Select Your Language

Notifications

webdunia
webdunia
webdunia
webdunia

ಸನ್‌ರೈಸರ್ಸ್ ವಿರುದ್ಧ ಡೆಲ್ಲಿ ಡೇರ್‌ಡೆವಿಲ್ಸ್‌ಗೆ 4 ರನ್ ರೋಚಕ ಜಯ

ಸನ್‌ರೈಸರ್ಸ್ ವಿರುದ್ಧ ಡೆಲ್ಲಿ ಡೇರ್‌ಡೆವಿಲ್ಸ್‌ಗೆ 4 ರನ್ ರೋಚಕ ಜಯ
ವಿಶಾಖಪಟ್ನಂ , ಶನಿವಾರ, 18 ಏಪ್ರಿಲ್ 2015 (19:52 IST)
ವಿಶಾಖಪಟ್ನಂ: ಸನ್ ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಡೇರ್ ಡೆವಿಲ್ಸ್ ನಡುವೆ ನಡೆದ ಐಪಿಎಲ್‌ನ ರೋಚಕ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ  4 ವಿಕೆಟ್‌ಗೆ 167 ರನ್ ಬೆನ್ನಟ್ಟಿದ ಸನ್ ರೈಸರ್ಸ್ ಹೈದರಾಬಾದ್ ಪರ ರವಿ ಬೊಪಾರಾ  30 ಎಸೆತಗಳಲ್ಲಿ ಅಬ್ಬರದ 41 ರನ್ ಮತ್ತು ಕಡೆಯ ಓವರುಗಳಲ್ಲಿ ಕರಣ್ ಶರ್ಮಾ ಮತ್ತು ಆಶಿಶ್ ರೆಡ್ಡಿ ಅವರ  ಸ್ಫೋಟಕ ಬ್ಯಾಟಿಂಗ್  ನಡುವೆಯೂ ಸೋಲಪ್ಪಿದೆ.  

ಕಡೆಯ ಓವರಿನಲ್ಲಿ ಸನ್ ರೈಸರ್ಸ್ ತಂಡಕ್ಕೆ ಕರಣ್ ಶರ್ಮಾ ಅವರು 10 ಎಸೆತಗಳಲ್ಲಿ 19ರನ್ ಗಳಿಸಿದರೆ ಆಶಿಶ್ ರೆಡ್ಡಿ 8 ಎಸೆತಗಳಲ್ಲಿ 15ರನ್ ಗಳಿಸಿ ಸನ್‌ರೈಸರ್ಸ್ ತಂಡವನ್ನು ಗೆಲುವಿನ ದಡದ ಸಮೀಪ ತಂದಿದ್ದರು. ಸನ್ ರೈಸರ್ಸ್ ಹೈದರಾಬಾದ್  19 ಓವರುಗಳಲ್ಲಿ 158 ರನ್ ಗಳಿಸಿ ಕಡೆಯ ಓವರಿನಲ್ಲಿ 9 ರನ್ ಬಾಕಿವುಳಿದಿತ್ತು. ಕೊನೆಯ ಓವರಿನ 2ನೇ ಎಸೆತದಲ್ಲಿ ಆಶಿಶ್ ರೆಡ್ಡಿ ರನ್‌ಔಟ್‌ಗೆ ಬಲಿಯಾದರು. ಕಡೆಯ 3 ಎಸೆತಗಳಲ್ಲಿ 8 ರನ್ ಬಾಕಿವುಳಿದಿತ್ತು.

ಸನ್ ರೈಸರ್ಸ್ ಪರ ಕರಣ್ ಶರ್ಮಾ ಹೊಡೆದ ಸಿಕ್ಸರ್ ಹೋಗುತ್ತಿದ್ದ ಚೆಂಡನ್ನು ಸ್ವೀಪರ್ ಕವರ್‌ನಲ್ಲಿ ಮಾಯಾಂಕ್ ಅಗರವಾಲ್ ಮೇಲೆರಗಿ ಅದ್ಭುತ ಫೀಲ್ಡಿಂಗ್ ಮೂಲಕ ತಡೆದು ಚೆಂಡನ್ನು ಬೌಂಡರಿಗೆರೆಯೊಳಗೆ ತಳ್ಳಿದ್ದರಿಂದ ಕೇವಲ 2 ರನ್ ಸಿಕ್ಕಿತು. ಅಗರವಾಲ್ ಅದ್ಭುತ ಫೀಲ್ಡಿಂಗ್‌ನಿಂದಾಗಿ ಸನ್ ರೈಸರ್ಸ್ ಗೆಲ್ಲುವ ಅವಕಾಶ ಕೈತಪ್ಪಿಹೋಯಿತು.  ಕೊನೆಯ ಎಸೆತದಲ್ಲಿ ಐದು ರನ್ ಅಗತ್ಯವಿತ್ತು. ಆದರೆ ಬೌಂಡರಿಗೆ ಯತ್ನಿಸಿದ ಕರಣ್ ಕೋಲ್ಟರ್ ನೈಲ್ ಬೌಲಿಂಗ್‌ನಲ್ಲಿ ಮ್ಯಾಥ್ಯೂಸ್‌ಗೆ ಕ್ಯಾಚಿತ್ತು ಔಟಾಗುವ ಮೂಲಕ ಸನ್ ರೈಸರ್ಸ್ 8 ವಿಕೆಟ್ ಕಳೆದುಕೊಂಡು 163 ರನ್ ಗಳಿಸಿ  ಸೋಲಪ್ಪಿತು. ಡೆಲ್ಲಿ ಪರ ನಾಯಕ ಡುಮಿನಿ ನಾಲ್ಕು ವಿಕೆಟ್ ಕಬಳಿಸುವ ಮೂಲಕ ಶ್ರೇಷ್ಟ ಬೌಲರ್ ಎನಿಸಿದರು. 
 
 ಮೊದಲಿಗೆ ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ಡೇರ್ ಡೆವಿಲ್ಸ್  ಶ್ರೇಯಸ್ ಅಯ್ಯರ್ ಅವರ 40 ಎಸೆತಗಳಲ್ಲಿ 60 ರನ್ ಮತ್ತು ನಾಯಕ ಡುಮಿನಿಯ 41 ಎಸೆತಗಳಲ್ಲಿ 54 ರನ್ ನೆರವಿನಿಂದ 167 ರನ್ ಮೊತ್ತವನ್ನು ಕಲೆಹಾಕಿತು. ಶ್ರೇಯಸ್ ಅಯ್ಯರ್  5 ಸಿಕ್ಸರ್‌ಗಳನ್ನು ಮತ್ತು 3 ಬೌಂಡರಿಗಳನ್ನು ಬಾರಿಸಿದರು. ಡುಮಿನಿ 2 ಸಿಕ್ಸರ್ ಮತ್ತು 5 ಬೌಂಡರಿಗಳನ್ನು ಬಾರಿಸಿದರು.  

Share this Story:

Follow Webdunia kannada