Select Your Language

Notifications

webdunia
webdunia
webdunia
webdunia

ಐಪಿಎಲ್ ಪಂದ್ಯಗಳನ್ನು ಕೂಡ ಮಿಸ್ ಮಾಡಿಕೊಳ್ಳಲಿರುವ ಪೀಟರ್‌ಸನ್

ಐಪಿಎಲ್ ಪಂದ್ಯಗಳನ್ನು ಕೂಡ ಮಿಸ್ ಮಾಡಿಕೊಳ್ಳಲಿರುವ ಪೀಟರ್‌ಸನ್
ಲಂಡನ್ , ಗುರುವಾರ, 14 ಮೇ 2015 (11:06 IST)
ಇಂಗ್ಲೆಂಡ್ ತಂಡಕ್ಕೆ ಪುನಃ ಕರೆಸಿಕೊಳ್ಳುವುದಿಲ್ಲ ಎಂದು ಪೀಟರ್‌ಸನ್ ಅವರಿಗೆ ತಿಳಿಸಿದ ಮರುದಿನವೇ ಸನ್ ರೈಸರ್ಸ್ ಪರ ಐಪಿಎಲ್‌ನಲ್ಲಿ ಪಾಲ್ಗೊಳ್ಳಬೇಕೆಂಬ ಪೀಟರ್ಸನ್ ಆಸೆ ಕೂಡ ಕಮರಿಹೋಗಿದೆ. ಪೀಟರ್ ಸನ್ ಅವರು ಹಿಮ್ಮಡಿ ಗಾಯದಿಂದಾಗಿ ಐಪಿಎಲ್‌ ಕೂಡ ಮಿಸ್ ಮಾಡಿಕೊಳ್ಳಲಿದ್ದಾರೆ.

 ಲೈಸೆಸ್ಟರ್ ಶೈರ್ ವಿರುದ್ಧ ಸರ್ರೆ ಕೌಂಟಿ ತಂಡದ ಪರ 355 ರನ್ ಸ್ಕೋರ್ ಮಾಡಿದ ಬಳಿಕ ನಿಧಾನವಾಗಿ ನಡೆಯುತ್ತಿದ್ದ ಪೀಟರ್‌ಸನ್ ಹಿಮ್ಮಡಿ ಸ್ಕಾನ್ ಮಾಡಿದಾಗ ಗಾಯವಾಗಿರುವುದು ಪತ್ತೆಯಾಗಿದೆ. ಇದರಿಂದ ಪೀಟರ್‌ಸನ್ 2 ವಾರಗಳ ಕಾಲ ಆಡುವಂತಿಲ್ಲವಾದ್ದರಿಂದ ಐಪಿಎಲ್ ಪಂದ್ಯವನ್ನು ಮಿಸ್ ಮಾಡಿಕೊಂಡಿದ್ದಾರೆ. 

‌ಪೀಟರ್‌ಸನ್ ಶುಕ್ರವಾರ ಭಾರತಕ್ಕೆ ಪ್ರಯಾಣಿಸಿ ಸನ್ ರೈಸರ್ಸ್ ಪರ ರಾಯಲ್ ಚಾಲೆಂಜರ್ಸ್ ಮತ್ತು ಮುಂಬೈ ಇಂಡಿಯನ್ಸ್ ವಿರುದ್ಧ ಆಡಬೇಕಿತ್ತು. ಆದರೆ ಗಾಯವಾಗಿರುವುದರಿಂದ ಐಪಿಎಲ್ ಕೂಡ ಅವರಿಗೆ ಮಿಸ್ ಆಗಿದೆ. ಈಗ ಪೀಟರ್‌ಸನ್ ಜುಲೈನಲ್ಲಿ ಕ್ಯಾರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡುವುದಕ್ಕೆ ಗಮನ ವಹಿಸಿದ್ದು, ಅಲ್ಲಿ ಸೇಂಟ್ ಲೂಸಿಯಾ ಜೌರ್ಸ್ ಪರ ಆಡಲಿದ್ದಾರೆ. 

Share this Story:

Follow Webdunia kannada