Select Your Language

Notifications

webdunia
webdunia
webdunia
webdunia

ಮೇ 14ರಂದು ಶಾರೂಖ್ ಖಾನ್‌ಗೆ ವಾಂಖೆಡೆ ಪ್ರವೇಶವಿಲ್ಲ

ಮೇ 14ರಂದು ಶಾರೂಖ್ ಖಾನ್‌ಗೆ ವಾಂಖೆಡೆ ಪ್ರವೇಶವಿಲ್ಲ
ಮುಂಬೈ , ಮಂಗಳವಾರ, 12 ಮೇ 2015 (10:59 IST)
ಕೋಲ್ಕತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡೆುವೆ ವಾಂಖೆಡೆ ಕ್ರೀಡಾಂಗಣದಲ್ಲಿ ಮೇ 14ರಂದು ನಡೆಯುವ ಐಪಿಎಲ್ ಪಂದ್ಯವನ್ನು ವೀಕ್ಷಿಸುವ ಅವಕಾಶದಿಂದ ಬಾಲಿವುಡ್ ನಟ ಶಾರೂಖ್ ಖಾನ್ ವಂಚಿತರಾಗಿದ್ದಾರೆ.  2012ರಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಭದ್ರತಾ ಸಿಬ್ಬಂದಿ ಜತೆ ಸಂಘರ್ಷಕ್ಕಿಳಿದು ಐದು ವರ್ಷಗಳು ವಾಂಖಡೆ ಕ್ರೀಡಾಂಗಣ ಪ್ರವೇಶಿಸದಂತೆ ನಿಷೇಧ ವಿಧಿಸಿರುವ ಹಿನ್ನೆಲೆಯಲ್ಲಿ ಈ ವರ್ಷವೂ ಅವರಿಗೆ ಪ್ರವೇಶವಿಲ್ಲ. 
 
 ಕಳೆದ ವರ್ಷ ಜೂನ್ ಎರಡರಂದು ಫೈನಲ್‌ಗೆ ಆತಿಥ್ಯ ವಹಿಸಿದ್ದ  ಎಂಸಿಎ ನಟನ ವಿರುದ್ಧ ನಿಷೇಧವನ್ನು ತಾತ್ಕಾಲಿಕವಾಗಿ ತೆಗೆಯಲು ನಿರ್ಧರಿಸಿತ್ತು. ಆದರೆ ಕ್ರಿಕೆಟ್ ಮಂಡಳಿ ಫೈನಲ್ ಪಂದ್ಯವನ್ನು ಬೆಂಗಳೂರಿಗೆ ಮಂಜೂರು ಮಾಡಿತು.
 
 ಮೇ 16ರಂದು ಶಾರೂಖ್ ಖಾನ್  ಕೆಕೆಆರ್ ಮತ್ತು ರಾಜಸ್ಥಾನ ರಾಯಲ್ಸ್ ನಡುವೆ ಬ್ರಬೋರ್ನ್ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯವನ್ನು ವೀಕ್ಷಿಸಲು ಸಾಧ್ಯವಾಗುತ್ತದೆ. ಬ್ರಬೋರ್ನ್ ಸ್ಟೇಡಿಯಂ ಬಿಸಿಸಿಐ‌ನ ಇನ್ನೊಂದು ಅಂಗಸಂಸ್ಥೆ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ ಮಾಲೀಕತ್ವದಲ್ಲಿದ್ದು, ವಾಂಖೆಡೆ ಕ್ರೀಡಾಂಗಣಕ್ಕೆ ಕೂಗಳತೆ ದೂರದಲ್ಲಿದೆ.

Share this Story:

Follow Webdunia kannada