Select Your Language

Notifications

webdunia
webdunia
webdunia
webdunia

ನವಜಾತ ಶಿಶು ನೋಡಲು ವಿಂಡೀಸ್‌ಗೆ ಹಾರಿದ ಗೇಲ್: ಇಂದಿನ ಪಂದ್ಯ ಮಿಸ್

ನವಜಾತ ಶಿಶು ನೋಡಲು ವಿಂಡೀಸ್‌ಗೆ ಹಾರಿದ ಗೇಲ್: ಇಂದಿನ ಪಂದ್ಯ ಮಿಸ್
ಮುಂಬೈ , ಬುಧವಾರ, 20 ಏಪ್ರಿಲ್ 2016 (12:55 IST)
ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಸ್ಟಾರ್ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಪತ್ನಿ ನಟಾಶಾ ಬೆರಿಡ್ಜ್‌ ಗಂಡು ಮಗುವಿಗೆ ಜನ್ಮನೀಡಿದ್ದು, ಪತ್ನಿ ಮತ್ತು ನವಜಾತ ಶಿಶುವಿನ ಜತೆಯಿರಲು ಕ್ರಿಸ್ ಗೇಲ್ ವೆಸ್ಟ್‌ ಇಂಡೀಸ್‌ಗೆ ಹಿಂತಿರುಗಿದ್ದಾರೆ. ಈ ಹಿನ್ನೆಲೆಯಲ್ಲಿ ಕನಿಷ್ಠ ಎರಡು ಐಪಿಎಲ್ ಪಂದ್ಯಗಳನ್ನು ಅವರು ಮಿಸ್ ಮಾಡಿಕೊಳ್ಳಲಿದ್ದಾರೆ.

 ಇಂದಿನ ಪಂದ್ಯಕ್ಕೆ ಮುಂಬೈ ಇಂಡಿಯನ್ಸ್‌ನ ಕಿರಾನ್ ಪೋಲಾರ್ಡ್ ಫಿಟ್ ಆಗಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ವಾಂಖಡೆಯಲ್ಲಿ ಇಂದು ನಡೆಯುವ ಪಂದ್ಯವನ್ನು ಗೇಲ್ ಮಿಸ್ ಮಾಡಿಕೊಳ್ಳಲಿದ್ದು, ಶುಕ್ರವಾರ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ವಿರುದ್ಧ ಪಂದ್ಯವನ್ನೂ ಮಿಸ್ ಮಾಡಿಕೊಳ್ಳಲಿದ್ದಾರೆ. ಆರ್‌ಸಿಬಿ ಭಾನುವಾರ ಗುಜರಾತ್ ಲಯನ್ಸ್ ತಂಡವನ್ನು ರಾಜ್‌ಕೋಟ್‌ನಲ್ಲಿ ಎದುರಿಸಲಿದೆ. 
 
 ಈ ಮಧ್ಯೆ ವಿಷಾಹಾರದಿಂದ ಮುಂಬೈ ಇಂಡಿಯನ್ಸ್ ಪೋಲಾರ್ಡ್ ಹಿಂದಿನ ಪಂದ್ಯವನ್ನು ಆಡಿರಲಿಲ್ಲ. ಈಗ ಚೇತರಿಸಿಕೊಂಡಿದ್ದು, ಬುಧವಾರ ಲಭ್ಯವಾಗಲಿದ್ದಾರೆ ಎಂದು ಮುಂಬೈ ಇಂಡಿಯನ್ಸ್ ಕೋಚ್ ರಿಕಿ ಪಾಂಟಿಂಗ್ ಹೇಳಿದ್ದಾರೆ. 

Share this Story:

Follow Webdunia kannada