Select Your Language

Notifications

webdunia
webdunia
webdunia
webdunia

ಬಲಾಢ್ಯತೆಯ ಕದನ: ರಾಜಸ್ಥಾನ ರಾಯಲ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿ

ಬಲಾಢ್ಯತೆಯ ಕದನ: ರಾಜಸ್ಥಾನ ರಾಯಲ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿ
ಅಹ್ಮದಾಬಾದ್ , ಭಾನುವಾರ, 19 ಏಪ್ರಿಲ್ 2015 (15:50 IST)
ಐಪಿಎಲ್ ಟೇಬಲ್ ಟಾಪರ್ ರಾಜಸ್ಥಾನ್ ರಾಯಲ್ಸ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ತಮ್ಮ ಐದನೇ ಪಂದ್ಯವನ್ನು ಭಾನುವಾರ ಆಡುತ್ತಿದ್ದು, ಸತತ ನಾಲ್ಕು ಗೆಲುವುಗಳ ಅಭಿಯಾನವನ್ನು ಮುಂದುವರಿಸಲು ನಿರ್ಧರಿಸಿದೆ. ನಾಯಕ ಶೇನ್ ವಾಟ್ಸನ್ ಗಾಯಗೊಂಡಿದ್ದರಿಂದ  ನಾಲ್ಕು ಪಂದ್ಯಗಳಲ್ಲಿ ಸ್ಟೀವನ್ ಸ್ಮಿತ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದು, 8 ಪಾಯಿಂಟ್‌ಗಳನ್ನು ಬುಟ್ಟಿಗೆ ಹಾಕಿಕೊಂಡಿದ್ದಾರೆ.   ಎರಡು ಬಾರಿಯ ಐಪಿಎಲ್ ಚಾಂಪಿಯನ್ನರಾದ ಸಿಎಸ್‌ಕೆ ಕೂಡ ಹಿಂದೆ ಬೀಳದೇ ಆಡಿದ ಮೂರೂ ಪಂದ್ಯಗಳಲ್ಲಿ ಜಯಗಳಿಸಿದೆ.
 
 ಮೊಟೆರಾದಲ್ಲಿ ಎರಡನೇ ಪಂದ್ಯವಾಡುತ್ತಿರುವ ರಾಜಸ್ಥಾನದ ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌‌ಗಳು ಎಲ್ಲಾ ಪಂದ್ಯಗಳಲ್ಲಿ ಮಿಂಚಿದ್ದು ಬೌಲಿಂಗ್ ಕೂಡ ಸವಾಲಿನದ್ದಾಗಿದೆ.  ಅಜಿಂಕ್ಯಾ ರಹಾನೆ ಸನ್ ರೈಸರ್ಸ್ ವಿರುದ್ಧ 62 ರನ್ ಬಾರಿಸಿದ್ದರೆ ಸ್ಮಿತ್ ಮುಂಬೈ ಇಂಡಿಯನ್ಸ್ ವಿರುದ್ಧ ಅಜೇಯ 79 ರನ್ ಹೊಡೆದಿದ್ದರು. ನ್ಯೂಜಿಲೆಂಡ್ ಮೀಡಿಯಂ ಪೇಸರ್ ಟಿಂ ಸೌತೀ, ದ.ಆಫ್ರಿಕಾದ ಕ್ರಿಸ್ ಮೋರಿಸ್, ಆಸ್ಟ್ರೇಲಿಯಾದ ಜೇಮ್ಸ್ ಫಾಕ್ನರ್ ಮತ್ತು ಭಾರತದ ಧವಲ್ ಕುಲಕರ್ಣಿ, ಸ್ಟುವರ್ಟ್ ಬಿನ್ನಿ ಬೌಲಿಂಗ್‌ಗೆ ಬಲ ತುಂಬಿದ್ದಾರೆ. 
 
 ಸ್ಪಿನ್ನರ್ ಪ್ರವೀಣ್ ತಾಂಬೆ ನಿಯಮಿತವಾಗಿ ವಿಕೆಟ್ ಕಬಳಿಸಿದ್ದಾರೆ. ಸಿಎಸ್‌ಕೆ ಚೀಪಾಕ್‌ನಲ್ಲಿ ಡೇರ್ ಡೆವಿಲ್ಸ್ ವಿರುದ್ಧ ಒಂದು ರನ್ ರೋಚಕ ಜಯದ ಬಳಿಕ ಅದರ ಹಾದಿ ಸುಗಮವಾಗಿ ಸಾಗಿದೆ. 
 
 ನ್ಯೂಜಿಲೆಂಡ್ ಓಪನರ್ ಬ್ರೆಂಡನ್ ಮೆಕಲಮ್ ಸನ್ ರೈಸರ್ಸ್ ವಿರುದ್ಧ ಸೀಸನ್ ಮೊದಲ ಶತಕವನ್ನು ಬಾರಿಸಿದ್ದರಿಂದ ಮೇಲಿನ ಕ್ರಮಾಂಕಕ್ಕೆ ಸರಿಯಾದ ಸ್ಫೂರ್ತಿ ಸಿಕ್ಕಿದೆ. ಬೌಲಿಂಗ್ ವಿಭಾಗದಲ್ಲಿ ಆಶಿಶ್ ಶರ್ಮಾ, ಈಶ್ವರ್ ಪಾಂಡೆ, ಮೋಹಿತ್ ಶರ್ಮಾ ಮತ್ತು ಡ್ವೇನ್ ಬ್ರೇವೋ ಬಲ ತುಂಬಿದ್ದಾರೆ. ನಂ. 1 ಮತ್ತು ನಂ.2 ಈ ಆವೃತ್ತಿಯಲ್ಲಿ ಮೊದಲ ಬಾರಿಗೆ ಹಣಾಹಣಿಗೆ ಇಳಿದಿದ್ದು, ಇದು ನಿಜವಾಗಲೂ ಬಲಾಢ್ಯತೆಯ ಕದನವಾಗಲಿದೆ. 
 
ತಂಡಗಳು :
ರಾಜಸ್ಥಾನ್ ರಾಯಲ್ಸ್ : ಶೇನ್ ವ್ಯಾಟ್ಸನ್ ( ನಾಯಕ), ಅಭಿಷೇಕ್ ನಾಯರ್ , ಅಜಿಂಕ್ಯ ರಹಾನೆ , ಅಂಕಿತ್ ನಾಗೇಂದ್ರ ಶರ್ಮಾ , ಬೆನ್ ಕಟಿಂಗ್ , ದೀಪಕ್ ಹೂಡಾ , ಧವಳ್ ಕುಲಕರ್ಣಿ, ದಿಶಾಂತ್ ಯಾಗ್ನಿಕ್ , ಜೇಮ್ಸ್ ಫಾಕ್ನರ್ , ಕೇನ್ ರಿಚರ್ಡ್ಸನ್ , ಕರುಣ್ ನಾಯರ್ , ತಂಬೆ, ರಾಹುಲ್ ಟಿವಾಟಿಯಾ , ರಜತ್ ಭಾಟಿಯಾ , ಸಂಜು ಸ್ಯಾಮ್ಸನ್ , ಸ್ಟೀವನ್ ಸ್ಮಿತ್ , ಸ್ಟುವರ್ಟ್ ಬಿನ್ನಿ , ಟಿಮ್ ಸೌಥಿ, ವಿಕ್ರಮಜೀತ್ ಮಲಿಕ್, ಕ್ರಿಸ್ ಮಾರಿಸ್ , ಜುವಾನ್ ಥೆರಾನ್, ಬಾರಿಂದರ್  ಸಿಂಗ್ ಶರಣ್ , ದಿನೇಶ್ ಸಾಲುಂಕೆ, ಸಾಗರ್ ತ್ರಿವೇದಿ , ಪರ್ದೀಪ್ ಸಾಹು .
 
ಚೆನ್ನೈ ಸೂಪರ್ ಕಿಂಗ್ಸ್ : ಮಹೇಂದ್ರ ಸಿಂಗ್ ಧೋನಿ ( ನಾಯಕ), ಆಶಿಶ್ ನೆಹ್ರಾ , ಬಾಬಾ ಅಪರಾಜಿತ್ , ಬ್ರೆಂಡನ್ ಮೆಕಲಮ್ , ಡ್ವೇನ್ ಬ್ರಾವೊ, ಡ್ವೇನ್ ಸ್ಮಿತ್, ಡು ಪ್ಲೆಸಿಸ್ , ಈಶ್ವರ್ ಪಾಂಡೆ , ಮ್ಯಾಟ್ ಹೆನ್ರಿ ಮಿಥುನ್ ಮನ್ಹಾಸ್ , ಮೋಹಿತ್ ಶರ್ಮಾ , ಪವನ್ ನೇಗಿ , ರವಿಚಂದ್ರನ್ ಅಶ್ವಿನ್ , ರವೀಂದ್ರ ಜಡೇಜಾ , ಸ್ಯಾಮ್ಯುಯೆಲ್ ಬದ್ರೀ , ಸುರೇಶ್ ರೈನಾ , ರೋನಿತ್ ಮೋರ್ , ಮೈಕಲ್ ಹಸ್ಸಿ , ರಾಹುಲ್ ಶರ್ಮಾ , ಕೈಲ್ ಅಬ್ಬೋಟ್ , ಅಂಕುಶ್ ಬೈನ್ಸ್ , ಇಫ್ರಾನ್ ಪಠಾಣ್ ,ಪ್ರತ್ಯುಶ್  ಸಿಂಗ್ , ಆಂಡ್ರ್ಯೂ ಟೈ ಮತ್ತು ಏಕಲವ್ಯ ದ್ವಿವೇದಿ .

Share this Story:

Follow Webdunia kannada