Select Your Language

Notifications

webdunia
webdunia
webdunia
webdunia

ಮಂಡಿ ಗಾಯ: ಮಹಮ್ಮದ್ ಶಮಿ ಐಪಿಎಲ್‌ನಲ್ಲಿ ಆಡುತ್ತಿಲ್ಲ

ಮಂಡಿ ಗಾಯ: ಮಹಮ್ಮದ್ ಶಮಿ ಐಪಿಎಲ್‌ನಲ್ಲಿ  ಆಡುತ್ತಿಲ್ಲ
ನವದೆಹಲಿ , ಗುರುವಾರ, 16 ಏಪ್ರಿಲ್ 2015 (15:51 IST)
ಭಾರತದ ವೇಗಿ ಮಹಮ್ಮದ್ ಶಮಿ ಮಂಡಿ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಅವರು ಈ ಬಾರಿಯ ಇಡೀ ಐಪಿಎಲ್ ಕ್ರಿಕೆಟ್ ಸರಣಿಯಲ್ಲಿ ಆಡುವುದಿಲ್ಲ. ವಿಶ್ವಕಪ್‌ನಲ್ಲಿ ಮನೋಜ್ಞ ಬೌಲಿಂಗ್ ಪ್ರದರ್ಶನ ನೀಡಿ 18 ವಿಕೆಟ್ ಕಬಳಿಸಿದ್ದ ಶಮಿ ಅವರಿಗೆ ಮಂಡಿ ಗಾಯದ ಸಮಸ್ಯೆಯಿದ್ದು, ವಿಶ್ವಕಪ್‌‌ನಲ್ಲಿ ಯುಎಇ ವಿರುದ್ಧ ವಿಶ್ರಾಂತಿ ನೀಡಲಾಗಿತ್ತು ಮತ್ತು ಅವರ ಬದಲಿಗೆ ಭುವನೇಶ್ವರ್ ಕುಮಾರ್ ಆಡಿದ್ದರು.

ಶಮಿ ಪಂದ್ಯಾವಳಿಯ ಹೊರಗಿದ್ದಾರೆ. ಅವರು ಶಸ್ತ್ರಚಿಕಿತ್ಸೆಗೆ ಹೋಗುವ ಸಾಧ್ಯತೆಯಿದ್ದು, ಚೇತರಿಕೆಗೆ ಇನ್ನೂ 2 ತಿಂಗಳು ಬೇಕಾಗುತ್ತದೆ ಎಂದು ಹೆಸರು ಹೇಳಲು ಬಯಸದ ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  

ಶಮಿ ಅವರನ್ನು ಡೆಲ್ಲಿ ಡೇರ್ ಡೇವಿಲ್ಸ್ ಖರೀದಿಸಿದ್ದು, ಅವರು ಆಡಿದ್ದರೆ ಡೆಲ್ಲಿ ಬೌಲಿಂಗ್ ಶಕ್ತಿಗೆ ಇನ್ನಷ್ಟು ಬಲ ತುಂಬುವ ಸಾಧ್ಯತೆಯಿತ್ತು. 
 

Share this Story:

Follow Webdunia kannada