರಿಣಾಮಕಾರಿಯಾಗಿಲ್ಲ. ಹೀಗಾಗಿ ಕಿಂಗ್ಸ್ ಇಲೆವನ್ ಅವರನ್ನು ಡೆಲ್ಲಿ ವಿರುದ್ಧ ಡ್ರಾಪ್ ಮಾಡಿದೆ.
 
 ಆರಾನ್ ಫಿಂಚ್ ಮುಂಬೈ ಪರ 5 ಮತ್ತು 8 ರನ್ ಮಾಡಿದ್ದರು. ನಂತರ ಗಾಯಗೊಂಡು ಐಪಿಎಲ್‌ನಲ್ಲಿ ಭಾಗವಹಿಸುತ್ತಿಲ್ಲ. ವಿಶ್ವಚಾಂಪಿಯನ್ನರಾದ ಆಸೀಸ್ ಆಟಗಾರರಿಗೆ ಏನಾಗಿದೆ ಎನ್ನುವುದೇ ಈಗ ಪ್ರಶ್ನೆಯಾಗಿದೆ. ಪಂಜಾಬ್ ತಂಡದ ಬಗ್ಗೆ ಮಾತನಾಡಿದ ಡೀನ್ ಜೋನ್ಸ್,  ಬೈಲಿ, ಜಾನ್ಸನ್ ಮತ್ತು ಮ್ಯಾಕ್ಸ್‌ವೆಲ್ ಮುಂತಾದ ಅತಿರಥರು ಬತ್ತಳಿಕೆಯಲ್ಲಿದ್ದರೂ ಫಲ ನೀಡಲಿಲ್ಲ.

 ಭಾರತ ತಂಡದ ವಿರುದ್ಧ ಸುದೀರ್ಘ ಕ್ರಿಕೆಟ್ ಮತ್ತು ವಿಶ್ವಕಪ್ ಬಳಿಕ ಅವರು ಐಪಿಎಲ್ ಆಡಲು ಬಂದಿದ್ದರು. ಅವರು ಸುದೀರ್ಘ ಕ್ರಿಕೆಟ್ ಆಡಿ ದಣಿದಿರಬಹುದು.  ಆದರೆ ಕಳಪೆ ಪ್ರದರ್ಶನ ನೀಡಿರುವುದರಿಂದ ಮುಂದಿನ ವರ್ಷ ಅವರ ಖ್ಯಾತಿ ಕ್ಷೀಣಿಸುತ್ತದೆ.  ಪಂಜಾಬ್ ಪ್ರಸಕ್ತ ಪಾಯಿಂಟ್ ಪಟ್ಟಿಯಲ್ಲಿ ತಳದಲ್ಲಿದೆ. ಈ ಆವೃತ್ತಿಯಲ್ಲಿ ಆಡಿದ 8 ಪಂದ್ಯಗಳ ಪೈಕಿ 6ರಲ್ಲಿ ಸೋತಿದೆ. ಆದರೆ ಪಂಜಾಬ್ ತಂಡದಲ್ಲಿ ಆಸೀಸ್ ಆಟಗಾರರೇ ಪ್ರಾಬಲ್ಯ ಹೊಂದಿರುವ ವಿಷಯ ಅದಕ್ಕೆ ನೋವುಂಟುಮಾಡಿದೆ.  ವಿಶ್ವಕಪ್ ಹ್ಯಾಂಗ್‌ಓವರ್ ಆಸೀಸ್ ಆಟಗಾರರ ಮೇಲೆ ಭಾರೀ ಪೆಟ್ಟನ್ನು ನೀಡಿದೆ ಎಂದು ಜೋನ್ಸ್ ಹೇಳಿದ್ದಾರೆ. 

Share this Story:

Follow Webdunia kannada