Select Your Language

Notifications

webdunia
webdunia
webdunia
webdunia

ಇಮ್ರಾನ್ ತಾಹಿರ್ ಮೈದಾನದಲ್ಲಿ ಶೇ. 100ರಷ್ಟು ಪ್ರಯತ್ನ ಮಾಡುತ್ತಾರೆ: ಡುಮಿನಿ

ಇಮ್ರಾನ್ ತಾಹಿರ್ ಮೈದಾನದಲ್ಲಿ  ಶೇ. 100ರಷ್ಟು ಪ್ರಯತ್ನ ಮಾಡುತ್ತಾರೆ:  ಡುಮಿನಿ
ನವದೆಹಲಿ , ಶುಕ್ರವಾರ, 24 ಏಪ್ರಿಲ್ 2015 (15:26 IST)
ಡೆಲ್ಲಿ ಡೇರ್ ಡೇವಿಲ್ಸ್ ಲೆಗ್ ಸ್ಪಿನ್ನರ್ ಇಮ್ರಾನ್ ತಾಹಿರ್ ಬೌಲಿಂಗ್ ಪ್ರಯತ್ನವನ್ನು ಶ್ಲಾಘಿಸಿರುವ ಡೆಲ್ಲಿ ಡೇರ್‌ಡೆವಿಲ್ಸ್ ನಾಯಕ ಜೆಪಿ ಡ್ಯುಮಿನಿ, ತಾಹಿರ್ ಮೈದಾನದಲ್ಲಿ ಸದಾ ಶೇ. 100ರಷ್ಟು ಪ್ರಯತ್ನ ಮಾಡುತ್ತಾರೆ ಎಂದು ಹೇಳಿದ್ದಾರೆ. 
 
ತಾಹಿರ್ ಮುಂಬೈ ವಿರುದ್ಧ ತಮ್ಮ ನಾಲ್ಕು ಓವರುಗಳಲ್ಲಿ 3 ವಿಕೆಟ್ ಕಳೆದುಕೊಂಡು 22 ರನ್ ಗಳಿಸುವ ಮೂಲಕ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಎಲ್ಲಾ ವಿಕೆಟ್‌ಗಳನ್ನು ತಾಹಿರ್ ಇನ್ನಿಂಗ್ಸ್‌ನ 17ನೇ ಓವರಿನಲ್ಲಿ ಕಬಳಿಸಿದ್ದು, ಆ ಓವರಿನಲ್ಲಿ ಕೇವಲ 4 ರನ್ ನೀಡಿದ್ದರು. 
 
ಇಮ್ರಾನ್ ತಾಹಿರ್ ಯಾವುದೇ ತಂಡದಲ್ಲಿರಲಿ ತಮ್ಮ 100ರಷ್ಟು ಪ್ರದರ್ಶನ ನೀಡುತ್ತಾರೆ ಎಂದು ಡುಮಿನಿ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಹೇಳಿದರು.  ದಕ್ಷಿಣ ಆಫ್ರಿಕಾ ಕ್ರಿಕೆಟಿಗ ಬೌಲರುಗಳನ್ನು ಕೂಡ ತಮ್ಮ ಆಕ್ರಮಣಕಾರಿ ಮನಸ್ಥಿತಿಗೆ ಶ್ಲಾಘಿಸಿದರು.  ನಾವು 190 ರನ್ ಹೊಡೆದಿದ್ದರೂ ಕೂಡ ಬೌಲರುಗಳು ಕೂಡ ಉತ್ತಮ ಬೌಲಿಂಗ್ ಮಾಡುವುದು ಅವಶ್ಯಕ.ಅವರು ಆಕ್ರಮಣಕಾರಿ ಮನೋಭಾವದಿಂದ ಬೌಲ್ ಮಾಡಿದರು ಎಂದು ಡುಮಿನಿ ಹೇಳಿದರು. 

Share this Story:

Follow Webdunia kannada